ಬನಶಂಕರಿದೇವಿ ಜಾತ್ರೆ: ಪರಸ್ಪರ ಹೆಗಲು ಕೊಟ್ಟು ಹೆಜ್ಜೆ ಹಾಕಿದ ಕುದುರೆ-ಎತ್ತಿನ ಜೋಡಿ

ಬಾಗಲಕೋಟೆ: ಕ್ಷಣ ಕ್ಷಣಕ್ಕೂ ಕುತೂಹಲ.. ನೋಡುತ್ತಲೇ ಮೈಮರೆಯುವಷ್ಟು ರೋಮಾಂಚನ. ಯಾವ ಜೋಡಿ ಖದರ್ ತೋರಿಸುತ್ತೆ ಅನ್ನೋ ಗೊಂದಲ. ಯಾಕಂದ್ರೆ ಅಲ್ಲಿದ್ದ ಸ್ಪೆಷಲ್ ಜೋಡಿಗಳು ಕಮಾಲ್ ಮಾಡಿದ್ವು. ರೋಡಿಗಿಳಿದಿದ್ದೇ ತಡ ಧೂಳೆಬ್ಬಿಸಿ ನುಗ್ಗಿದ್ವು. ಈ ಓಟದಲ್ಲಿ ಇನ್ನೊಂದು ಮೇನ್ ಹೈಲೆಟ್ ಏನ್ ಗೊತ್ತಾ. ಕುದುರೆ ಹಾಗೂ ಎತ್ತಿನ ಜೋಡಿ. ಎರಡೂ ಸಹ ಪರಸ್ಪರ ಹೆಗಲು ಕೊಟ್ಟು ಹೆಜ್ಜೆ ಹಾಕ್ತಿದ್ರೆ ಎಲ್ಲರ ಕಣ್ಣು ಅವುಗಳನ್ನೇ ಹಿಂಬಾಲಿಸಿತ್ತು.

ಬನಶಂಕರಿ ದೇವಿ ಜಾತ್ರಾ ಪ್ರಯುಕ್ತ ಬಂಡಿ ಓಟ:
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸುಳಿಬಾವಿ ಗ್ರಾಮದಲ್ಲಿ ಬನಶಂಕರಿದೇವಿ ಜಾತ್ರಾ ಪ್ರಯುಕ್ತ ಬಂಡಿ ಓಟ ಆಯೋಜಿಸಲಾಗಿತ್ತು. ಜೋಡೆತ್ತಿನ ಬಂಡಿ ಓಟ, ಕುದುರೆ ಎತ್ತು ಜೋಡಿಯ ಬಂಡಿ ಹಾಗೂ ಜೋಡು ಕುದುರೆ ಬಂಡಿ ಓಟ ಸ್ಪರ್ಧೆ ನಡೆಯಿತು. ಬಾಗಲಕೋಟೆ, ಬೆಳಗಾವಿ, ವಿಜಯಪುರ ಸೇರಿದಂತೆ ಹಲವು ಭಾಗಗಳಿಂಧ ಸ್ಪರ್ಧಿಗಳು ಭಾಗಿಯಾಗಿದ್ರು. ಮೊದಲು ಕುದುರೆ ಮತ್ತು ಎತ್ತಿನ ಜೋಡಿ ಬಂಡಿ ಓಟ ನಡೆಯಿತು. ಈ ವೇಳೆ ಯುವಕರು ಬೈಕ್ ಏರಿ ಅವುಗಳ ಹಿಂದೆ ಸಾಗಿ ಹುರಿದುಂಬಿಸಿದ್ರು.

ಎಲ್ಲರ‌ ಗಮನ ಸೆಳೆದ ಬಂಡಿ ಓಟ: 
ಇನ್ನು ಸುಳಿಬಾವಿ ಗ್ರಾಮದಲ್ಲಿ ಪ್ರತಿವರ್ಷ ಬನಶಂಕರಿದೇವಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತೆ. ನಾಲ್ಕು ದಿನಗಳ ಜಾತ್ರೆಯಲ್ಲಿ ಒಂದೊಂದು ದಿನವೂ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತೆ. ಪ್ರತೀ ಬಾರಿ ವಿವಿಧ ಗ್ರಾಮೀಣ ಕ್ರೀಡೆಗಳನ್ನ ಆಡಿಸಲಾಗುತ್ತೆ. ಅದ್ರಲ್ಲೂ ಈ ಬಾರಿ ಬಂಡಿ ಓಟದ ಸ್ಪರ್ಧೆ ಎಲ್ಲರ‌ ಗಮನ ಸೆಳೆಯಿತು. ಐದು ಕಿಲೋ ಮೀಟರ್ ತೆರಳಿ ವಾಪಸ್ ಬರುವ ಸ್ಪರ್ಧೆಯಲ್ಲಿ ಯಾವ ಜೋಡಿ ಮೊದಲು ಬರುತ್ತದೆಯೋ ಆ ಜೋಡಿಗೆ ಬಹುಮಾನ ನಿಗದಿ ಮಾಡಲಾಗಿತ್ತು.

ಜೋಡೆತ್ತಿನ‌ ಬಂಡಿ ಓಟದಲ್ಲಿ ಫಸ್ಟ್ ಬಂದವ್ರಿಗೆ 15 ಸಾವಿರ, ಕುದುರೆ ಮತ್ತು ಎತ್ತಿನ ಜೋಡಿಯಲ್ಲಿ ಮೊದಲು ಬಂದವ್ರಿಗೆ 7ಸಾವಿರ ನೀಡಲಾಯ್ತು. ಹಳ್ಳಿ ಕ್ರೀಡೆಗಳ ಗಮ್ಮತ್ತೇ ಹಾಗೇ. ಅಲ್ಲಿ ಸಾಹಸದ ಜೊತೆ ಥ್ರಿಲ್ ಕೊಡೋ ನೋಟವೂ ಇರುತ್ತೆ. ಸದ್ಯ ಬಾಗಲಕೋಟೆಯಲ್ಲಿ ನಡೆದ ಈ ಬಂಡಿ ಓಟದ ಸ್ಪರ್ಧೆ ಕೂಡ ಸಖತ್ ಮಜಾ ಕೊಟ್ಟಿತ್ತು.

Related Posts :

Category:

error: Content is protected !!