ಗೂಗಲ್​ನಲ್ಲೂ Coronavirusನದ್ದೇ ಆರ್ಭಟ: ಎಷ್ಟು ಬಾರಿ ಚೆಕ್ ಮಾಡಿದ್ದಾರೆ ಗೊತ್ತಾ?

ಇಂಟರ್​ನೆಟ್ ಆಧಾರದಲ್ಲಿಯೂ ಕೊರೊನಾ ವೈರಸ್ ಹರಡುವಿಕೆ ಜಗತ್ತಿನಾದ್ಯಂತ ವ್ಯಾಪಕವಾಗಿದೆ. ಗೂಗಲ್ ಸರ್ಚ್ ಇಂಜಿನ್​ನಲ್ಲಿ Coronavirusಹುಡುಕಾಟ ಹತ್ತು ಅಂಕಿಗಳನ್ನು ದಾಟಿದೆ. ಅಂದರೆ 3,26,00,00,000 ಇಷ್ಟಿದೆ. ಇದುವರೆಗೆ ಯಾವುದೇ ಪದ, ವಿಷಯಕ್ಕೆ ಸಂಬಂಧಿಸಿದಂತೆ ಇದು ಅತಿ ಹೆಚ್ಚಿನ ಹುಡುಕಾಟವಾಗಿದೆ. ಇನ್ನು ಗೂಗಲ್ ಸಹ ಕೊರೊನಾ ವೈರಸ್ ಬಗ್ಗೆ ಕ್ಷಣ ಕ್ಷಣದ ಪಕ್ಕಾ ಮಾಹಿತಿಯನ್ನು ನೀಡುತ್ತಿದ್ದು ಸಮಗ್ರ ಚಿತ್ರಣವನ್ನು ಬಿಂಬಿಸುತ್ತಿದೆ. ಎಲ್ಲೆಲ್ಲಿ ಯಾವ ಪ್ರಮಾಣದಲ್ಲಿ ಕೊರೊನಾ ವೈರಸ್ ಸೋಂಕಿದೆ ಎಂಬುದನ್ನೂ ಬಿತ್ತರಿಸುತ್ತಿದೆ. ಭಾರತದ ಚಿತ್ರಣವೂ ಇದರಲ್ಲಿ ಕರಾರುವಕ್ಕಾಗಿ ದಾಖಲಾಗಿದೆ.

According to Google ಭಾರತದಲ್ಲಿ 44 ಪ್ರಕರಣಗಳಿವೆ. ಇನ್ನು ಸುತ್ತಮುತ್ತಲ ದೇಶಗಳಲ್ಲಿ ಶ್ರೀಲಂಕಾದಿಂದ ಹಿಡಿದು ಶ್ರೀಲಂಕಾ 1, ಮಾಲ್ಡೀವ್ಸ್​ 6, ಕೊಲ್ಲಿ ರಾಷ್ಟ್ರಗಳಲ್ಲಿ 160, ಪಾಕಿಸ್ತಾನದ 16, ಅಫ್ಘಾನಿಸ್ತಾನ 4, ನೇಪಾಳ 1, ಭೂತಾನ್ 1, ಅದರಾಚೆಗೆ ಕೆಂಪು ಪೆಡಂಭೂತ ಚೀನಾದಲ್ಲಿ 81 ಸಾವಿರ, ನೆರೆಯ ಬಾಂಗ್ಲಾದೇಶದಲ್ಲಿ 3 ಪ್ರಕರಣಗಳು ಪತ್ತೆಯಾಗಿದೆ. ಜಗತ್ತಿನಾದ್ಯಂತ ಅಂದರೆ 100 ರಾಷ್ಟ್ರಗಳಿಗೆ ಸೀಮಿತವಾಗಿ ಕೊರೊನಾ ವೈರಸ್ ಪ್ರಕರಣಗಳು 1.2 ಲಕ್ಷ ದೃಢಪಟ್ಟಿವೆ. ಸತ್ತವರ ಸಂಖ್ಯೆ 4 ಸಾವಿರ ದಾಟಿದೆ.Related Posts :

Category:

error: Content is protected !!