ನೋಡಲು ಚೆನ್ನಾಗಿಲ್ಲವೆಂದು ಪತ್ನಿ ಮೇಲೆ ರಾಡ್​ನಿಂದ ಹಲ್ಲೆ

ಬೆಂಗಳೂರು: ಹೆಂಡತಿ ನೋಡಲು ಚೆನ್ನಾಗಿಲ್ಲವೆಂದು ಆರೋಪಿಸಿ ಪತ್ನಿಯನ್ನೇ ಪತಿ ಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರದ ಮಾರೇನಹಳ್ಳಿಯಲ್ಲಿ ನಡೆದಿದೆ. ಪತ್ನಿ ವಿಜಯಲಕ್ಷ್ಮೀ ಮೇಲೆ ಪತಿ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ.

1 ವರ್ಷದ ಹಿಂದೆ ಶಶಿಕುಮಾರ್, ವಿಜಯಲಕ್ಷ್ಮೀ ಮದುವೆಯಾಗಿದ್ದರು. ನಂತರ 6 ತಿಂಗಳವರೆಗೆ ಅನ್ಯೋನ್ಯವಾಗಿ ದಾಪತ್ಯ ಜೀವನ ಸಾಗಿಸಿದ್ದರು. ಆದರೆ 6 ತಿಂಗಳ ನಂತರ ಪತಿ ಶಶಿಕುಮಾರ್ ವರಸೆ ಬದಲಿಸಿದ್ದಾನೆ. ನೀನು ನೋಡಲು ಚೆನ್ನಾಗಿಲ್ಲ, ನಾನು ಬೇರೆ ವಿವಾಹವಾಗ್ಬೇಕು ಎಂದು ಕಿರುಕುಳ ನೀಡಿದ್ದಾನೆ.

ನಿರಂತರವಾಗಿ ಹೆಂಡತಿಗೆ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆ ವಿಜಯಲಕ್ಷ್ಮೀ ಮನೆಬಿಟ್ಟು ತವರು ಮನೆ ಸೇರಿದ್ದಾಳೆ. ವಿಜಯಲಕ್ಷ್ಮೀ ಪೋಷಕರು ಇಬ್ಬರನ್ನೂ ಕೂರಿಸಿ ಬುದ್ಧಿ ಮಾತು ಹೇಳಿದ್ದಾರೆ. ನಂತರ ಪತಿ ಶಶಿಕುಮಾರ್​ ಜತೆ ವಿಜಯಲಕ್ಷ್ಮೀ ಮನೆಗೆ ಬಂದಿದ್ದಾಳೆ.

ಪತ್ನಿಗೆ ಗೊತ್ತಾಗದಂತೆ ಪತಿ ವಿಚ್ಛೇದನ ಅರ್ಜಿ ಹಾಕಿದ್ದಾನೆ. ವಿಚ್ಛೇದನ ಅರ್ಜಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾನೆ. ಸಹಿಮಾಡಲು ನಿರಾಕರಿಸಿದ್ದಕ್ಕೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿ ನೀನು ಸತ್ತರೆ ನಾನು ಬೇರೆ ಮದುವೆಯಾಗುತ್ತೇನೆಂದಿದ್ದಾನೆ. ಸದ್ಯ ಪತಿ ಶಶಿಕುಮಾರ್ ಹಲ್ಲೆಮಾಡಿರುವುದಾಗಿ ಪತ್ನಿ ವಿಜಯಲಕ್ಷ್ಮೀ ಆರೋಪಿಸಿದ್ದು, ಗಾಯಾಳು ವಿಜಯಲಕ್ಷ್ಮೀಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭದ್ರತೆ ನೀಡುವಂತೆ ಹಾಗೂ ಪತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!