ಜ್ವರದಿಂದ ನರಳಿದ್ದ ಮಗಳನ್ನೇ ಹತ್ಯೆಗೈದ ಪಾಪಿ ತಂದೆ!

ಹೈದರಾಬಾದ್: ಅಪ್ಪ.. ಈ ಮಾತಿನಲ್ಲೇ ಒಂದು ಶಕ್ತಿ ಇದೆ. ತಂದೆ ಅನ್ನೋ ಬಲ ಬೆನ್ನ ಹಿಂದಿದ್ರೆ ಆನೆಬಲ. ಅತ್ತಾಗ ಕಣ್ಣೀರೊರೆಸೋ. ಸೋತಾಗ ಕೈ ಹಿಡಿಯೋ. ಪರಿತಪಿಸಿದಾಗ ಪ್ರೀತಿಸೋ ದೇವ್ರು. ಹೆಣ್ಣು ಮಕ್ಕಳ ಪಾಲಿಗೆ ಹೀರೋ ಆಗಿರೋ ತಂದೆ ಇಲ್ಲಿ ಮಗಳ ಪಾಲಿಗೆ ವಿಲನ್ ಆಗಿದ್ದಾನೆ.

ಮಗಳನ್ನ ಕತ್ತು ಹಿಸುಕಿ ಕೊಂದ ಕ್ರೂರಿ ತಂದೆ!
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಸದಾಶಿವ ಪೇಟ್ ಗ್ರಾಮದ ನಿವಾಸಿ ರೇಣುಕಾ ಬೇರೆ ಊರೊಂದರಲ್ಲಿ ಹಾಸ್ಟೆಲ್​​​ನಲ್ಲಿ ಇದ್ದುಕೊಂಡೆ ಸ್ಕೂಲ್​ಗೆ ಹೋಗ್ತಿದ್ಲು. ಕೆಲ ದಿನಗಳ ಹಿಂದಷ್ಟೇ ಮಗಳು ರೇಣುಕಾಳನ್ನ ರವಿ ನಾಯ್ಕ ಊರಿಗೆ ಕರ್ಕೊಂಡು ಬಂದಿದ್ದ. ಆದ್ರೆ, ಆಕೆಗೆ ಜ್ವರ ಏನೋ ಬಂದಿತ್ತಂತೆ. ಇದ್ರಿಂದ ರೊಚ್ಚಿಗೆದ್ದ ಕ್ರೂರಿ ತಂದೆ ಆಕೆಯನ್ನ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ.

ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ, ಅನಾರೋಗ್ಯಕ್ಕೆ ತುತ್ತಾಗಿದ್ದ ಮಗಳು ರೇಣುಕಾಗೆ ಚಿಕಿತ್ಸೆ ಕೊಡಿಸೋಕೆ ರವಿ ನಾಯ್ಕನ ಬಳಿ ದುಡ್ಡಿರ್ಲಿಲ್ವಂತೆ. ಕಳೆದ ವರ್ಷ ಇದೇ ರೀತಿ ಆಕೆಗೆ ಜ್ವರ ಬಂದಾಗ 20 ಸಾವಿರ ರೂಪಾಯಿ ಖರ್ಚು ಮಾಡಿದ್ನಂತೆ. ಆದ್ರೆ ಹಣ ಖರ್ಚು ಮಾಡೋಕೆ ಆಗದೆ ಮಗಳನ್ನ ಕತ್ತು ಹಿಸುಕು ಕೊಂದಿದ್ದಾನೆ. ಬಳಿಕ ಮಗಳ ರೇಣುಕಾ ಅನಾರೋಗ್ಯದಿಂದ ಸತ್ತಿರೋದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡೋಕೆ ಹೊರಟಾಗ ಕ್ರೂರಿ ತಂದೆಯ ಅಸಲಿ ಮುಖವಾಡ ಬಯಲಾಗಿದೆ.

ಒಟ್ನಲ್ಲಿ ಕೆಲವರು ಮಕ್ಕಳಿಲ್ಲ ಅನ್ನೋ ಕೊರೊಗಿನಲ್ಲಿ ಕರಗಿ ಹೋಗ್ತಿದ್ದಾರೆ. ಆದ್ರೆ, ಮುದ್ದಾದ ಮಗಳಿಗೆ ಚಿಕಿತ್ಸೆ ಕೊಡಿಸೋದು ಬಿಟ್ಟು ಆಕೆಯನ್ನ ತಂದೆಯೇ ಕೊಲೆ ಮಾಡಿರೋದು ಎಲ್ಲರನ್ನ ಬೆಚ್ಚಿ ಬೀಳಿಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!