ಹೈದರಾಬಾದ್​ಗೂ ಕಾಲಿಡ್ತಾ ಕೊರೆೊನಾ? ಆಸ್ಪತ್ರೆ ಎದುರು DHO ಆತ್ಮಹತ್ಯೆಗೆ ಯತ್ನಿಸಿದ್ದೇಕೆ?

, ಹೈದರಾಬಾದ್​ಗೂ ಕಾಲಿಡ್ತಾ ಕೊರೆೊನಾ? ಆಸ್ಪತ್ರೆ ಎದುರು DHO ಆತ್ಮಹತ್ಯೆಗೆ ಯತ್ನಿಸಿದ್ದೇಕೆ?

ಹೈದರಾಬಾದ್​: ಯಾರ್​ ಏನ್ ಹೇಳಿದ್ರು ಡೋಂಟ್​​ಕೇರ್.. ಯಾರ್​ ಮನವೊಲಿಸಿದ್ರು ನೋ ಫಿಯರ್.. ಬರ್ಬೇಡ ಹತ್ತಿರ ಬರ್ಬೇಡ ಅನ್ನೋ ಟಾಕ್.. ಕೈಯಲ್ಲೊಂದು ಲೈಟ್ರು ಬೇರೆ.. ಶರ್ಟ್​​ನೊಳಗೆ ಪೆಟ್ರೋಲ್ ಬಾಟಲಿಗಳನ್ನ ಇಟ್ಕೊಂಡು ಓಡಾಡ್ತಿದ್ದಾನೆ. ಅತ್ತಿತ್ತ ನೋಡೋದ್ರೊಳಗೆ ಪೊಲೀಸ್ರು ವ್ಯಕ್ತಿಯನ್ನ ಕಾರಿನೊಳಕ್ಕೆ ತುಂಬೇ ಬಿಟ್ರು. ಹರಸಾಹಸ ಪಟ್ಟು ಅನಾಹುತ ತಪ್ಪಿಸಿಯೇ ಬಿಟ್ರು.

ಹೈದ್ರಾಬಾದ್​​​ನ ಗಾಂಧಿ ಆಸ್ಪತ್ರೆ ಎದುರು ಆತ್ಮಹತ್ಯೆ ಮಾಡಿಕೊಳ್ಳೋಕೆ ಹೊರಟಿರೋ ಇವ್ರು ಬೇರಾರೂ ಅಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಸಂತ. ಸೂಸೈಡ್​​ಗೆ ಮುಂದಾಗಿರೋದಕ್ಕೆ ಕಾರಣ ಅದೇ ಡೆಡ್ಲಿ ಕೊರೊನಾ ವೈರಸ್.

ಹೈದರಾಬಾದ್​​​ ಗಾಂಧಿ ಆಸ್ಪತ್ರೆ ಬಳಿ ಆತ್ಮಹತ್ಯೆ ಹೈಡ್ರಾಮಾ?
, ಹೈದರಾಬಾದ್​ಗೂ ಕಾಲಿಡ್ತಾ ಕೊರೆೊನಾ? ಆಸ್ಪತ್ರೆ ಎದುರು DHO ಆತ್ಮಹತ್ಯೆಗೆ ಯತ್ನಿಸಿದ್ದೇಕೆ?ಯೆಸ್​.. ಈ ಹೈಡ್ರಾಮಕ್ಕೆ ಕಾರಣವಾಗಿರೋ ಕೊರೊನಾ ವೈರಸ್. ಚೀನಾದಿಂದ ನೆಗೆದು ಬಂದಿರೋ ಡೆಡ್ಲಿ ಕೊರೊನಾ ಇದೀಗ ಕೇರಳ ಆಯ್ತು. ಹೈದರಾಬಾದ್​​ಗೂ ಕಾಲಿಟ್ಟಿದೆ ಅನ್ನೋ ಶಾಕಿಂಗ್ ವಿಚಾರ ಓಡಾಡ್ತಿದೆ. ಆದ್ರಲ್ಲೂ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿರೋ ವ್ಯಕ್ತಿಯೊಬ್ರಿಗೆ ಕೊರೊನಾ ಸೋಂಕು ಪಾಸಿಟೀವ್ ಬಂದಿದೆಯಂತೆ. ಆದ್ರೆ, ಈ ವಿಷ್ಯವನ್ನ ಮುಚ್ಚಿಡುವಂತೆ ಗಾಂಧಿ ಆಸ್ಪತ್ರೆ ಹಿರಿಯ ಅಧಿಕಾರಿಗಳು ಹೇಳಿದ್ರಂತೆ.

ಅಲ್ದೇ ಮಾಧ್ಯಮಗಳಲ್ಲಿ ಸುದ್ದಿಯಾಗದಂತೆ ಸೀಕ್ರೇಟ್ ಮೆಂಟೈನ್​ ಮಾಡುವಂತೆ ಸೂಚಿಸಿದ್ರಂತೆ. ಆದ್ಯಾವಾಗ ಮಾಧ್ಯಮಗಳಲ್ಲಿ ಈ ವಿಚಾರ ಸುದ್ದಿಯಾಯ್ತೋ ಡಿಹೆಚ್​​ಒ ವಸಂತ ಅವರನ್ನ ವಿಭಾಗೀಯ ಅಧಿಕಾರಿ ದಿಢೀರ್ ವರ್ಗಾವಣೆ ಮಾಡಿದ್ದಾರೆ. ಇದ್ರಿಂದ ನೊಂದಿರೋ ಡಿಹೆಚ್​ಒ ವಸಂತ ಆಸ್ಪತ್ರೆ ಬಳಿಯೇ ಪೆಟ್ರೋಲ್​ ಶರ್ಟ್​ನೊಳಕ್ಕೆ ಇಟ್ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ರು.

ರೋಗಿಗೆ ಕೊರೊನಾ ತಗುಲಿದ್ರೂ ಮುಚ್ಚಿಟ್ರಾ ವೈದ್ಯರು?
ಅದ್ಯಾವಾಗ ಡಿಹೆಚ್​​ಒ ವಸಂತ್ ಶರ್ಟ್​​​​ನೊಳಗೆ ಪೆಟ್ರೋಲ್ ಬಾಟಲಿ ಇಟ್ಕೊಂಡು ಆತ್ಮಹತ್ಯೆಗೆ ರೆಡಿಯಾದ್ರೋ ಪೊಲೀಸ್ರು ಕೂಡ ಸ್ಥಳಕ್ಕಾಗಮಿಸಿದ್ರು. ವ್ಯಕ್ತಿ ಕೈಯಲ್ಲಿದ್ದ ಲೈಟರ್, ಪೆಟ್ರೋಲ್ ಬಾಟ್ಲಿ ಕಿತ್ಕೊಂಡು ಆತ್ಮಹತ್ಯೆ ಅನಾಹುತ ತಪ್ಪಿಸಿದ್ರು.

ಇನ್ನು, ಈ ಡಾಕ್ಟರ್ ಮಾಡ್ತಿರೋ ಶಾಕಿಂಗ್ ವಿಚಾರಕ್ಕೆ ಇಡೀ ದೇಶಕ್ಕೆ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಚೀನಾದಿಂದ ನಮ್ಮ ನೆಲಕ್ಕೂ ಕಾಲಿಟ್ಟಿರೋ ಕಿಲ್ಲರ್ ವೈರಸ್ ವಿಚಾರವನ್ನ ಗಾಂಧಿ ಆಸ್ಪತ್ರೆ ವೈದ್ಯರು ಮುಚ್ಚಿಟ್ರಾ? ಅಷ್ಟಕ್ಕೂ ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿದ್ದಾರಾ ಹೀಗೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ.ಇನ್ನೊಂದೆಡೆ ಆರೋಗ್ಯ ಇಲಾಖೆ ಅಧಿಕಾರಿ ಮಾಡ್ತಿರೋ ಆರೋಪ ನಿಜನಾ, ಸುಳ್ಳಾ ಅನ್ನೋದು ತನಿಖೆಯಿಂದ ಬಯಲಾಗ್ಬೇಕಿದೆ.

, ಹೈದರಾಬಾದ್​ಗೂ ಕಾಲಿಡ್ತಾ ಕೊರೆೊನಾ? ಆಸ್ಪತ್ರೆ ಎದುರು DHO ಆತ್ಮಹತ್ಯೆಗೆ ಯತ್ನಿಸಿದ್ದೇಕೆ?

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!