ನಾನು ಹಲವು ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ -ಮೊಹಮ್ಮದ್ ಶಮಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್​ಪೂತ್ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದು ಇನ್ನು ಹಸಿಯಾಗೇ ಇದೆ. ಕೆಲವರು ಬಾಲಿವುಡ್​ನಲ್ಲಿ ಸುಶಾಂತ್​ಗಾದ ತಾರತಮ್ಯದ ವಿರುದ್ಧ ಧ್ವನಿಯೆತ್ತಿದ್ರೆ, ಇನ್ನು ಕೆಲವರು ತಾವೂ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಮುಂದಾಗಿದ್ವಿ ಅನ್ನೋ ಸಂಗತಿಯನ್ನ ಬಿಚ್ಚಿಡುತ್ತಿದ್ದಾರೆ. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನಾನು ಕೂಡ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೇ ಅನ್ನೋ ಸಂಗತಿಯನ್ನ ಬಾಯ್ಬಿಟ್ಟಿದ್ದಾರೆ.

ನಿಜ.. ಸಂದರ್ಶನವೊಂದರಲ್ಲಿ ಮಾತನಾಡೋ ವೇಳೆ ಶಮಿ, ಈ ವಿಚಾರವನ್ನ ಬಾಯ್ಬಿಟ್ಟಿದ್ದಾರೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಾಗ, ನನ್ನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿ ಬಂದಾಗ, ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನಿಸಿತ್ತು ಎಂದಿದ್ದಾರೆ.

ಆದ್ರೆ ಆ ಸಮಯದಲ್ಲಿ ನನ್ನ ಮನೆಯವರು ಧೈರ್ಯ, ಪ್ರೋತ್ಸಾಹ ನೀಡಿದ್ದರಿಂದ, ನಾನು ಅಂತಹ ಯೋಚನೆಗಳಿಂದ ಹೊರಬಂದೆ. ಜೊತೆಗೆ ಟೀಮ್ ಇಂಡಿಯಾ ಆಟಗಾರರು ಕೂಡ ನನ್ನ ಬೆಂಬಲವಾಗಿ ನಿಂತರು ಎಂದು ಶಮಿ, ತಾವು ಖಿನ್ನತೆಯಿಂದ ಹೊರಬಂದದ್ದು ಹೇಗೆ ಅನ್ನೋದನ್ನ ವಿವರಿಸಿದ್ದಾರೆ.

ಖಿನ್ನತೆ ಎನ್ನುವುದು ತುಂಬಾ ಕೆಟ್ಟದ್ದು. ಖಿನ್ನತೆಗೊಳಗಾದಾಗ ಸರಿಯಾದ ಕೌನ್ಸಿಲಿಂಗ್ ಹಾಗೂ ಆತ್ಮೀಯರ ಜೊತೆಗೆ ಹಂಚಿಕೊಳ್ಳಬೇಕು. ಇದರಿಂದ ಆತ್ಮಹತ್ಯೆಯ ಯೋಚನೆ ಬಿಟ್ಟು ನಮಗಾಗಿ, ನಮ್ಮವರಿಗಾಗಿ ಬದುಕಬೇಕು ಅನ್ನಿಸುತ್ತೆ. ನನ್ನ ವಿಷಯದಲ್ಲಿ ನನ್ನ ಮನೆಯವರು ನೀನು ಯಾವತ್ತೂ ಒಂಟಿಯಲ್ಲ. ನಿನಗೆ ನಾವೆಲ್ಲಾ ಇದ್ದೇವೆ ಎಂದು ಧೈರ್ಯ ಹೇಳಿದ್ರು. ನಮ್ಮ ಸುತ್ತಾ ನಮ್ಮನ್ನು ಪ್ರೀತಿಸುವವರು ಇದ್ದಾಗ ನಮಗೆ ಖಿನ್ನತೆ ಕಾಡುವುದಿಲ್ಲ ಎಂದು ಶಮಿ ಹೇಳಿದ್ದಾರೆ.

ಟೀಮ್ ಇಂಡಿಯಾದ ಪ್ರಮಖ ವೇಗಿಯಾಗಿರೋ ಶಮಿ ವಿರುದ್ಧ ಕಳೆದ ವರ್ಷ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿಬಂದಿದ್ದವು. ಶಮಿ ಮಾಜಿ ಪತ್ನಿ ಹಸಿನ್ ಜುಹನ್ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು. ಇದಕ್ಕೂ ಮೊದಲು ಶಮಿ ವಿರುದ್ಧ ಮಾನಸಿನ ದೌರ್ಜನ್ಯ ಆರೋಪ ಹೊರಿಸಿದ್ದರು.

Related Posts :

Category:

error: Content is protected !!

This website uses cookies to ensure you get the best experience on our website. Learn more