ಐಎಂಎ ಆರೋಪಿ ನಿಗೂಢ ಸಾವು, ನೇಣುಬಿಗಿದ ಸ್ಥಿತಿಯಲ್ಲಿ ಐಎಎಸ್ ಅಧಿಕಾರಿ ಶವ ಪತ್ತೆ

ಬೆಂಗಳೂರು: ಐಎಂಎ.. ಈ ಹೆಸರು ಕೇಳದವರಿಲ್ಲ.. ಕೋಟಿ ಕೋಟಿ ಜನರಿಗೆ ಮೋಸ ಮಾಡಿ.. ಕಂಡೋರ ದುಡ್ಡಲ್ಲಿ ಕುಬೇರನಾಗಿ ಮೆರೆದು.. ಬಡವರ ಹಣದಲ್ಲೇ ದುನಿಯಾ ಮಾಡಿದ್ದ ಕೇಸ್ ಇದು. ದೇಶದ ಉದ್ದಗಲಕ್ಕೂ ಸದ್ದು ಮಾಡಿ ತಣ್ಣಗಾಗಿದ್ದ ಬಹುಕೋಟಿ ವಂಚನೆ ಕೇಸ್​​ ಇದೀಗ ಮತ್ತೆ ಸುದ್ದಿಯಾಗಿದೆ. ಯಾಕಂದ್ರೆ, ಐಎಂಎ ಕೇಸ್​​ನಲ್ಲಿ ಕಿಕ್​​​ ಬ್ಯಾಕ್ ಆರೋಪ ಹೊತ್ತಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಜಯ್ ಶಂಕರ್ ಸಾವಿನ ಸುತ್ತ ಅನುಮಾನಗಳ ಹುತ್ತ!?
ಯೆಸ್.. ವಿಜಯಶಂಕರ್.. IAS ಅಧಿಕಾರಿಯಾಗಿ. ಸಿಲಿಕಾನ್ ಸಿಟಿ ಬೆಂಗಳೂರಿನ ಡಿಸಿಯಾಗಿ ಕಾರ್ಯನಿರ್ವಹಿಸಿದ್ರು. ಐಎಂಎ ಪ್ರಕರಣದಲ್ಲಿ ಹಿರಿಯ ಐಎಎಸ್​ ಆಫೀಸರ್ ವಿಜಯ್ ಶಂಕರ್ ದೊಡ್ಡ ಸುದ್ದಿಯಾಗಿದ್ರು. ಅದು ಅಂತಿಂಥಾ ಸುದ್ದಿಯಲ್ಲ.

ಐಎಂಎ ಜ್ಯುವೆಲ್ಲರ್ ಪ್ರಕರಣದಲ್ಲಿ 1.5 ಕೋಟಿ ಕಿಕ್​​ಬ್ಯಾಕ್​ ಆರೋಪ ಹೊತ್ತು ಜೈಲು ಕೂಡ ಸೇರಿ. ತಮ್ಮ ವೃತ್ತಿ ಬದುಕಿಗೆ ಕಪ್ಪುಚುಕ್ಕೆ ಇರಿಸಿಕೊಂಡಿದ್ರು. ಆದ್ರೀಗ ಐಎಂಎ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರೋವಾಗ್ಲೇ ಬಿ.ಎಂ.ವಿಜಯ್ ಶಂಕರ್ ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮನೆಯ ಮೇಲ್ಮಹಡಿಯಲ್ಲಿ ಐಎಎಸ್​​ ಅಧಿಕಾರಿ ವಿಜಯ್ ಶಂಕರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರ ಸಾವು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

ಹಾಗಿದ್ರೆ, ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ವಿಜಯಶಂಕರ್ ಹೆಸರು ಹೇಗೆ ತಳುಕು ಹಾಕಿಕೊಂಡಿತ್ತು. ಅವರು ಎದುರಿಸುತ್ತಿದ್ದ ಸಾಲು ಸಾಲು ಆರೋಪಗಳೇನು ಅನ್ನೋದನ್ನ ನೋಡೋದಾದ್ರೆ.
ಏನೇನ್ ಆರೋಪಗಳಿತ್ತು..?
ಇನ್ನು, ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿಜಯಶಂಕರ್, ಐಎಂಎ ಪರವಾಗಿ ವರದಿ ನೀಡಲು ಲಂಚ ಆರೋಪ ಹೊತ್ತಿದ್ರು. ಐಎಂಎ ಪ್ರಕರಣದ ತನಿಖೆ ಹೊತ್ತಿದ್ದ ಎಸ್​ಐಟಿ ಜುಲೈ 8, 2019ರಂದು ವಿಜಯ್​ ಶಂಕರ್ ಅವರನ್ನ ಬಂಧಿಸಿ ವಿಚಾರಣೆ ನಡೆಸಿತ್ತು. ಅಲ್ಲದೇ, ಐಎಂಎ ಕೇಸ್​ನಲ್ಲಿ ಪರಪ್ಪನ ಅಗ್ರಹಾ ಜೈಲು ಕೂಡ ವಿಜಯಶಂಕರ್ ಸೇರಿದ್ರು. ಐಎಎಂ ಕೇಸ್​​​ನಲ್ಲಿ ಲಂಚ ಸ್ವೀಕಾರ ಆರೋಪ ಹೊತ್ತಿದ್ರಿಂದ ಅವರನ್ನ ಸೇವೆಯಿಂದ ಸರ್ಕಾರ ಅಮಾನತು ಮಾಡಿತ್ತು.

ಬಳಿಕ ವಿಜಯ ಶಂಕರ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ರು. ಇದಾದ ಬಳಿಕ ಪ್ರಸ್ತುತ ಸಕಾಲ ಯೋಜನೆ ನಿರ್ದೇಶಕರಾಗಿ ವಿಜಯ್ ಶಂಕರ್ ಅವರನ್ನ ನೇಮಕ ಮಾಡಲಾಗಿತ್ತು. ಎಸ್​ಐಟಿ ತನಿಖೆ ಎದುರಿಸಿದ್ದ ವಿಜಯ್ ಶಂಕರ್​ಗೆ ಜೂನ್​​ 12ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ರು. ಆದ್ರೆ, ವಿಚಾರಣೆಗೆ ವಿಜಯ್ ಶಂಕರ್ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೆ ಸಿಬಿಐ ತಂಡ ನೋಟಿಸ್ ಕಳುಹಿಸಿತ್ತು. ಸಿಬಿಐ ಅಧಿಕಾರಿಗಳಿಂದ ಬಂಧನ ಭೀತಿಯನ್ನ ಕೂಡ ವಿಜಯ್ ಶಂಕರ್ ಎದುರಿಸುತ್ತಿದ್ರು ಎನ್ನಲಾಗಿದೆ.

ಬಂಧನ ಭೀತಿಯಿಂದ ಆತ್ಮಹತ್ಯೆಗೆ ಶರಣಾದ್ರಾ ವಿಜಯ್ ಶಂಕರ್?
ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ, ಇತ್ತೀಚೆಗಷ್ಟೇ ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆಯನ್ನ ಸಿಬಿಐ ಯಾವಾಗ ವಹಿಸಿಕೊಳ್ತೋ ವಿಜಯ್ ಶಂಕರ್ ಅವರಿಗೆ ಡವ ಡವ ಶುರುವಾಗಿತ್ತು. ಜೂನ್ 12ರಂದು ವಿಚಾರಣೆಗೆ ಹಾಜರಾಗಲು ವಿಜಯ್ ಶಂಕರ್​ಗೆ ಸಿಬಿಐ ನೋಟಿಸ್ ನೀಡಿದ್ರು ಹೋಗಿರ್ಲಿಲ್ವಂತೆ. ಅದ್ರಲ್ಲೂ ಐಎಂಎ ಪ್ರಕರಣದಿಂದ ಖಿನ್ನತೆಗೆ ಒಳಗಾಗಿದ್ರೂ ಎನ್ನಲಾಗಿದೆ. ಪದೇ ಪದೇ ವಿಚಾರಣೆ ಎದುರಿಸಿ ಕುಗ್ಗಿದ್ದರು. ಅಲ್ಲದೇ ಸಿಬಿಐನಿಂದ ಬಂಧನದ ಭೀತಿಯಿಂದಾಗಿ ಆತ್ಮಹತ್ಯೆಗೆ ಶರಣಾಗಿರ್ಬೋದು ಎನ್ನಲಾಗ್ತಿದೆ.

ವಿಜಯ್ ಶಂಕರ್ ಮೃತದೇಹ ಪರಿಶೀಲಿಸಿದ FSL ಟೀಂ!
ಇದೆಲ್ಲದರ ನಡುವೆ ಐಎಎಸ್ ಅಧಿಕಾರಿ ದಿಢೀರ್​ ಸಾವು ಅನುಮಾನ ಮೂಡಿಸಿರೋದ್ರಿಂದ ಜಯನಗರ ನಿವಾಸಕ್ಕೆ FSL ತಂಡ ಭೇಟಿ ನೀಡಿತ್ತು. ಘಟನಾ ಸ್ಥಳದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಪೊಲೀಸರ ಸಮ್ಮುಖದಲ್ಲೇ ವಿಜಯ್ ಶಂಕರ್ ಶವ ಪರಿಶೀಲಿಸಿದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಗೆ ವಿಜಯ್ ಶಂಕರ್ ಅವರ ಮೃದೇಹ ರವಾನಿಸಲಾಗಿದೆ. ಇನ್ನೊಂದೆಡೆ ವಿಜಯ್ ಶಂಕರ್ ಸಾವಿನ ಬಗ್ಗೆ ಮೈಕೋ ಲೇಔಟ್ ಎಸಿಪಿಗೆ ಸಹೋದರ ಲಿಖಿತ ದೂರು ನೀಡಿದ್ದಾರೆನ್ನಲಾಗಿದೆ. ವಿಜಯ್ ಶಂಕರ್ ಕುಟುಂಬಸ್ಥರೇ ಆತ್ಮಹತ್ಯೆ ಕೇಸ್ ದಾಖಲಿಸಿದ್ದಾರಂತೆ.

ಇಂದು ವಿಜಯ್​​ ಶಂಕರ್​​​​​​ ಮೃತದೇಹಕ್ಕೆ ಕೊವಿಡ್ ಟೆಸ್ಟ್!
ಇನ್ನೊಂದೆಡೆ ದೇಶದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಹೀಗಾಗಿ ಇಂದು ವೈದ್ಯಕೀಯ ಸಿಬ್ಬಂದಿ ವಿಜಯ್ ಶಂಕರ್ ಮೃತದೇಹದ ಕೊವಿಡ್ ಟೆಸ್ಟ್ ನಡೆಸಲಿದೆ. ಕೊವಿಡ್ ಟೆಸ್ಟ್​ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. FSL, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಪೊಲೀಸರು ತನಿಖೆ ಆರಂಭಿಸಲಿದ್ದಾರೆ.

ಒಟ್ನಲ್ಲಿ ಐಎಂಎ ಕೇಸ್​ನಲ್ಲಿ ಕಿಕ್ ಬ್ಯಾಕ್ ಕಳಂಕ ಹೊತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ದಿಢೀರ್ ಆತ್ಮಹತ್ಯೆಗೆ ಶರಣಾಗಿರೋದು ದೊಡ್ಡ ಶಾಕ್ ನೀಡಿದಂತಾಗಿದೆ. ವಿಜಯ್​ ಶಂಕರ್ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಹುಟ್ಟಿಕೊಳ್ತಿದೆ. ನಿಜವಾಗ್ಲೂ ವಿಜಯ್​ ಶಂಕರ್ ಆತ್ಮಹತ್ಯೆ ಮಾಡಿಕೊಂಡ್ರಾ?

ಖಿನ್ನತೆಗೆ ಒಳಗಾಗಿದ್ದು ನಿಜನಾ? ಸಿಬಿಐ ಬಂಧನದ ಭೀತಿಯಿಂದ ಈ ನಿರ್ಧಾರಕ್ಕೆ ಬಂದ್ರಾ? ಇಲ್ಲಾ ಬೆದರಿಕೆ ಕರೆಗಳೂ ಏನಾದ್ರೂ ಬಂದಿತ್ತಾ? ಅನ್ನೋದನ್ನ ಪೊಲೀಸರು ಜಾಲಾಡ್ತಿದ್ದಾರೆ. ಒಂದ್ಕಡೆ ಐಎಎಸ್ ಅಧಿಕಾರಿಯೊಬ್ಬರ ಸಾವು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟಿ ಹಾಕಿದ್ರೆ, ಅವರನ್ನ ಕಳೆದುಕೊಂಡು ಕುಟುಂಬ ಶಾಕ್ ಆಗಿದೆ. ಅದೇನೆ ಇರಲಿ ಒಬ್ಬ ಹಿರಿಯ ಐಎಎಸ್​ ಅಧಿಕಾರಿ ಸಾವು ಮೇಲ್ನೋಟಕ್ಕೆ ಆತ್ಮಹತ್ಯೆ ಅನ್ನಿಸಿದ್ರು ತನಿಖೆ ನಂತರ ಸತ್ಯ ಬಯಲಾಗಲಿದೆ.

Related Tags:

Related Posts :

Category:

error: Content is protected !!