Mask ಹಾಕದವರನ್ನು ಕೆಕ್ಕರಿಸಿಕೊಂಡು ನೋಡದಿರಿ! ಯಾಕೆ ಗೊತ್ತಾ?

ಕೊರೊನಾ ಕಾಲದಲ್ಲಿ ಮಾಸ್ಕ್ ಧರಿಸಿದವನೇ ಜಾಣ. ಉಳಿದವರೆಲ್ಲ ಮಹಾಮಾರಿಗೆ ಮುಕ್ತ ಆಹ್ವಾನ ನೀಡದಂತೆ ಎಂಬಂತಾಗಿದೆ. ಹಾಗಾಗಿ ಮಾಸ್ಕ್ ಹಾಕದ, ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರನ್ನು ಕಂಡರೆ ಉಳಿದವರು ಕೆಕ್ಕರಿಸಿಕೊಂಡು ನೋಡುವುದು ಸಾಮಾನ್ಯಾಗಿದೆ. ಈ ಮಧ್ಯೆ ಕೊರೊನಾಗೆ ಮೂಗುದಾರ ಹಾಕುವ ಭರದಲ್ಲಿ ಸರ್ಕಾರಗಳೂ ಸಹ ಅಂತಹವರನ್ನು ಹಿಡಿದು, ದಂಡ ಸಹ ವಿಧಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ಆದ್ರೆ ಇನ್ಮುಂದೆ ಹಾಗೆ ಮಾಡುವುದು ಕ್ಷೇಮಕರವಲ್ಲ ಎಂಬುದು ರುಜುವಾತಾಗತೊಡಗಿದೆ. ಯಾಕೆ ಮತ್ತು ಹೇಗೆ ಗೊತ್ತಾ?

ಮೊದಲು, ಇಲ್ಲೊಂದಷ್ಟು ಉದಾಹರಣೆಗಳಿವೆ.. ಗಮನಿಸಿ:
1) ಜಿಮ್ ಶಾಲೆಯಲ್ಲಿ ಮಾಸ್ಕ್ ಧರಿಸಿದ್ದ ಇಬ್ಬರು ಬಾಲಕರು ಕುಸಿದುಬಿದ್ದು ಸಾವು
2) ವೂಹಾನ್​ನಲ್ಲಿ ಜಾಗಿಂಗ್​ ಮಾಡ್ತಾ ನಾಲ್ಕಾರು ಕಿಮೀ ಓಡಿದ ವ್ಯಕ್ತಿ ಶ್ವಾಸಕೋಶ ಢಮಾರ್
3) ಮಾಸ್ಕ್​ ಧರಿಸಿ, ಎಸಿ ಕಾರು ಚಲಾಯಿಸುತ್ತಿದ್ದವ ಪ್ರಜ್ಞೆ ಕಳೆದುಕೊಂಡು ಮರಕ್ಕೆ ಡಿಕ್ಕಿ
ಇಂತಹ ಉದಾಹರಣೆಗಳು ಹಲವಾರು ಇವೆ. ಇದರ ತಾತ್ಪರ್ಯ ಇಷ್ಟೇ.. ವ್ಯಾಯಾಮ ಮಾಡುವಾಗ, ದೈಹಿಕ ಕಸರತ್ತು/ ಕೆಲಸ ಮಾಡುವಾಗ, ಮಲಗಿರುವಾಗ ಮಾಸ್ಕ್ ಹಾಕಿಕೊಳ್ಳುವುದು ಕ್ಷೇಮವಲ್ಲ!

ಮಾಸ್ ಇದ್ದ ಕಡೆ ಮಾಸ್ಕ್ ಹಾಕಿರಲೇಬೇಕು, ಆದ್ರೆ.. 
ಹೌದು, ಇಂತಹ ಪ್ರಕರಣಗಳನ್ನು ಗಮನಿಸಿರುವ ವೈದ್ಯ ಲೋಕ ಈಗ ಒಂದಷ್ಟು ಸೂಕ್ತ ಸಲಹೆಗಳನ್ನು ನೀಡಿದೆ. ಸಾರ್ವಜನಿಕವಾಗಿ ಖರೀದಿ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವುದು ಒಳಿತು. ಗುಂಪು ಸೇರುವ ಕಡೆ ಸಾಮಾಜಿಕ ಅಂತರ ಪಾಲಿಸುವುದರ ಜೊತೆಗೆ ಮಾಸ್ಕ್ ಹಾಕಿರಲೇಬೇಕು. ಅದೇ ರನ್ನಿಂಗ್/ ಜಾಗಿಂಗ್ ಮಾಡುವಾಗ, ವ್ಯಾಯಾಮ ಮಾಡುವಾಗ.. ಆಲ್​ ರೆಡಿ ನೀವು ಜನರಿಂದ ದೂರ ಓಡುತ್ತಿರುತ್ತೀರಿ. ಹಾಗಿರುವಾಗ ಮಾಸ್ಕ್​ ಏಕೆ ಬೇಕು? ಯೋಚಿಸಿ ನೋಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇನ್ನು ಎಸಿ ಕಾರಿನಲ್ಲಿ ಹೋಗುವಾಗ ಮಾಸ್ಕ್​ ಏಕೆ? ಎಂದೂ ವೈದ್ಯರು ಪ್ರಶ್ನಿಸಿದ್ದು, ಮಾಸ್ಕ್ ಧರಿಸುವುದು ಅಥವಾ ಬಿಡುವುದು ನಿಮ್ಮ ನಿಮ್ಮ ವಿವೇಚನೆಗೆ ಬಿಟ್ಟ ವಿಷಯ ಎಂದು ಜನರ ಹೆಗಲಿಗೇ ಮಾಸ್ಕ್ ಜವಾಬ್ದಾರಿಯನ್ನು ಹೊರಿಸಿದ್ದಾರೆ.

Related Posts :

Category:

error: Content is protected !!