ಭಾರತ ಬೇಕಾ, ಇಂಡಿಯಾ ಇರಲಿನಾ? ದೇಶಕ್ಕೆ ಯಾವುದು ಅಧಿಕೃತ ಹೆಸರು?

ದೆಹಲಿ: ಭಾರತವನ್ನು ಹಿಂದೂಸ್ತಾನ, ಇಂಡಿಯಾ, ಭಾರತ, ಭರತ ಭೂಮಿ, ಭಾರತವರ್ಷ ಎಂಬ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತವನ್ನು ಇಂಡಿಯಾ ಎಂದು ಕರೆಯುತ್ತಿದ್ದರು. ಅದಕ್ಕೂ ಮುನ್ನ ಮೊಘಲರು ಹಿಂದೂಸ್ತಾನ್ ಎಂದು ಕರೆಯುತ್ತಿದ್ದರು.

ಇಂಡಿಯಾ- ಭಾರತ ಆಕ್ಷೇಪಗಳು ಅಂಬೇಡ್ಕರ್ ಕಾಲದಿಂದಲೂ ಇವೆ
ಬ್ರಿಟಿಷರ ಆಡಳಿತದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯ ಸಂವಿಧಾನ ರಚನೆ ಸಭೆಯಲ್ಲಿ ಈ ವಿಷಯ ತೀವ್ರವಾಗಿ ಚರ್ಚೆಯಾಯಿತು. ಭಾರತ ಎಂಬುದು ದೇಶದ ಪ್ರಾಥಮಿಕ ಹೆಸರಾಗಿದೆ. ಆದ್ರೆ ಇಂಡಿಯಾ ಎಂಬುದು ಆಂಗ್ಲ ಭಾಷೆಯ ಹೆಸರಾಗಿದೆ ಎಂದು ಆಕ್ಷೇಪಗಳು ವ್ಯಕ್ತವಾಗಿದ್ದವು.

ಭಾರತದ ಪರ ಒಲವಿದೆ ಎಂದು ಸುಪ್ರೀಂಕೋರ್ಟ್​ಗೆ ಅರ್ಜಿ!
ನಂತರ ಸಂವಿಧಾನದಲ್ಲಿ ಇಂಡಿಯಾ ಮತ್ತು ಭಾರತ ಎಂದು ಎರಡು ಹೆಸರುಗಳನ್ನು ಉಲ್ಲೇಖಿಸಲಾಯಿತು. ಇದರಲ್ಲಿ ಭಾರತ ಎಂಬುದು ಪ್ರಾಥಮಿಕ ಹೆಸರಾಗಿದ್ದು, ತುಂಬಾ ಜನರಿಗೆ ಇದರ ಪರ ಒಲವಿದೆ. ಆದ್ದರಿಂದ ಇಂಡಿಯಾ ಎಂಬ ಹೆಸರನ್ನು ತೆಗೆದು ಕೇವಲ ಭಾರತ ಎಂಬ ಹೆಸರನ್ನು ಅಧಿಕೃತಗೊಳಿಸುವಂತೆ ದೆಹಲಿ ಮೂಲದ ಅರ್ಜಿದಾರರೊಬ್ಬರು ಇದೀಗ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

ಇಂಡಿಯಾ ಎನ್ನುವುದು ಬ್ರಿಟಿಷರ ಗುಲಾಮಗಿರಿಯ ಸಂಕೇತ
ಸಂವಿಧಾನದ 1ನೇ ವಿಧಿಯನ್ನು ತಿದ್ದುಪಡಿ ಮಾಡಲು ಅರ್ಜಿದಾರರು ಪ್ರಯತ್ನಿಸಿದ್ದಾರೆ. ಏಕೆಂದರೆ 1ನೇ ವಿಧಿಯು ದೇಶದ ಹೆಸರು ಮತ್ತು ಅದರ ಪ್ರದೇಶಗಳನ್ನು ವ್ಯಾಖ್ಯಾನಿಸುತ್ತದೆ. ಇಂಡಿಯಾ ಎನ್ನುವುದು ಬ್ರಿಟಿಷರು ಇಟ್ಟ ಗುಲಾಮಗಿರಿಯ ಸಂಕೇತವಾಗಿದೆ. ಹಾಗಾಗಿ ಭಾರತ್ ಅಥವಾ ಹಿಂದುಸ್ತಾನ ಎಂಬುದು ದೇಶದ ಹೆಸರಾಗಿದೆ. ಹೀಗಾಗಿ ಭಾರತ ಹೆಸರನ್ನು ಅಧಿಕೃತಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

ಗಮನಾರ್ಹವೆಂದ್ರೆ, ಇಂದು ನಡೆಯಬೇಕಿದ್ದ ಈ ಅರ್ಜಿಯ ವಿಚಾರಣೆಯು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಎ ಬೋಬ್ಡೆ ಅನುಪಸ್ಥಿತಿಯಿಂದಾಗಿ, ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more