ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಿದ ಭಾರತ

ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಿದೆ. ಬ್ರಿಟನ್ ಮತ್ತು ಪ್ರಾನ್ಸ್ ದೇಶಗಳನ್ನ ಹಿಂದಿಕ್ಕಿ ಭಾರತವು ಐದನೇ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದೆ. ಈ ಮೂಲಕ ಆರ್ಥಿಕತೆ ಬೆಳವಣಿಗೆಗೆ ವೇಗಕ್ಕೆ ಮುನ್ನುಡಿ ಬರೆದಿದೆ.

ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೇರಿದ ಭಾರತ..!
ಭಾರತವನ್ನು 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡ್ಬೇಕು ಅನ್ನೋದು ಪ್ರಧಾನಿ ಮೋದಿ ಗುರಿ.‌ ಈ ನಿಟ್ಟಿನಲ್ಲಿ ಭಾರತ ಈಗ ಪ್ರಗತಿಯಲ್ಲಿ ಸಾಗುತ್ತಿದೆ. ದೇಶದ ಆರ್ಥಿಕತೆಯು ಕುಸಿತದ ಹಾದಿಯಲ್ಲಿದ್ರೂ ವಿಶ್ವದ ಬಲಾಢ್ಯ ದೇಶಗಳನ್ನೇ ಆರ್ಥಿಕ ಬೆಳವಣಿಗೆಯಲ್ಲಿ ಹಿಂದಿಕ್ಕಿದೆ.

2019 ರಲ್ಲಿ ಭಾರತವು ಬ್ರಿಟನ್, ಫ್ರಾನ್ಸ್​ನಂಥಾ ದೇಶಗಳನ್ನು ಆರ್ಥಿಕತೆ ಬೆಳವಣಿಗೆಯಲ್ಲಿ ಹಿಂದಕ್ಕೆ ತಳ್ಳಿದೆ. ಈ ಮೂಲಕ ಭಾರತವು ವಿಶ್ವದ ಐದನೇ ದೊಡ್ಡ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದೆ. ಇದನ್ನು ಅಮೆರಿಕಾದ ಥಿಂಕ್ ಟ್ಯಾಂಕ್ ವರ್ಲ್ಡ್ ಪಾಪ್ಯುಲೇಶನ್ ವರದಿಯು ಹೇಳಿದೆ.

ಆರ್ಥಿಕತೆ ‘ಶಕ್ತಿ’:
ಐದನೇ ಸ್ಥಾನಕ್ಕೇರಿರುವ ಭಾರತದ ಆರ್ಥಿಕತೆಯು 2.94 ಟ್ರಿಲಿಯನ್ ಡಾಲರ್​ನಷ್ಟಿದೆ. ನಂತರದ ಸ್ಥಾನದಲ್ಲಿರುವ ಬ್ರಿಟನ್ 2.83 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿದೆ. ಇದರ ನಂತ್ರದ ಸ್ಥಾಲ ಅಲಂಕರಿಸಿರೋ ಫ್ರಾನ್ಸ್ ಎನಾನಮಿ 2.71 ಟ್ರಿಲಿಯನ್ ಡಾಲರ್​ನಷ್ಟಿದೆ. ಇನ್ನು ಜನರ ಖರೀದಿ ಸಾಮರ್ಥ್ಯದಲ್ಲಿ ಜಪಾನ್, ಜರ್ಮನಿಯನ್ನೂ ಭಾರತ ಹಿಂದಿಕ್ಕಿದೆ. ಅಲ್ದೆ, ಈ ವರದಿಯಲ್ಲಿ ಭಾರತದ ಜಿಡಿಪಿ ಶೇಕಡಾ ‌5ರಷ್ಟಾಗಲಿದೆ ಅಂತಾ ಹೇಳಿದೆ.‌

ಭಾರತದ ಆರ್ಥಿಕ ಬೆಳವಣಿಗೆಗೆ ಸಿಕ್ತು ವೇಗ..!
ಇನ್ನು, 1990 ರ ನಂತರ ಭಾರತವು ಆರ್ಥಿಕ ಸುಧಾರೀಕರಣ ಜಾರಿಗೊಳಿಸಿದೆ. ಇದ್ರಿಂದಾಗಿ ‌ಭಾರತದ ಆರ್ಥಿಕ ಬೆಳವಣಿಗೆಗೆ ವೇಗ ಸಿಕ್ಕಿದೆ. ಭಾರತದ ಸೇವಾ ವಲಯವು ವೇಗವಾಗಿ ಬೆಳವಣಿಗೆ ಆಗ್ತಿದೆ.‌ ಸೇವಾ ವಲಯವೇ ಆರ್ಥಿಕತೆಯ ಶೇಕಡಾ 60 ರಷ್ಟು ಬೆಳವಣಿಗೆಗೆ ಕೊಡುಗೆ ನೀಡ್ತಿದೆ.‌ ಉದ್ಯೋಗದ ಶೇಕಡಾ ಶೇಕಡಾ 20ರಷ್ಟು ಬೆಳವಣಿಗೆಗೆ ಕೊಡುಗೆ ನೀಡಿದೆ.

ಒಟ್ನಲ್ಲಿ, ಆರ್ಥಿಕತೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿದೆ. ಇದ್ರೊಂದಿಗೆ ಬ್ರಿಟನ್ ಹಾಗೂ ಫ್ರಾನ್ಸ್ ದೇಶವನ್ನು ಹಿಂದಿಕ್ಕಿದೆ. ಇದ್ರಿಂದ ಖುಷ್ ಆಗಿರೋ ಕೇಂದ್ರ ಸರ್ಕಾರ, ಈಗ ಭಾರತದ ಆರ್ಥಿಕತೆಯು ಸರಿದಾರಿಗೆ ಬರುತ್ತಿದೆ ಅಂತ ಹೇಳಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!