‘ಡ್ರ್ಯಾಗನ್’ ಸ್ಥಾಪಿಸಿದ್ದ 59 ಆ್ಯಪ್​ಗಳು ಭಾರತದಿಂದ ಕಿಕ್‌ಔಟ್..

ದೆಹಲಿ: ಗಡಿಯಲ್ಲಿ ಭಾರತೀಯ ಯೋಧರ ಮೇಲೆ ಕೈ ಎತ್ತಿ, ಕಿರಿಕ್ ಮಾಡ್ತಿದ್ದ ಕುತಂತ್ರಿ ಚೀನಾಗೀಗ ಮೊದಲ ಗುನ್ನಾ ಸಿಕ್ಕಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಿ ಌಪ್​ಗಳಿಗೆ ಭಾರತದಿಂದ ಗೇಟ್ ಪಾಸ್ ನೀಡುವ ನಿರ್ಧಾರಕ್ಕೆ ಬಂದಿದೆ. ಹಾಗಾದ್ರೆ ಯಾವೆಲ್ಲಾ ಌಪ್​ಗಳು ಭಾರತದಲ್ಲಿ ಬ್ಯಾನ್ ಆಗಲಿವೆ? ಇಲ್ಲಿವೆ ನೋಡಿ.

ಗಡಿಯಲ್ಲಿ ಕಿರಿಕ್, ವಿಶ್ವಸಂಸ್ಥೆಯಲ್ಲೂ ಭಾರತದ ವಿರುದ್ಧ ವಿಷ ಕಾರುವ ಚೀನಾಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಹಾಗೇ ಭವಿಷ್ಯದಲ್ಲಿ ಬುದ್ಧಿ ಬರೋದಿಲ್ಲ ಅಂತಾ ಕಾಣುತ್ತಿದೆ. ಭಾರತದ ಗಡಿಗೇ ಕಾಲಿಟ್ಟು, ಭಾರತದ ವೀರ ಯೋಧರ ಮೇಲೆಯೇ ಕೈ ಮಾಡಿದ್ದ ಡ್ರ್ಯಾಗನ್ ಸೇನೆಯ ಅವಾಂತರಗಳು ಒಂದೆರಡಲ್ಲ. ಈ ಹಿನ್ನೆಲೆ ಭಾರತ-ಚೀನಾ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಸೇನಾ ಕಾರ್ಯಾಚರಣೆಗೂ ಮೊದಲು ಭಾರತ ವ್ಯಾವಹಾರಿಕವಾಗಿ ಚೀನಾಗೆ ಮೊದಲ ಶಾಕ್ ನೀಡಿದೆ. ಭಾರತದಲ್ಲಿ ಭದ್ರವಾಗಿ ತಳವೂರಿದ್ದ ಚೀನಿ ಌಪ್​ಗಳಿಗೆ ಮೊಳೆ ಹೊಡೆಯಲಾಗಿದೆ.

ಇನ್ಮುಂದೆ ಚೀನಾದ ಈ ಌಪ್​ಗಳು ವರ್ಕ್ ಆಗಲ್ಲ!
ಯೆಸ್ ಭಾರತದಲ್ಲಿ ಕ್ರೇಝ್ ಹುಟ್ಟುಹಾಕಿದ್ದ ವಿಡಿಯೋ ಶೇರಿಂಗ್ ಆ್ಯಪ್ ಟಿಕ್​ಟಾಕ್ ಸೇರಿದಂತೆ 59 ಚೀನಾ ಆ್ಯಪ್​ಗಳಿಗೆ ಭಾರತದಿಂದ ಗೇಟ್ ಪಾಸ್ ನೀಡಲಾಗಿದೆ. 2020ರ ಏಪ್ರಿಲ್ ಹೊತ್ತಿಗೆ ವಿಶ್ವದಾದ್ಯಂತ ‘ಟಿಕ್ ಟಾಕ್’ನ ಬಳಕೆದಾರರ ಸಂಖ್ಯೆ 1.5 ಬಿಲಿಯನ್ ಮುಟ್ಟಿತ್ತು. ಭಾರತದಲ್ಲೇ 611 ಮಿಲಿಯನ್ ಡೌನ್ಲೋಡ್ ಕಂಡಿತ್ತು. ಅದ್ರಲ್ಲೂ ಲಾಕ್​ಡೌನ್ ಕಾಲದಲ್ಲಿ ಭಾರತೀಯರು ಟಿಕ್ ಟಾಕ್ ಬಳಕೆಯನ್ನ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದರು. ಆದರೆ ಚೀನಾ ಗಡಿ ಕ್ಯಾತೆ ಬಳಿಕ ಟಿಕ್​ಟಾಕ್ ಸೇರಿ ಚೀನಾದ ಹಲವಾರು ಆ್ಯಪ್​ಗಳನ್ನ ಭಾರತದಲ್ಲಿ ಬ್ಯಾನ್ ಮಾಡಬೇಕೆಂದು ಒತ್ತಾಯಿಸಲಾಗ್ತಿತ್ತು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ 59 ಚೀನಿ ಆ್ಯಪ್​ಗಳಿಗೆ ಭಾರತದಿಂದ ಮುಕ್ತಿ ಕರುಣಿಸಿದೆ. ಇನ್ನು ಬ್ಯಾನ್ ಲಿಸ್ಟ್​ನಲ್ಲಿ ಸ್ಥಾನ ಪಡೆದ ಚೀನಿ ಌಪ್​ಗಳು ಯಾವುವು ಅನ್ನೋದನ್ನ ಡೀಟೇಲ್ ಆಗಿ ನೋಡೋದಾದ್ರೆ.

ಚೀನಿ ಆ್ಯಪ್​ಗಳು ಉಡೀಸ್!
ಚೀನಾದಲ್ಲಿ ಹುಟ್ಟಿ ಭಾರತದಲ್ಲಿ ಹವಾ ಎಬ್ಬಿಸಿದ ಟಿಕ್​ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಬೈಡು ಮ್ಯಾಪ್, ಕ್ಲ್ಯಾಷ್ ಆಫ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೋ, ಲೈಕೀ, ಯೂ ಕ್ಯಾನ್ ಮೇಕಪ್ ಭಾರತದಲ್ಲಿ ಇನ್ಮುಂದೆ ವರ್ಕ್ ಆಗಲ್ಲ. ಹಾಗೇ ಎಂ.ಐ.ಕಮ್ಯುನಿಟಿ, ವೈರಸ್ ಕ್ಲೀನರ್, ಕ್ಲಬ್ ಫ್ಯಾಕ್ಟರಿ, ನ್ಯೂಸ್ ಡಾಗ್, ವಿ ಚಾಟ್, ಯುಸಿ ನ್ಯೂಸ್, ಕ್ಯುಕ್ಯು ಮೇಲ್, ಕ್ಯುಕ್ಯು ಮ್ಯೂಸಿಕ್, ಬಿಗೋ ಲೈವ್, ಸೆಲ್ಫೀ ಸಿಟಿ, ಮೈಲ್ ಮಾಸ್ಟರ್ ಹಾಗೂ ಮಿ ವಿಡಿಯೋ ಕಾಲ್ ಕ್ಸಿಯೋಮಿ ಆ್ಯಪ್​ಗೂ ಗೇಟ್​ಪಾಸ್ ಸಿಕ್ಕಿದೆ. ಇಷ್ಟೇ ಅಲ್ದೆ ವಿ ಸಿಂಕ್, ವಿಗೋ ವಿಡಿಯೋ, ಡಿಯು ರೆಕಾರ್ಡರ್, ಡಿಯು ಬ್ರೌಸರ್, ಕ್ಯಾಮ್ ಸ್ಕ್ಯಾನರ್, ಕ್ಲೀನ್ ಮಾಸ್ಟರ್ ಚೀತಾ ಮೊಬೈಲ್, ವಂಡರ್ ಕ್ಯಾಮರಾ ಸೇರಿ ಫೋಟೋ ವಂಡರ್, ಸ್ವೀಟ್ ಸೆಲ್ಫೀ, ಕ್ಸೆಂಡರ್, ಕ್ವಾಯ್ ಆ್ಯಪ್​ಗಳಿಗೆ ಭಾರತದಲ್ಲಿ ಕೊನೇ ಮೊಳೆ ಹೊಡೆಯಲಾಗಿದೆ.

ಌಪ್ ಮೂಲಕ ಮಾಹಿತಿ ಕದಿಯುತ್ತಿದ್ರಾ ಚೀನಿಯರು?
ಇನ್ನು ಚೀನಿ ಌಪ್​ಗಳನ್ನ ನಿಷೇಧ ಮಾಡಿರೋದಕ್ಕೆ ಕೇಂದ್ರ ಸರ್ಕಾರ ಸೂಕ್ತ ಕಾರಣಗಳನ್ನ ನೀಡಿದೆ. ಚೀನಾದ ಌಪ್​ಗಳು ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮಾಹಿತಿ ಕದಿಯುತ್ತಿರುವ ಆರೋಪ ಹೊತ್ತಿವೆ. ಭಾರತದಲ್ಲೂ ಚೀನಾ ಮೂಲದ ಌಪ್​ಗಳು ಇದೇ ಕಳ್ಳ ಕೆಲಸ ಮಾಡುತ್ತಿವೆಯಂತೆ. ಹಾಗಾದ್ರೆ ಕೇಂದ್ರ ಸರ್ಕಾರ ಚೀನಾ ಮೂಲದ 59 ಌಪ್​ಗಳನ್ನ ಬ್ಯಾನ್ ಮಾಡಲು ಮೋದಿ ಸರ್ಕಾರ ಕೊಟ್ಟ ಸೂಕ್ತ ಕಾರಣಗಳನ್ನ ಡೀಟೇಲಾಗಿ ನೋಡೋದಾದ್ರೆ.

ಬ್ಯಾನ್ ಮಾಡಲು ಕಾರಣವೇನು?
ಭಾರತದಲ್ಲಿರುವ ಮೊಬೈಲ್ ಬಳಕೆದಾರರ ಮಾಹಿತಿಯನ್ನು ಚೀನಾ ಸಂಗ್ರಹಿಸುತ್ತಿತ್ತಂತೆ. ಭಾರತೀಯರ ಖಾಸಗೀತನಕ್ಕೆ ಚೀನಿ ಌಪ್​ಗಳ ಬಳಕೆಯಿಂದ ತೀವ್ರ ಅಪಾಯವಿತ್ತು. ಹಾಗೇ ಌಪ್ ಬಳಕೆದಾರರ ಖಾಸಗೀತನಕ್ಕೂ ಭದ್ರತೆ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಈಮೂಲಕ ಭಾರತದ ಮೇಲೆ ಪರೋಕ್ಷ ಯುದ್ಧಮಾಡ್ತಿತ್ತಾ ಚೀನಾ ಅನ್ನೋ ಅನುಮಾನ ಮೂಡಿದೆ. ಹೀಗಾಗಿ ಪ್ರಜೆಗಳ ಹಿತದೃಷ್ಟಿಯಿಂದ ಚೀನಿ ಌಪ್ಸ್​ಗೆ ಗೇಟ್​ಪಾಸ್ ನೀಡಲಾಗಿದೆ.

ಒಟ್ನಲ್ಲಿ ‘ಚೀನಾ’ ಌಪ್​ಗಳಿಗೇನೋ ಗುನ್ನಾ ಬಿದ್ದಿದೆ. ಇದೇ ರೀತಿ ಚೀನಾ ಉತ್ಪನ್ನಗಳಿಗೂ ಭಾರತದಿಂದ ಗೇಟ್​ಪಾಸ್ ನೀಡಬೇಕು ಅನ್ನೋ ಒತ್ತಾಯ ಶುರುವಾಗಿದೆ. ಭವಿಷ್ಯದಲ್ಲಿ ಚೀನಾ ಪ್ರಾಡಕ್ಟ್​ಗೆ ಭಾರತದ ಬಾಗಿಲು ಮುಚ್ಚುವ ಕಾಲ ಸನ್ನಿಹಿತವಾಗಿದೆ. ಇದು ಚೀನಾ ಆರ್ಥಿಕತೆ ಮೇಲೆ ಬಹು ದೊಡ್ಡ ದುಷ್ಪರಿಣಾಮ ಬಿರೋದ್ರಲ್ಲಿ ಅನುಮಾನವಿಲ್ಲ.

Related Posts :

Category:

error: Content is protected !!

This website uses cookies to ensure you get the best experience on our website. Learn more