ಆಲ್‌ರೌಂಡರ್ ದಿನೇಶ್ ಮೊಂಗಿಯಾ ಕ್ರಿಕೆಟ್​​ನಿಂದ ರಿಟೈರ್​ ಆದ್ರು

ತನ್ನ ಕೊನೆಯ ODI ನಂತರ ಸುಮಾರು 12 ವರ್ಷದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಆಲ್‌ರೌಂಡರ್ ದಿನೇಶ್ ಮೊಂಗಿಯಾ ತನ್ನ 42 ವರ್ಷದ ವಯಸ್ಸಿನಲ್ಲೇ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಪಡೆದಿದ್ದಾರೆ. ಬುಧವಾರ ಮೊಂಗಿಯಾ ತಾವು ಎಲ್ಲಾ ಮಾದರಿಯ ಕ್ರಿಕೆಟ್ ನಿವೃತ್ತರಾಗುತ್ತಿರುವುದಾಗಿ ಹೇಳಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಭೂತ ಬಿಡಲಿಲ್ಲ:
2003 ರ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿ ಸ್ಥಾನ ಪಡೆದಿದ್ದ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಮೊಂಗಿಯಾ ಕೊನೆಯ ಬಾರಿಗೆ 2007 ರಲ್ಲಿ ಪಂಜಾಬ್ ಪರ ಆಡಿದ್ದರು. ನಂತರ ಅವರು ಭಾರತೀಯ ಕ್ರಿಕೆಟ್ ಲೀಗ್‌ಗೆ ಸೇರಿಕೊಂಡಿದ್ದರು, ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಕ್ಕಾಗಿ ಬಿಸಿಸಿಐ ಅವರ ಮೇಲೆ ನಿಷೇಧ ಹೇರಿತ್ತು.

1995 ರ ಅಕ್ಟೋಬರ್‌ನಲ್ಲಿ ಪಂಜಾಬ್ ಪರ ಆಡುವಾಗ ಮೊಂಗಿಯಾ U -19 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು 121 ಪಂದ್ಯಗಳಲ್ಲಿ 8028 ರನ್ ಗಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಹೆಸರಿಗೆ 21 ಪ್ರಥಮ ದರ್ಜೆ ಶತಕಗಳಿವೆ. 2000-01ರ ಕ್ರೀಡಾಋತುವಿನವರೆಗೆ ದೇಶೀ ಕ್ರಿಕೆಟ್ ನಲ್ಲಿ ಅದ್ಭುತ ಸಾಧನೆ ಮಾಡಿದ್ರು.

ವೃತ್ತಿ ಬದುಕಿನಲ್ಲಿ ಶ್ರೇಷ್ಠ ಸಾಧನೆ
ಮೊಂಗಿಯಾ 2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು ಆದರೆ ಅವರು ಕೇವಲ 2 ರನ್ ಗಳಿಸುವಲ್ಲಿ ಯಶಸ್ವಿಯಾದರು. ಎಡಗೈ ಬ್ಯಾಟ್ಸ್‌ಮನ್ 57 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಸರಾಸರಿ 27.95 ಸರಾಸರಿಯಲ್ಲಿ 1230 ರನ್ ಗಳಿಸಿದ್ದಾರೆ. ಅವರು ಏಕೈಕ ಟಿ 20 ಐ ಆಡಿದರು ಮತ್ತು 38 ರನ್ ಗಳಿಸಿದರು,

2002 ರಲ್ಲಿ ಗುವಾಹಟಿಯಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ  159 ರನ್ ಗಳಿಸಿ ಅದ್ಭುತ ಯಶಸ್ಸಿಗೆ ಕಾರಣವಾಗಿದ್ದರು. ನೆದರ್ ಲ್ಯಾಂಡ್ ವಿರುದ್ಧ 42 ರನ್ ಗಳಿಸಿದ್ದು, ಮೊಂಗಿಯಾ ಕ್ರಿಕೆಟ್ ವೃತ್ತಿಬದುಕಿನಲ್ಲಿ ಶ್ರೇಷ್ಠ ಸಾಧನೆಯಾಗಿದೆ. ಅಲ್ಲದೆ ಮೊಂಗಿಯಾ ಲಂಕಾಷೈರ್ ಮತ್ತು ಲೀಸೆಸ್ಟರ್ಶೈರ್ ತಂಡದ ಪರ ಆಟವಾಡಿದ್ದರು.

ಐಸಿಎಲ್‌ನಲ್ಲಿ  ಆಡಿದ್ದ ಮೊಂಗಿಯಾಗೆ  ಬಿಸಿಸಿಐ  ನಿಷೇಧ ಹೇರಿತ್ತು. ನಿಷೇಧದ ನಂತರ, ಮೊಂಗಿಯಾ ಆಟದೊಂದಿಗಿನ ಎಲ್ಲಾ ಅಧಿಕೃತ ಸಂಪರ್ಕ ಕಳೆದುಕೊಂಡಿದ್ದರು. 2017 ರಲ್ಲಿ ಅವರು ಮತ್ತೆ ಬಿಸಿಸಿಐ ಕ್ಷಮಾದಾನಕ್ಕಾಗಿ ಮನವಿ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ 12 ವರ್ಷದ ಬಳಿಕ, ಇದೀಗ ವಿದಾಯ ಹೇಳಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!