ಆರ್ಥಿಕ ಸಂಕಷ್ಟದ ಮಧ್ಯೆಯೂ ಏರುತ್ತಿದೆ ಶ್ರೀಮಂತ ಭಾರತೀಯರ ಸಂಖ್ಯೆ, ಪಟ್ಟಿಗೆ 15 ಜನ ಸೇರ್ಪಡೆ

ದೆಹಲಿ: ಕಳೆದ ಆರು ತಿಂಗಳಲ್ಲಿ ಸುಮಾರು 15 ಭಾರತೀಯರು ವಿಶ್ವದ ಶ್ರೀಮಂತರ ಪಟ್ಟಿಗೆ ಸೇರಿದ್ದಾರೆ ಎಂದು ಪ್ರಸಿದ್ಧ ಫೋರ್ಬ್ಸ್‌ ಮಾಸಪತ್ರಿಕೆ​ ವರದಿ ಮಾಡಿದೆ.

ಇದೀಗ, ಫೋರ್ಬ್ಸ್ ಶ್ರೀಮಂತರ​ ಪಟ್ಟಿಯಲ್ಲಿ ಸುಮಾರು 117 ಭಾರತೀಯರು ರಾರಾಜಿಸುತ್ತಿದ್ದಾರೆ . ಈ 117 ಕೋಟ್ಯಾಧೀಶರ ನಿವ್ವಳ ಮೌಲ್ಯ 300 ಬಿಲಿಯನ್​ ಡಾಲರ್​ಗಿಂತ ಅಧಿಕವಾಗಿದೆ ಎಂದು ಫೋರ್ಬ್ಸ್‌ ಮ್ಯಾಗಜೀನ್​ ಅಂಕಿ ಅಂಶಗಳು ಬಿಡುಗಡೆ ಮಾಡಿದೆ.

ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ 88.9 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿದ್ದರೆ. ತದನಂತರ ಬರುವವರಲ್ಲಿ HCL ಟೆಕ್ನಾಲಜೀಸ್ ಸಂಸ್ಥಾಪಕ ಶಿವ್​ ನಾಡರ್ (9 19.9 ಬಿಲಿಯನ್) ಹಾಗೂ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (7 18.7 ಬಿಲಿಯನ್) ಇದ್ದಾರೆ.

Related Tags:

Related Posts :

Category:

error: Content is protected !!