ಇಟಲಿಯನ್ನು ಹಿಂದಿಕ್ಕಿದ ಭಾರತ!

ದೆಹಲಿ: ಕೊವಿಡ್-19 ವ್ಯಾಧಿಗೆ ಸಂಬಂಧಿಸಿದ ಸಾವುಗಳಲ್ಲಿ ಭಾರತ, ಯುರೋಪಿಯನ್ ರಾಷ್ರ ಇಟಲಿಯನ್ನು ಹಿಂದಟ್ಟಿ ಅತಿಹೆಚ್ಚು ಸಾವುಗಳನ್ನು ಕಂಡಿರುವ ದೇಶಗಳ ಪೈಕಿ ಐದನೇ ಸ್ಥಾನಕ್ಕೇರಿದೆ.

ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿಯ ಕೊವಿಡ್-19 ಟ್ರ್ಯಾಕರ್ ಪ್ರಕಾರ, ಇದುವರೆಗೆ ಐದನೇ ಸ್ಥಾನದಲ್ಲಿದ್ದ ಇಟಲಿಯಲ್ಲಿ 35,132 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊವಿಡ್-19ನಿಂದ ಮೃತಪಟ್ಟವರ ಸಂಖ್ಯೆ ಇಂದು 36,007 ಕ್ಕೇರಿದೆ.

ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಸಾವುಗಳ ಸಂಖ್ಯೆ ಅಮೆರಿಕದಲ್ಲಿ ಅತ್ಯಧಿಕವಾಗಿದೆ. ಇವತ್ತಿನವರೆಗೆ ಆ ರಾಷ್ರದಲ್ಲಿ 1,54,000 ಕ್ಕಿಂತ ಹೆಚ್ಚು ಜನ ವೈರಸ್ ಬಲಿಯಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 91,416 ಜನ ಮರಣಿಸಿದ್ದಾರೆ. ಮೆಕ್ಸಿಕೊ ದೇಶದಲ್ಲಿ ಇವತ್ತಿನವರೆಗೆ, 46,000 ಕ್ಕಿಂತ ಜಾಸ್ತಿ ಜನ ಸತ್ತಿದ್ದಾರೆ. ಯುನೈಟೆಟ್ ಕಿಂಗ್ಡಮ್ನಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 46,000 ದಷ್ಟಿದೆ (45,999).

ಭಾರತದಲ್ಲಿ ಜುಲೈ 31ರವರೆಗೆ, 16,68,613 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮೇಲೆ ಹೇಳಿರುವಂತೆ 36,007 ಜನ ಸೋಂಕಿಗೆ ಬಲಿಯಾಗಿದ್ದಾರೆ. 10,74,984 ಸೋಂಕಿತರು ಗುಣಮುಖರಾಗಿ ಮನೆಗಳಿಗೆ ವಾಪಸ್ಸು ಹೋಗಿದ್ದಾರೆ. ಐದೂವರೆ ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಸೋಂಕಿತರು, ದೇಶದ ನಾನಾ ಭಾಗಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Related Tags:

Related Posts :

Category:

error: Content is protected !!