ಭಾರತಕ್ಕೆ ವ್ಯಾಕ್ಸಿನ್ ಪಕ್ಕಾ, ಇದು ಐಸಿಎಂಆರ್ ಲೆಕ್ಕ!

ದೆಹಲಿ: ಕೊರೊನಾಗೆ ಯಾವಾಗ ಔಷಧಿ ಸಿಗುತ್ತೆ ಅನ್ನೋದೆ ಈಗ ಟ್ರಿಲಿಯನ್ ಡಾಲರ್ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ನೀಡಿರುವ ‘ಐಸಿಎಂಆರ್’ ಮುಖ್ಯಸ್ಥ ಬಲರಾಮ ಭಾರ್ಗವ ಕೊರೊನಾ, ವಿರುದ್ಧದ ಈ ಸಮರದಲ್ಲಿ ಕೆಲವೊಂದು ಆಶಾದಾಯಕ ಅಂಶಗಳ ಪ್ರಸ್ತಾಪಿಸಿದ್ದಾರೆ. ಹಾಗಾದರೆ ಐಸಿಎಂಆರ್ ಮುಖ್ಯಸ್ಥರು ಹೇಳಿದ ಆ ಸಿಹಿ ಸುದ್ದಿಯಾದರೂ ಏನು..? ಡೆಡ್ಲಿ ಕೊರೊನಾಗೆ ಮದ್ದು ಯಾವಾಗ ಸಿಗುತ್ತೆ? ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಕೊರೊನಾ ಕೂಪಕ್ಕೆ ಬಿದ್ದು ಇಡೀ ಜಗತ್ತು ನಲುಗಿಹೋಗಿದೆ. ಅದರಲ್ಲೂ ಭಾರತದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿದೆ. 9 ಲಕ್ಷದ ಗಡಿ ದಾಟಿರುವ ಸೋಂಕಿತರ ಸಂಖ್ಯೆ, 10 ಲಕ್ಷದತ್ತ ಮುನ್ನುಗ್ಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಐಸಿಎಂಆರ್ ಆಶಾದಾಯಕ ಸುದ್ದಿಯೊಂದನ್ನ ದೇಶದ ಜನತೆಗೆ ನೀಡಿದೆ. ಅಲ್ಲದೆ ಕೊರೊನಾ ತಡೆಗಾಗಿ ಜನರಲ್ಲೇ ಇರುವ ವ್ಯಾಕ್ಸಿನ್ ಒಂದರ ಪ್ರಸ್ತಾಪವನ್ನೂ ಮಾಡಿದೆ.

‘ಸೋಷಿಯಲ್ ವ್ಯಾಕ್ಸಿನ್’ ರಾಮಬಾಣ!
ಅಂದಹಾಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ನಿನ್ನೆ ಸುದ್ದಿಗೋಷ್ಠಿ ನಡೆಸಲಾಯ್ತು. ಈ ವೇಳೆ ಮಾತನಾಡಿದ ಐಸಿಎಂಆರ್ ಮುಖ್ಯಸ್ಥ ಬಲರಾಮ ಭಾರ್ಗವ, ಜಗತ್ತಿನ ಯಾವ ಮೂಲೆಯಲ್ಲಾದರೂ ‘ಕೊರೊನಾ’ಗೆ ವ್ಯಾಕ್ಸಿನ್ ಸಂಶೋಧಿಸಲಿ, ಭಾರತಕ್ಕೆ ಆ ವ್ಯಾಕ್ಸಿನ್ ಸಿಗೋದು ಪಕ್ಕಾ ಅಂತಾ ಹೇಳಿದ್ರು. ಜಗತ್ತಿನಲ್ಲಿ 130 ಸಂಸ್ಥೆಗಳು ಈ ಸೋಂಕಿಗೆ ಮದ್ದು ಹುಡುಕುತ್ತಿವೆ.

ಈ ಪೈಕಿ ಭಾರತದಲ್ಲೂ 2 ಕಂಪನಿಗಳು ಅವಿರತ ಶ್ರಮ ವಹಿಸುತ್ತಿವೆ. ಈ ಹೊತ್ತಲ್ಲೇ ಭಾರತೀಯರಿಗೆ ಐಸಿಎಂಆರ್ ಸಿಹಿ ಸುದ್ದಿ ನೀಡಿದ್ದು, ಜಗತ್ತಿನಾದ್ಯಂತ ಇರುವ ಫಾರ್ಮಾಸಿಟಿಕಲ್ಸ್ ಕಂಪನಿಗಳ ಪೈಕಿ ಶೇಕಡಾ 60 ರಷ್ಟು ಕಂಪನಿಗಳು ಭಾರತದಲ್ಲೇ ಇವೆ. ಹೀಗಾಗಿ ಭಾರತಕ್ಕೆ ಕೊರೊನಾ ಔಷಧಿ ಸಿಗೋದು ಪಕ್ಕಾ ಅಂತಾ ಭಾರ್ಗವ ತಿಳಿಸಿದ್ರು. ಭಾರತದಲ್ಲೂ ವ್ಯಾಕ್ಸಿನ್ ಕಂಡುಹಿಡಿಯಲು ಒಂದು ದಿನವನ್ನೂ ವ್ಯರ್ಥಗೊಳಿಸದೆ ಅವಿರತ ಶ್ರಮ ಹಾಕಲಾಗುತ್ತಿದೆ ಎಂದ ಐಸಿಎಂಆರ್ ಮುಖ್ಯಸ್ಥರು, ಸದ್ಯದಲ್ಲೇ ಶುಭಸುದ್ದಿ ಸಿಗುವ ಮುನ್ಸೂಚನೆ ನೀಡಿದ್ರು.

ದೇಶದಲ್ಲಿ ದಿನೇ ದಿನೆ ಹಬ್ಬುತ್ತಿರುವ ಕೊರೊನಾ ವಿಷಜಾಲದ ಅಂಕಿ-ಅಂಶವನ್ನ ಇದೇ ವೇಳೆ ನೀಡಲಾಯಿತು. ಹಾಗಾದ್ರೆ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಸೋಂಕಿನ ಬಗ್ಗೆ ನೀಡಿರುವ ಕಂಪ್ಲೀಟ್ ಡೇಟಾ ನೋಡೋದಾದ್ರೆ.

2 ರಾಜ್ಯದಲ್ಲಿ ಶೇ. 50ರಷ್ಟು ಕೇಸ್
ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯದಲ್ಲಿ ದೇಶದ ಶೇಕಡಾ 50ರಷ್ಟು ಌಕ್ಟಿವ್ ಕೇಸ್​ಗಳು ಇವೆ. ಹಾಗೇ ಉಳಿದ 8 ರಾಜ್ಯಗಳಲ್ಲಿ ಶೇಕಡಾ 36 ರಷ್ಟು ಕೊರೊನಾ ಌಕ್ಟಿವ್ ಕೇಸ್​ಗಳಿವೆ ಎಂದು ಮಾಹಿತಿ ನೀಡಲಾಗಿದೆ. ಇನ್ನೂ ಹೊಸ ಕೇಸ್ ಹೆಚ್ಚಳ ಪ್ರಮಾಣ ಶೇಕಡ 35ರಿಂದ ಶೇಕಡ 3.24ಕ್ಕೆ ಕುಸಿತ ಕಂಡಿರುವುದು ವರದಿಯಾಗಿದೆ. ಉಳಿದಂತೆ ಸೋಂಕಿತರ ಸಾವಿನ ಪ್ರಮಾಣ ಶೇಕಡಾ 2.8ರಿಂದ ಶೇಕಡಾ 2.6 ಕ್ಕೆ ಕುಸಿತ ಕಂಡಿರುವುದು ನೆಮ್ಮದಿಯ ವಿಚಾರ. ಲಡಾಖ್​ನಲ್ಲಿ ಶೇಕಡಾ 87ರಷ್ಟು ಹಾಗೂ ದೆಹಲಿಯಲ್ಲಿ ಶೇಕಡಾ 80ರಷ್ಟು ಜನ ಗುಣಮುಖರಾಗಿದ್ದಾರೆ.

ಒಟ್ನಲ್ಲಿ ದೇಶಾದ್ಯಂತ ಪರಿಸ್ಥಿತಿ ದಿನೇದಿನೆ ಬಿಗಡಾಯಿಸ್ತಿರೋ ಸಂದರ್ಭದಲ್ಲಿ ‘ಸೋಷಿಯಲ್ ವ್ಯಾಕ್ಸಿನ್’ ಎಂಬ ಮದ್ದು ಅತ್ಯಗತ್ಯವಾಗಿದೆ. ಜನ ಸಾಮಾಜಿಕ ಅಂತರ ಅನುಸರಿಸಿ ಕೊರೊನಾ ಕೂಪದಿಂದ ದೇಶವನ್ನ ಹೊರತರಬೇಕಿದೆ. ಕೊರೊನಾ ವಿರುದ್ಧದ ಈ ಮಹಾಸಮರದಲ್ಲಿ ಸರ್ಕಾರಕ್ಕೆ ಸಾರ್ವಜನಿಕರು ಕೂಡ ಸಾಥ್ ನೀಡಬೇಕಿದೆ.

Related Tags:

Related Posts :

Category:

error: Content is protected !!