Kuwait ಕನ್ನಡಿಗರ ಪರದಾಟ: ತಾಯ್ನಾಡಿಗೆ ಮರಳಲು ನೆರವಿನ ಮನವಿ

ಉದ್ಯೋಗ ಅರಸಿ ಕುವೈತ್​ಗೆ ಹೋಗಿದ್ದ ರಾಜ್ಯದ ಜನರು ಇದೀಗ ಸಂಕಷ್ಟದಲ್ಲಿದ್ದಾರೆ. ಕೊರೊನಾ ಹರಡುವಿಕೆಯನ್ನ ತಡೆಯಲು ಅಲ್ಲಿನ ಸರ್ಕಾರ ಘೋಷಿಸಿದ ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಇದರಲ್ಲಿ ರಾಜ್ಯದ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ನಿವಾಸಿಗಳೇ ಬಹುಪಾಲು ಇದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ 8 ತಿಂಗಳಿಂದ ಕುವೈತ್ ಸ್ತಬ್ಧವಾಗಿ ಹೋಗಿದೆ. ಹೀಗಾಗಿ, ರಾಜ್ಯಕ್ಕೆ ಮರಳಿ ಬರಲು ಸಿದ್ಧರಾಗಿದ್ದ ಕನ್ನಡಿಗರಿಗೆ ವಿಮಾನ ಸಂಚಾರ ವ್ಯವಸ್ಥೆ ಇಲ್ಲದೆ ಪರದಾಡುವಂಥ ಸ್ಥಿತಿ ಎದುರಾಗಿದೆ. ಆದ್ದರಿಂದ, ಭಾರತಕ್ಕೆ ವಾಪಸ್ ಬರೋಕೆ ವ್ಯವಸ್ಥೆ ಮಾಡಿಕೊಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ಮೂಲಕ ಸಿಎಂ ಯಡಿಯೂರಪ್ಪರಿಗೆ ಮನವಿ ಮಾಡಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!