ಸಮಾಜ ಸೇವೆಯೇ ಈಶ ಸೇವೆ ಎಂದಿದ್ದ ಸೋದರರು ಕೊರೊನಾಗೆ ಬಲಿ, ವಿಶ್ವಾದ್ಯಂತ ಕಂಬನಿ

ಜೋಹಾನ್ಸ್‌ಬರ್ಗ್‌: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಸಾಮಾಜಿಕ ಕಾರ್ಯಕರ್ತ ಸಹೋದರರಿಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ತಮ್ಮ ಸಾಮಾಜಿಕ ಕಾರ್ಯಗಳಿಂದ ವಿಶ್ವಾದ್ಯಂತ ಪ್ರಖ್ಯಾತರಾಗಿದ್ದ ಅಬ್ಬಾಸ್‌ ಸಯ್ಯದ್‌ ಮತ್ತು ಓಸ್ಮಾನ್‌ ಸಯ್ಯದ್‌ ಸಾವಿನಲ್ಲೂ ಅಗಲದೇ ಒಂದಾಗಿದ್ದಾರೆ.

ಕೊರೊನಾದಿಂದಾಗಿ ಕೊನೆಯುಸಿರೆಳೆದ ಸಹೋದರರು
ಹೌದು ಭಾರತ ಮೂಲದ ದಕ್ಷಿಣ ಆಫ್ರಿಕಾದ ಲೆನಸಿಯಾ ನಗರದಲ್ಲಿ ನೆಲೆಿಸಿದ್ದ ಸಯ್ಯದ್‌ ಸಹೋದರರು ಸಾಬರೀ ಚಿಸ್ಟಿ ಸೊಸೈಟಿಯನ್ನು ಸ್ಥಾಪಿಸಿ ಅದರ ಮೂಲಕ ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ವಿವಿಧೆಡೆ ಸಮಾಜ ಸೇವೆಯಲ್ಲಿ ತೊಡಗಿದ್ದರು. ಆದ್ರೆ ಕೊರೊನಾ ಮಹಾಮಾರಿ ಈ ಸಹೋದರರನ್ನು ಈಗ ಬಲಿ ಪಡೆದಿದೆ.

ಅಬ್ಬಾಸ್‌ ಸಯ್ಯದ್‌ ಶುಕ್ರವಾರ ಮತ್ತು ಇನ್ನೊಬ್ಬ ಸಹೋದರ ಓಸ್ಮಾನ್‌ ಸಯ್ಯದ್‌ ಶನಿವಾರ ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಇಬ್ಬರೂ ಸಹೋದರನ್ನು ಲೆನೆಸಿಯಾದ ರುದ್ರಭೂಮಿಯಲ್ಲಿ ಅಕ್ಕಪಕ್ಕದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ.

ಚಿಕ್ಕವರಿದ್ದಾಗ ಭಾರತದಲ್ಲಿನ ಅಜ್ಮೇರ್‌ ದರ್ಗಾಕ್ಕೆ ಭೇಟಿ ನೀಡಿದ ನಂತರ ಸಹೋದರರಿಗೆ ಸಮಾಜ ಸೇವೆ ಮಾಡುವ ಪ್ರೇರಣೆಯಾಗಿದೆ. ಆಗಿನಿಂದ ಸಾಬರಿ ಚಿಸ್ಟಿ ಸೊಸೈಟಿಯನ್ನು ಸ್ಥಾಪಿಸಿಕೊಂಡು ಬಡ ಜನರ ಸೇವೆಯಲ್ಲಿ ತೊಡಗಿದ್ದರು. ಇಷ್ಟೇ ಅಲ್ಲ ಹರಿಯಾಣಾದ ಪಾನಿಪತ್ ನಲ್ಲಿ ಮಸೀದಿಯೊಂದನ್ನು ಕೂಡಾ ಕಟ್ಟಲು ನೆರವಾಗಿದ್ದರು. ಸಹೋದರಿಬ್ಬರ ಸಾವಿಗೆ ಈಗ ವಿಶ್ವಾದ್ಯಂತ ಕಂಬನಿಗಳ ಮಾಹಾಪೂರವೇ ಹರಿದು ಬರುತ್ತಿದೆ.

Related Tags:

Related Posts :

Category:

error: Content is protected !!