ಆಟೊಮೊಬೈಲ್ ಉದ್ಯಮಿಗಳು ವಾಹನದ ಉತ್ಪಾದನಾ ವೆಚ್ಚಕ್ಕಿಂತ ಅದರ ಗುಣಮಟ್ಟದ ಕಡೆ ಹೆಚ್ಚು ಗಮನ ಹರಿಸಬೇಕು: ನಿತಿನ್ ಗಡ್ಕರಿ

ಭಾರತೀಯ ಅಟೊಮೊಬೈಲ್ ಉತ್ಪಾದಕರ ಸೊಸೈಟಿಯ (ಎಸ್ ಐ ಎ ಎಮ್) 62ನೇ ವಾರ್ಷಿಕ ಅಧಿವೇಶನಲ್ಲಿ ಮಾತಾಡಿದ ಸಚಿವರು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ತಯಾರಕರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಆಮದನ್ನು ಕಡಿಮೆ ಮಾಡಿ ರಫ್ತನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಆಟೊಮೊಬೈಲ್ ಉದ್ಯಮಿಗಳು ವಾಹನದ ಉತ್ಪಾದನಾ ವೆಚ್ಚಕ್ಕಿಂತ ಅದರ ಗುಣಮಟ್ಟದ ಕಡೆ ಹೆಚ್ಚು ಗಮನ ಹರಿಸಬೇಕು: ನಿತಿನ್ ಗಡ್ಕರಿ
ನಿತಿನ್ ಗಡ್ಕರಿ, ಕೇಂದ್ರ ಸಚಿವ
TV9kannada Web Team

| Edited By: Arun Belly

Sep 16, 2022 | 1:13 PM

ಭೀಕರ ಅಪಘಾತವೊಂದರಲ್ಲಿ ಉದ್ಯಮಿ ಸೈರಸ್ ಮಿಸ್ತ್ರಿ (Nitin Gadkari) ಸಾವನ್ನಪ್ಪಿದ ಸಂಗತಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಅವರು ದೇಶದ ಆಟೊಮೊಬೈಲ್ ಉದ್ಯಮಿಗಳಿಗೆ ಅಪೀಲೊಂದನ್ನು ಮಾಡಿ ತಮ್ಮ ಉತ್ಪಾದನಾ ವೆಚ್ಚದ (production cost) ಕಡೆ ಹೆಚ್ಚು ಗಮನ ಹರಿಸದೆ, ವಾಹನ ಗುಣಮಟ್ಟದ (quality) ಕಡೆ ಗಮಮನ ಕೇಂದ್ರೀಕರಿಸುವಂತೆ ಆಗ್ರಹಿಸಿದ್ದಾರೆ.

ಭಾರತೀಯ ಅಟೊಮೊಬೈಲ್ ಉತ್ಪಾದಕರ ಸೊಸೈಟಿಯ (ಎಸ್ ಐ ಎ ಎಮ್) 62ನೇ ವಾರ್ಷಿಕ ಅಧಿವೇಶನಲ್ಲಿ ಮಾತಾಡಿದ ಸಚಿವರು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ತಯಾರಕರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಆಮದನ್ನು ಕಡಿಮೆ ಮಾಡಿ ರಫ್ತನ್ನು ಹೆಚ್ಚಿಸಬೇಕು ಎಂದು ಹೇಳಿದರು.

‘ಆಟೋಮೊಬೈಲ್ ಉದ್ಯಮದಲ್ಲಿರುವ ಸ್ನೇಹಿತರಿಗೆ ನಾನು ಹೇಳಬಯಸುವದೇನೆಂದರೆ, ನಿಮ್ಮ ಗಮನ ಮತ್ತು ಫೋಕಸ್ ನೀವು ತಯಾರಿಸುವ ಉತ್ಪಾದನೆಯ ಗುಣಮಟ್ಟದ ಮೇಲೆ ಕೇಂದ್ರೀಕೃತವಾಗಿರಬೇಕೇ ಹೊರತು ಅದರ ವೆಚ್ಚದ ಮೇಲೆ ಅಲ್ಲ. ಯಾಕೆಂದರೆ ಜನರ ಅಭಿರುಚಿಗಳು ಈಗ ಬದಲಾಗುತ್ತಿವೆ,’ ಎಂದು ನೇರ ಮಾತಿಗೆ ಹೆಸರಾಗಿರುವ ಗಡ್ಕರಿ ಹೇಳಿದರು.

ಗುಜರಿ ನೀತಿಯನ್ನು ಉಲ್ಲೇಖಿಸಿದ ಸಚಿವರು ಸರಕು ಮತ್ತು ಸೇವಾ ತೆರಿಗೆಯನ್ನು (ಜಿ ಎಸ್ ಟಿ) ಕಡಿಮೆ ಮಾಡುವಂತೆ ಸಾರಿಗೆ ಮತ್ತು ಉಕ್ಕು ಸಚಿವಾಲಯಗಳು ಮತ್ತೊಮ್ಮೆ ಹಣಕಾಸು ಸಚಿವರನ್ನು ಆಗ್ರಹಿಸಸವುದಾಗಿ ಹೇಳಿದರು.

‘ನಿನ್ನೆ ಉಕ್ಕು ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಸಭೆಯೊಂದನ್ನು ನಡೆಸಿದೆ. ನಾವಿಬ್ಬರೂ ಪುನಃ ಹಣಕಾಸು ಸಚಿವರನ್ನು ಭೇಟಿಯಾಗಿ ಹಳೆ ವಾಹಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಜಿ ಎಸ್ ಟಿಯಲ್ಲಿ ವಿನಾಯಿತಿ ನೀಡಬೇಕೆಂದು ವಿನಂತಿಸಿಕೊಳ್ಳಲಿದ್ದೇವೆ,’ ಎಂದು ಹೇಳಿದ ಗಡ್ಕರಿ ಅವರು ಇದು ಎರಡೂ ಪಾರ್ಟಿಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದರು.

ಹಳೆ ವಾಹನಗಳನ್ನು ಸ್ಕ್ರ್ಯಾಪ್ ಮಾಡಿ ಹೊಸ ವಾಹನಗಳನ್ನು ಖರೀದಿಸ ಬಯಸುವವರಿಗೆ ಅಟೋಮೊಬೈಲ್ ಉತ್ಪಾದಕರು ಹೆಚ್ಚುವರಿ ವಿನಾಯಿತಿಗಳನ್ನು ನೀಡಬಹುದು ಎಂದು ಗಡ್ಕರಿ ಹೇಳಿದರು. ‘ಇದು ಕಡ್ಡಾಯ ಅಂತೇನೂ ನಾನು ಹೇಳುತ್ತಿಲ್ಲ. ಹಳೆ ವಾಹನಗಳನ್ನು ಗುಜರಿಗೆ ಹಾಕಿ ಟ್ರಕ್ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವರಿಗೆ ಉತ್ಪಾದರಕರು ಒಂದಷ್ಟು ವಿನಾಯಿತಿಗಳನ್ನು ನೀಡಬಹುದಾಗಿದೆ,’ ಎಂದು ಸಚಿವರು ಹೇಳಿದರು.

‘ಉತ್ಪಾದಕರು ಲಾರಿ ಅಥವಾ ಬಸ್ ಗಳಿಗೆ ಸುಮಾರು ರೂ. 50,000 ದಷ್ಟು ಮತ್ತು ಸಣ್ಣ ಪ್ರಮಾಣದ ವಾಹನಗಳಿಗೆ ಅದಕ್ಕಿಂತ ಕಡಿಮೆ ಮೊತ್ತದ ವಿನಾಯಿತಿ ನೀಡಬಹುದು ಅಂದುಕೊಳ್ಳುತ್ತೇನೆ,’ ಎಂದು ಅವರು ಹೇಳಿದರು.

ವಾಹನ ಗುಜರಿ ನೀತಿಯು ಏಪ್ರಿಲ್ 1, 2022 ರಿಂದ ಜಾರಿಗೆ ಬಂದಿದೆ. 2021-22ರ ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾಗಿರುವ ಗುಜರಿ ನೀತಿಯ ಪ್ರಕಾರ ಖಾಸಗಿ ವಾಹನಗಳಿಗೆ 20 ವರ್ಷಗಳ ನಂತರ ಫಿಟ್ನೆಸ್ ಟೆಸ್ಟ್ ಮಾಡಿಸಬೇಕಾಗುತ್ತದೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸುವ ವಾಹನಗಳಿಗೆ 15 ವರ್ಷಗಳ ನಂತರ.

ಹೆಚ್ಚುತ್ತಿರುವ ಲಾಜಿಸ್ಟಿಕ್ ವೆಚ್ಚವು ಭಾರತೀಯ ತಯಾರಕರನ್ನು ಸ್ಪರ್ಧಾತ್ಮಕವಾಗದಂತೆ ಮಾಡುತ್ತಿದೆ ಎಂಬ ಅಂಶವನ್ನು ಉಲ್ಲೇಖಿಸಿದ ಗಡ್ಕರಿ, ಮುಂದಿನ ಎರಡು ವರ್ಷಗಳಲ್ಲಿ ದೇಶದ ಲಾಜಿಸ್ಟಿಕ್ ವೆಚ್ಚವು ಪ್ರಸ್ತುತ ಶೇಕಡ 14-16 ರಿಂದ ಜಿಡಿಪಿಯ ಶೇಕಡ 10 ಕ್ಕೆ ಇಳಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರ ಪ್ರಕಾರ, ಚೀನಾದಲ್ಲಿ ಲಾಜಿಸ್ಟಿಕ್ ವೆಚ್ಚವು ಶೇಕಡ 8-10 ರಷ್ಟಿದ್ದರೆ, ಯುರೋಪಿಯನ್ ಒಕ್ಕೂಟದಲ್ಲಿ ಇದು 10-12 ಶೇಕಡರಷ್ಟಿದೆ.

ಆಟೋಮೊಬೈಲ್ ಕಂಪನಿಗಳು ಸೆಮಿಕಂಡಕ್ಟರ್‌ಗಳ ಅಭಾವ ಎದುರಿಸುತ್ತಿವೆ ಅನ್ನೋದನ್ನು ಸಚಿವರು ಅಂಗೀಕರಿಸಿದರು.

ಮಾರ್ಚ್ 2023 ರೊಳಗೆ ಪೂರ್ಣಗೊಳ್ಳುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ, ಬುಲೆಟ್ ರೈಲು ಯೋಜನೆಗಳನ್ನು ಸ್ಥಾಪಿಸಲು ಸ್ಥಳಾವಕಾಶವಿದೆ ಮತ್ತು ಅಂಥ ಪ್ರಸ್ತಾಪವನ್ನು ತಾವು ಸಂತೋಷದಿಂದ ಸ್ವಾಗತಿಸುವುದಾಗಿ ಸಚಿವ ಗಡ್ಕರಿ ಹೇಳಿದರು.

‘ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ 120 ಮೀಟರ್ ಅಗಲದ ಸ್ಥಳ ನನ್ನಲ್ಲಿ ಲಭ್ಯವಿದೆ. ಯಾರಾದರೂ ಬುಲೆಟ್ ಟ್ರೈನ್ ಯೋಜನೆಗೆ ಹೂಡಿಕೆ ಮಾಡಲು ಮುಂದೆ ಬಂದರೆ, ನಾನು ನಾಳೆ ಬೆಳಿಗ್ಗೆಯೇ ಅವರಿಗೆ ಭೂಮಿಯನ್ನು ನೀಡುತ್ತೇನೆ ಮತ್ತು ಅವರು ಕೆಲಸ ಪ್ರಾರಂಭಿಸಬಹುದು,’ ಎಂದು ಅವರು ಹೇಳಿದರು.

ಭಾರತಮಾಲಾ ಪರಿಯೋಜನೆಯ ಮೊದಲ ಹಂತದ ಭಾಗವಾಗಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗುತ್ತಿದೆ. 8 ಪಥಗಳ ಎಕ್ಸ್‌ಪ್ರೆಸ್‌ವೇ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಮೂಲಕ ಹಾದುಹೋಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada