Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Digital Live | ನೌಕರಿಗೆ ಸೇರಲು ಪೊಲೀಸ್ ಪ್ರಮಾಣಪತ್ರ ಅಗತ್ಯ ಎಂಬ ನಿಯಮ ಬೇಕೇ?

ನೌಕರಿಗೆ ಸೇರಲು ಪೊಲೀಸ್ ಪ್ರಮಾಣಪತ್ರ ಅಗತ್ಯವೇ? ಇದರಿಂದ ಕಾರ್ಮಿಕರಿಗೆ ಅಥವಾ ಕಂಪೆನಿಗೆ ಏನು ಲಾಭ? ಏನು ಕಷ್ಟ? ಟಿವಿ9 ಡಿಜಿಟಲ್ ಲೈವ್ ಸಂವಾದದ ಅಕ್ಷರ ರೂಪ ಇಲ್ಲಿದೆ.

TV9 Digital Live | ನೌಕರಿಗೆ ಸೇರಲು ಪೊಲೀಸ್ ಪ್ರಮಾಣಪತ್ರ ಅಗತ್ಯ ಎಂಬ ನಿಯಮ ಬೇಕೇ?
ವಿಸ್ಟ್ರಾನ್​ ಸಂಸ್ಥೆ
Follow us
TV9 Web
| Updated By: ganapathi bhat

Updated on:Apr 06, 2022 | 7:16 PM

ಬೆಂಗಳೂರು: ವಿಸ್ಟ್ರಾನ್ ಕಂಪೆನಿಯಲ್ಲಿ ಗಲಾಟೆ ಆದ ಕಾರಣ ದೊಡ್ಡ ಕಂಪೆನಿಗಳು ಹೂಡಿಕೆ ಮಾಡಲು ಯೋಚಿಸುವಂತಾಗಿದೆ. ಯಾರನ್ನು ನೇಮಕ ಮಾಡಬೇಕಾದರೂ ಪೊಲೀಸ್ ವೇರಿಫಿಕೇಷನ್ ಅಗತ್ಯ ಎಂಬ ನಿಯಮ ಜಾರಿಗೊಳಿಸಲಾಗಿದೆ. ಅದಕ್ಕಾಗಿ ಮೊದಲು ಆನ್‌ಲೈನ್ ಸಂದರ್ಶನ ಮಾಡಿ ಬಳಿಕ ಪೊಲೀಸ್ ಸರ್ಟಿಫಿಕೇಟ್ ಪಡೆಯಬೇಕಾಗಿದೆ. ಕಾರ್ಮಿಕನೊಬ್ಬ ಕೆಲಸ ಪಡೆಯಲು ಈ ಹಂತಗಳನ್ನು ದಾಟಬೇಕಾಗಿದೆ. ಈ ನಿಯಮಗಳು ಕೇವಲ ವಿಸ್ಟ್ರಾನ್​ಗೆ ಮಾತ್ರ ಸೀಮಿತ ಆಗಬಾರದು. ಕರ್ನಾಟಕದಾದ್ಯಂತ ಮುಂದೆ ಪೊಲೀಸರ‌‌ ಸರ್ಟಿಫಿಕೇಟ್ ಪಡೆದು ಕೆಲಸ ನೀಡುವಂತೆ ಆಗಬೇಕು ಎಂಬ ವಾದವೂ ಕೇಳಿಬಂದಿತ್ತು. ಇದರಿಂದ ಕಾರ್ಮಿಕನ ವಿವರ ಸಂಗ್ರಹಿಸುವುದು ಅಥವಾ ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂಬುದು ಆಶಯವಾಗಿದೆ.

ಆದರೆ ಈ ನಿಯಮಗಳಿಂದ ಕಾರ್ಮಿಕನಿಗೆ ತೊಂದರೆಯಾಗುತ್ತದೆ ಎಂಬ ವಾದವಿದೆ. ಕಂಪೆನಿಗೆ‌ ತೊಂದರೆ ಆಗುತ್ತದೆ ಎಂದೂ ಮಾತುಗಳು ಕೇಳಿಬಂದಿದೆ. ಒಟ್ಟಾರೆ ಇದರಿಂದ ಕೈಗಾರಿಕೆಗೆ ಆಗುವ ಒಳಿತೇನು? ಪೊಲೀಸರಿಗೆ ಅನುಕೂಲವೇನು? ಹೊಸ ಯೋಜನೆಯ ಕುರಿತ ಸರ್ಕಾರದ ಆಲೋಚನಾ ಕ್ರಮ ಸರಿಯಾ ತಪ್ಪಾ? ಎಂದು ಟಿವಿ9 ಡಿಜಿಟಲ್ ಲೈವ್ ಕಾರ್ಯಕ್ರಮ ನಡೆಸಿಕೊಟ್ಟಿತು. ಕಾರ್ಮಿಕ‌ ಮುಖಂಡರಾದ ಎನ್.ಕೆ. ದೇವದಾಸ್, ಮಧ್ಯವರ್ತಿ (ಕಾರ್ಮಿಕರನ್ನು ಕರೆತರುವವರು) ನಾಗರಾಜ್ ಕೆ., ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಆರ್. ಬಂಗೇರ ಚರ್ಚೆಯಲ್ಲಿ ಪಾಲ್ಗೊಂಡರು. ನಿರೂಪಕ ಆನಂದ್ ಬುರಲಿ ಕಾರ್ಯಕ್ರಮ ನಡೆಸಿಕೊಟ್ಟರು.

ಸಂವಾದದಲ್ಲಿ ಮಾತನಾಡಿದ ಕಾರ್ಮಿಕ‌ ಮುಖಂಡ ಎನ್.ಕೆ.ದೇವದಾಸ್ ಮಾತನಾಡಿ, ಈ ನಿಯಮಗಳಿಂದ ಕಾರ್ಮಿಕರಿಗೆ ತೊಂದರೆ ಇದೆ. ಆದರೆ, ಇದು ಈಗ ಜಾರಿಯಾದ ನಿಯಮವಲ್ಲ. ಸಾರ್ವಜನಿಕ ವಲಯದಲ್ಲಿ (ಸರ್ಕಾರಿ ಕೆಲಸದಲ್ಲಿ) ಈ ನಿಯಮಗಳು ಮೊದಲಿನಿಂದಲೂ ಇತ್ತು. ಖಾಸಗಿ ವಲಯದಲ್ಲಿ ಇದು ಹೊಸದು ಅಷ್ಟೆ ಎಂದು ದೇವದಾಸ್ ಹೇಳಿದರು.

ಈ ನಿಯಮದ ಅನುಸಾರ ಸ್ವಂತ ಊರಿನ (ತವರು) ಪೊಲೀಸ್ ಠಾಣೆಯಿಂದ ಸರ್ಟಿಫಿಕೇಟ್ ತರಬೇಕು. ಇದು ಕಾಯ್ದೆ ಅಲ್ಲ, ನಿಯಮವಷ್ಟೇ. ಆದರೆ, ಇದರಿಂದಾಗಿ ಕಾರ್ಮಿಕ ಅಥವಾ ಉದ್ಯೋಗ ಪಡೆಯುವವನಿಗೆ ತೊಂದರೆ ಆಗುತ್ತದೆ. ನಾಳೆ ಬನ್ನಿ ನಾಡಿದ್ದು ಬನ್ನಿ ಎಂದು ಪೊಲೀಸರು ಕಾರ್ಮಿಕರನ್ನು ಅಲೆದಾಡಿಸುವ ಸಂಭವವಿದೆ. ನಿಗದಿತ ಅವಧಿಯೊಳಗೆ ಕಾರ್ಮಿಕ ಸರ್ಟಿಫಿಕೇಟ್ ಕೊಡಬೇಕು ಎಂದರೆ, ಕೆಲಸಗಾರನಿಗೆ ವಿನಾಕಾರಣ ತೊಂದರೆ ಆಗಬಹುದು. ಲಂಚ ಇತ್ಯಾದಿ ಸಮಸ್ಯೆಗಳು ಎದುರಾಗಬಹುದು ಎಂದು ದೇವದಾಸ್ ತಿಳಿಸಿದರು.

ಯಾವುದೇ ಕಾರ್ಮಿಕನನ್ನು ಕೆಲಸಕ್ಕೆ ಸೇರಿಸುವಾಗ ಹಿನ್ನೆಲೆ ತಿಳಿದುಕೊಳ್ಳುವುದು ಅನಿವಾರ್ಯ ಅಲ್ವಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕ ವಲಯದಲ್ಲಿ ಕಾರ್ಮಿಕರ ಪೂರ್ಣ ವಿವರ ನೀಡಲು ಒಂದು ವರ್ಷದ ಅವಧಿ ಕೊಡುತ್ತಾರೆ. ಆದರೆ, ವರ್ಷವಾದರೂ ಕೆಲಸ ಆಗಿರುವುದಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ದುಡಿಮೆ ಮಾಡಿದ ನನ್ನ ಅನುಭವ ಎಂದು ಹೇಳಿದರು.

ಕಾರ್ಮಿಕ‌ ಹೋರಾಟದಲ್ಲಿ ಭಾಗಿಯಾಗಿ ಮೊಕದ್ದಮೆ ದಾಖಲಾಗಿದ್ದರೆ ಅಂಥವರನ್ನೂ ಕೆಲಸಗಾರನಾಗಿ ಸ್ವೀಕರಿಸಲು ಕಂಪೆನಿ ನಿರಾಕರಿಸಬಹುದು. ಆತ ಅಪರಾಧಿ ಆಗಿರಬೇಕೆಂದಿಲ್ಲ. ಆರೋಪಿ ಆಗಿರುತ್ತಾನೆ ಅಷ್ಟೆ. ಹಾಗಿದ್ದರೂ ಸಮಸ್ಯೆ ತಪ್ಪಿದ್ದಲ್ಲ ಎಂದು ದೇವದಾಸ್ ಅಭಿಪ್ರಾಯಪಟ್ಟರು.

ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಜೆ.ಆರ್. ಬಂಗೇರ ಮಾತನಾಡಿದರು. ಎಲ್ಲಾ ಕಡೆಯೂ ಕಾರ್ಮಿಕನನ್ನು ಕೆಲಸಕ್ಕೆ ಸೇರಿಸುವಾಗ ಆತನ ಹಿನ್ನೆಲೆ‌ ಪರೀಕ್ಷೆ ಮಾಡಲಾಗುತ್ತದೆ. ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬರುವವರ ಬಗ್ಗೆ ತಿಳಿಯಲಾಗುತ್ತದೆ. ವಿವಿಧ ಪ್ರಮಾಣ ಪತ್ರ, ದಾಖಲಾತಿಗಳನ್ನು ಪಡೆಯಲಾಗುತ್ತದೆ. ಹಾಗಾಗಿ, ಹೆಚ್ಚುವರಿ ನಿಯಮಾವಳಿಗಳು ಕಾರ್ಮಿಕರಿಗೆ ತೊಂದರೆ ನೀಡಬಹುದು ಎಂದು ಹೇಳಿದರು.

ಹಲವು ಕಡೆ, ಕಾರ್ಮಿಕನನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ವೈದ್ಯಕೀಯ ಪರೀಕ್ಷೆಯನ್ನೂ ಮಾಡಿಕೊಳ್ಳುತ್ತಾರೆ. ಅದೆಲ್ಲಾ ಮೀರಿ ಈಗ ಪೊಲೀಸ್ ಪ್ರಮಾಣ ಪತ್ರ ತರಬೇಕು ಎಂದು ಕಡ್ಡಾಯ ಮಾಡಿದರೆ ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದೇ ಕಷ್ಟವಾಗಬಹುದು. ಅಲೆದಾಟದ ಕಷ್ಟದಿಂದ ಅಥವಾ ಲಂಚದಂಥ ತೊಂದರೆಯಿಂದ ಕಾರ್ಮಿಕರು ಕೆಲಸಕ್ಕೆ ಸೇರಲು ಹಿಂದೇಟು ಹಾಕುವಂತೆ ಆಗಬಹುದು ಎಂದು ಬಂಗೇರ ತಿಳಿಸಿದರು.

ಪೊಲೀಸ್ ತನಿಖೆ ಅಗತ್ಯ ಇರುತ್ತದೆ. ಹಾಗಾದಾಗ ಮಾತ್ರ ಕಂಪೆನಿ ಅಥವಾ ಕೆಲಸಗಾರನಿಗೆ ವರ್ಚಸ್ಸು. ನಾವು ಕಾರ್ಮಿಕನ ಎಲ್ಲಾ ವಿವರಗಳನ್ನು ಪಡೆಯುತ್ತೇವೆ. ಪೊಲೀಸ್ ವೆರಿಫಿಕೇಷನ್ ಆದ ವರ್ಷವನ್ನೂ ಪರಿಶೀಲಿಸುತ್ತೇವೆ. ಇತರ ಅಗತ್ಯ ದಾಖಲೆಯನ್ನೂ ಕೇಳುತ್ತೇವೆ. ಹಿನ್ನೆಲೆ ತಿಳಿಯಲು ಕೆಲಸ ಮಾಡುತ್ತೇವೆ. ನಂತರವೇ ಬೇರೆಡೆಗೆ ಕೆಲಸಕ್ಕೆ ಕಳಿಹಿಸುವುದು ಎಂದು ಕಾರ್ಮಿಕ ಪೂರೈಕೆದಾರ ನಾಗರಾಜ್ ತಿಳಿಸಿದರು. ಅದು ನಮ್ಮ ಜವಾಬ್ದಾರಿಯೂ ಆಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಕೋಲಾರದ ವಿಸ್ಟ್ರಾನ್​ ಕಂಪನಿಗೆ ಮರುನೇಮಕ: ಪೊಲೀಸ್ ಠಾಣೆಯಲ್ಲಿ ಅಭ್ಯರ್ಥಿಗಳ ದಂಡು!

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ; ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಧರಣಿ ಮಾಡ್ತೇವೆ: ಕೋಡಿಹಳ್ಳಿ ಚಂದ್ರಶೇಖರ್

Published On - 8:24 pm, Tue, 9 March 21

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್