Maruti Suzuki Dzire CNG: ಅತ್ಯುತ್ತಮ ಮೈಲೇಜ್ ನೀಡುವ ಹೊಸ ಡಿಝೈರ್ ಸಿಎನ್​ಜಿ ಕಾರು ಬಿಡುಗಡೆ

Maruti Dzire CNG Price: ಮಾರುತಿ ಸುಜುಕಿ ಡಿಝೈರ್ ಸಿಎನ್‌ಜಿ ತನ್ನ ವಿಭಾಗದಲ್ಲಿ ಹ್ಯುಂಡೈ ಔರಾ ಸಿಎನ್‌ಜಿ ಮತ್ತು ಟಾಟಾ ಟಿಗೊರ್ ಸಿಎನ್‌ಜಿಯಂತಹ ಕಾರುಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ.

Maruti Suzuki Dzire CNG: ಅತ್ಯುತ್ತಮ ಮೈಲೇಜ್ ನೀಡುವ ಹೊಸ ಡಿಝೈರ್ ಸಿಎನ್​ಜಿ ಕಾರು ಬಿಡುಗಡೆ
Maruti Suzuki Dzire CNG
TV9kannada Web Team

| Edited By: Zahir PY

Mar 09, 2022 | 10:34 PM

Maruti Suzuki Dzire CNG: ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಡುವೆ, ಮಾರುತಿ ಸುಜುಕಿ ಹೊಸ ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಿದೆ. ದೇಶದ ಅತಿದೊಡ್ಡ ವಾಹನ ತಯಾರಕ ಕಂಪೆನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಅತ್ಯುತ್ತಮ ಮಾರಾಟವಾದ ಸೆಡಾನ್ ಕಾರು ಡಿಝೈರ್ (Maruti Suzuki Dzire) ನ ಸಿಎನ್‌ಜಿ ರೂಪಾಂತರವನ್ನು ಪರಿಚಯಿಸಿದೆ. ಡಿಝೈರ್ CNG ಎರಡು ಮಾಡೆಲ್​​ಗಳಲ್ಲಿ ಲಭ್ಯವಿದ್ದು- VXI (VXi) ಮತ್ತು ZXI (ZXi) ರೂಪಾಂತರಗಳಲ್ಲಿ ಈ ಕಾರನ್ನು ಖರೀದಿಸಬಹುದು.

DZire ಸೆಡಾನ್‌ನ CNG ರೂಪಾಂತರದ ಬಿಡುಗಡೆಯು ತೈಲ ಆಮದುಗಳನ್ನು ಕಡಿಮೆ ಮಾಡುವ ಮತ್ತು ಭಾರತದ ಪ್ರಾಥಮಿಕ ಶಕ್ತಿ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಪಾಲನ್ನು 6.2% ರಿಂದ 15% ಕ್ಕೆ ಹೆಚ್ಚಿಸುವ ಭಾರತ ಸರ್ಕಾರದ ದೃಷ್ಟಿಗೆ ಅನುಗುಣವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೋಲಿಸಿದರೆ CNG ಅನ್ನು ಶುದ್ಧ ಮತ್ತು ಹಸಿರು ಇಂಧನವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಸಿಎನ್‌ಜಿ ಉತ್ತಮ ಮೈಲೇಜ್ ನೀಡುತ್ತದೆ. CNG ಕಾರು ಮಾಲೀಕರಿಗೆ ಹೆಚ್ಚು ಆರ್ಥಿಕ ಆಯ್ಕೆಯಾಗಿದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.

Maruti Suzuki Dzire CNG ವೈಶಿಷ್ಟ್ಯ: ವಿನ್ಯಾಸದಲ್ಲಿ, DZire CNG ಪೆಟ್ರೋಲ್ ಎಂಜಿನ್ ಮಾಡೆಲ್​ನಂತೆಯೇ ಇದೆ. ಇದರಲ್ಲಿ ಮಾಡಲಾದ ಏಕೈಕ ಬದಲಾವಣೆಯೆಂದರೆ ಬೂಟ್ ಸ್ಟೋರೇಜ್‌ನಲ್ಲಿ ಸಿಎನ್‌ಜಿ ಕಿಟ್ ಅನ್ನು ಸೇರಿಸಿರುವುದು. CNG ಕಿಟ್ 1.2-ಲೀಟರ್ K-ಸೀರೀಸ್ ಡ್ಯುಯಲ್-ಜೆಟ್ ಡ್ಯುಯಲ್ VVT ಪೆಟ್ರೋಲ್ ಎಂಜಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 6,000 rpm ನಲ್ಲಿ 77 PS ಪವರ್ ಮತ್ತು 98.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ ಕಾರು 31.12 ಕಿ.ಮೀ ಮೈಲೇಜ್ ನೀಡಲಿದೆ.

ಮಾರುತಿ ಸುಜುಕಿ ಡಿಝೈರ್ ಸಿಎನ್‌ಜಿ ತನ್ನ ವಿಭಾಗದಲ್ಲಿ ಹ್ಯುಂಡೈ ಔರಾ ಸಿಎನ್‌ಜಿ ಮತ್ತು ಟಾಟಾ ಟಿಗೊರ್ ಸಿಎನ್‌ಜಿಯಂತಹ ಕಾರುಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. ಇದಲ್ಲದೇ, ಮಾರುತಿ ಸುಜುಕಿ ಡಿಝೈರ್​ನ ಸಿಎನ್‌ಜಿ ರೂಪಾಂತರವು ಸೆಲೆರಿಯೊ, ವ್ಯಾಗನ್‌ಆರ್‌ನಂತಹ ಕಾರುಗಳನ್ನು ಒಳಗೊಂಡಿರುವ ಇತರ ಸಿಎನ್‌ಜಿ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಮಾರುತಿ ಡಿಝೈರ್ ಸಿಎನ್‌ಜಿ VXI ವೆರಿಯಂಟ್‌ನ ಎಕ್ಸ್ ಶೋರೂಂ ಬೆಲೆ 8.14 ಲಕ್ಷ ರೂ. ಹಾಗೆಯೇ ಡಿಝೈರ್ ಸಿಎನ್‌ಜಿ ZXI ವೆರಿಯಂಟ್‌ನ ಎಕ್ಸ್ ಶೋ ರೂಂ ಬೆಲೆ 8.82 ಲಕ್ಷ ರೂ. ಎಂದು ನಿಗದಿ ಮಾಡಲಾಗಿದೆ.

ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada