Roof top solar: ಸೋಲಾರ್ ರೂಫ್ ಟಾಪ್‌ ವಿದ್ಯುತ್ ವ್ಯವಸ್ಥೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನಿಮಗೆ ಬೇಕಾದ ಸಂಪೂರ್ಣ ಮಾಹಿತಿ

Rooftop Solar Programme: ಸೋಲಾರ್ ರೂಫ್ ಟಾಪ್‌ ಅನ್ನು ಹೆಚ್ಚಿನ ಜನರು ಆಳವಡಿಸಿಕೊಳ್ಳದೇ ಇರಲು ಕ್ಲಿಷ್ಟ ಪ್ರಕ್ರಿಯೆ, ಸಬ್ಸಿಡಿ ಪಾವತಿಯ ವಿಳಂಬ ಸೇರಿದಂತೆ ನಾನಾ ಸಮಸ್ಯೆಗಳಿವೆ. ಆದರೆ ಈಗ ಅವೆಲ್ಲಾ ಸರಳಗೊಂಡಿವೆ... ಇಲ್ಲಿದೆ ನೋಡಿ ಪೂರ್ಣ ಮಾಹಿತಿ

Roof top  solar: ಸೋಲಾರ್ ರೂಫ್ ಟಾಪ್‌ ವಿದ್ಯುತ್ ವ್ಯವಸ್ಥೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನಿಮಗೆ ಬೇಕಾದ ಸಂಪೂರ್ಣ ಮಾಹಿತಿ
ವಿದ್ಯುತ್ ಕೊರತೆಗೆ ಸೋಲಾರ್ ರೂಫ್ ಟಾಪ್‌ ಪರಿಹಾರ!Image Credit source: Vishnu Gattupalli
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Jun 11, 2022 | 3:35 PM

ಭಾರತದಲ್ಲಿ ಒಂದೆರೆಡು ತಿಂಗಳ ಹಿಂದೆ ಕಲ್ಲಿದ್ದಲು ಪೂರೈಕೆಯ ಸಮಸ್ಯೆಯಿಂದ ವಿದ್ಯುತ್ ಕೊರತೆ ಎದುರಾಗಿತ್ತು. ಜೊತೆಗೆ ಬೇಸಿಗೆ ಕಾಲದಲ್ಲಿ ವಿದ್ಯುತ್ ಉತ್ಪಾದನೆಯ ಸಮಸ್ಯೆ ಸಹಜವಾಗಿಯೇ ಎದುರಾಗುತ್ತೆ. ಕಲ್ಲಿದ್ದಲು, ಜಲ ವಿದ್ಯುತ್ ಉತ್ಪಾದನೆಗೆ ಸಮಸ್ಯೆಗಳಿವೆ. ಆದರೇ, ಸೋಲಾರ್ ವಿದ್ಯುತ್ ಉತ್ಪಾದನೆಯಿಂದ (Solar energy) ದೇಶದ ವಿದ್ಯುತ್ ಕೊರತೆಗೆ ಪರಿಹಾರ ಸಿಗಲಿದೆ. ಮನೆ ಮನೆಗಳಲ್ಲಿ ಸೋಲಾರ್ ರೂಫ್ ಟಾಪ್ ಆಳವಡಿಸಿಕೊಳ್ಳಲು ಅವಕಾಶ ಇದೆ. ಪ್ರತಿಯೊಂದು ಮನೆಯೂ ವಿದ್ಯುತ್ ನಲ್ಲೂ ಸ್ವಾವಲಂಬನೆ ಸಾಧಿಸಬಹುದು. ಸೋಲಾರ್ ರೂಫ್ ಟಾಪ್ ಅನುಕೂಲಗಳೇನು? ಇದರಿಂದ ಯಾವ ರೀತಿಯ ಲಾಭವಾಗುತ್ತೆ (Rooftop Solar Programme) ಎಂಬುದರ ಕುರಿತ ಡೀಟೈಲ್ಸ್ ಇಲ್ಲಿದೆ ನೋಡಿ.

ವಿದ್ಯುತ್ ಕೊರತೆಗೆ ಸೋಲಾರ್ ರೂಫ್ ಟಾಪ್‌ ಪರಿಹಾರ!

ಭಾರತವು ಹಿಂದೆಂದೂ ಕಾಣದ ವಿದ್ಯುತ್ ಬಿಕ್ಕಟ್ಟುನ್ನು ಇತ್ತೀಚೆಗೆ ಎದುರಿಸಿತ್ತು. ದೇಶೀಯ ಕಲ್ಲಿದ್ದಲಿನ ಕೊರತೆಯು ವಿದ್ಯುತ್ ಸ್ಥಾವರಗಳಲ್ಲಿ ಅನಿಶ್ಚಿತ ಪರಿಸ್ಥಿತಿಯನ್ನು ಉಂಟುಮಾಡಿತ್ತು. ಇದು ವಿದ್ಯುತ್ ಕಡಿತ ಮತ್ತು ಲೋಡ್ ಶೆಡ್ಡಿಂಗ್‌ ಗೆ ಕಾರಣವಾಗುತ್ತದೆ. ದೇಶವು ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ 5% ರಷ್ಟು ಶಕ್ತಿಯ ಕೊರತೆಯನ್ನು ಕಂಡಿದೆ, ಕೆಲವು ರಾಜ್ಯಗಳು ತೀವ್ರ ವಿದ್ಯುತ್‌ ಕೊರತೆಯನ್ನು ವರದಿ ಮಾಡಿದೆ. ಈ ವಿದ್ಯುತ್ ಬಿಕ್ಕಟ್ಟು ಪರ್ಯಾಯ ವಿದ್ಯುತ್ ಮೂಲಗಳತ್ತ ಗಮನ ಹರಿಸುವಂತೆ ಮಾಡಿದೆ.

ಅಂತಹ ಒಂದು ತಂತ್ರಜ್ಞಾನವೇ ಮೇಲ್ಛಾವಣಿಯ ಸೌರ ನಿದ್ಯುತ್‌, ಅಂದರೇ ಸೋಲಾರ್ ರೂಫ್ ಟಾಪ್‌ ವ್ಯವಸ್ಥೆ. ಈ ಭರವಸೆ ಇದ್ದರೂ, ಭಾರತದಲ್ಲಿ ಇದರ ಬಳಕೆ ಕಡಿಮೆ. ಮೇಲ್ಛಾವಣಿ ಸೌರ ಸ್ಥಾವರವನ್ನು ಸ್ಥಾಪಿಸುವುದರಿಂದ ಗ್ರಾಹಕರಿಗೆ ಮತ್ತು ಸರ್ಕಾರಕ್ಕೆ ಹಲವಾರು ಪ್ರಯೋಜನಗಳಿವೆ. ಉದಾಹರಣೆಗೆ, ಅವರು ವಿದ್ಯುತ್ ಬಿಲ್‌ಗಳನ್ನು ಕಡಿತಗೊಳಿಸಲು ಸಹಾಯ ಮಾಡಬಹುದು. ಗ್ರೀನ್ ಎನರ್ಜಿಯ ಗುರಿ ಸಾಧಿಸುವ ಸರ್ಕಾರದ ಮಹತ್ವಾಕಾಂಕ್ಷೆಗೆ ಇದು ಹೊಂದಾಣಿಕೆ ಆಗುತ್ತೆ.

ಸೌರ ತಂತ್ರಜ್ಞಾನಗಳು ಸೂರ್ಯನ ವಿಕಿರಣವನ್ನು ಹೀರಿಕೊಳ್ಳುತ್ತವೆ ಮತ್ತು ಅದನ್ನು ವಿದ್ಯುತ್ ಆಗಿ ಪರಿವರ್ತಿಸುತ್ತಾವೆ. ಸೂರ್ಯನು ಸೌರ ಫಲಕದ ಮೇಲೆ ಬೆಳಗಿದಾಗ, ಫಲಕದಲ್ಲಿರುವ ದ್ಯುತಿವಿದ್ಯುಜ್ಜನಕ (PV) ಕೋಶಗಳು ಸೂರ್ಯನ ಬೆಳಕನ್ನು ಹೀರಿಕೊಳ್ಳುತ್ತವೆ. ವಿದ್ಯುತ್ ಪ್ರವಾಹದ ಸೃಷ್ಟಿಗೆ ಸಹಾಯ ಮಾಡುತ್ತದೆ. ಮೇಲ್ಛಾವಣಿಯ ಸೌರ ಸ್ಥಾವರವು ವಸತಿ ಅಥವಾ ವಾಣಿಜ್ಯ ಕಟ್ಟಡದ ಮೇಲೆ ಸೌರ ಫಲಕಗಳನ್ನು ಅಳವಡಿಸಿರುವುದನ್ನು ಸೂಚಿಸುತ್ತದೆ.

ಸೋಲಾರ್ ರೂಫ್ ಟಾಪ್ ಅನುಕೂಲಗಳು:

  1. ವೆಚ್ಚ ಉಳಿತಾಯ: ಇದು ಸಾಂಪ್ರದಾಯಿಕ ವಿದ್ಯುತ್ ಪೂರೈಕೆಗಿಂತ ಅಗ್ಗವಾಗಿದೆ ಮತ್ತು ಸರ್ಕಾರದ ಸಬ್ಸಿಡಿಗಳು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  2. ಕಡಿಮೆ ನಿರ್ವಹಣಾ ಶುಲ್ಕಗಳು: ಹೆಚ್ಚಿನ ಮೇಲ್ಛಾವಣಿ ಸೌರ ವ್ಯವಸ್ಥೆಗಳು 25 ವರ್ಷಗಳವರೆಗೆ ಜೀವಿತಾವಧಿಯನ್ನು ಹೊಂದಿರುತ್ತವೆ ಮತ್ತು ನಿಯಮಿತ ಶುಚಿಗೊಳಿಸುವಿಕೆ ಮತ್ತು ರಿಪೇರಿಗಳಂತಹ ಮೂಲಭೂತ ನಿರ್ವಹಣೆಯ ಅಗತ್ಯವಿರುತ್ತದೆ.
  3. ಹೆಚ್ಚುವರಿ ಭೂಮಿ ಅಗತ್ಯವಿಲ್ಲ: ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲು ಖಾಲಿ ಛಾವಣಿಯ ಜಾಗವನ್ನು ಬಳಸಿಕೊಳ್ಳಬಹುದಾದ್ದರಿಂದ ಹೆಚ್ಚುವರಿ ಭೂಮಿಯ ಅಗತ್ಯವಿಲ್ಲ.
  4. ಇಂಗಾಲದ ಹೆಜ್ಜೆಗುರುತು ಕಡಿತ: ಸೌರ ಶಕ್ತಿಯ ಶುದ್ಧ ಮತ್ತು ನವೀಕರಿಸಬಹುದಾದ ಮೂಲವಾಗಿದ್ದು ಅದು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  5. ಅನಾನುಕೂಲಗಳು: ಎಲ್ಲ ವಿಧದ ಛಾವಣಿಗಳಿಗೂ ಸೌರ ಫಲಕಗಳು ಸೂಕ್ತವಲ್ಲ. ಉದಾಹರಣೆಗೆ, ಹಳೆಯ ಮನೆಗಳಲ್ಲಿ ಬಳಸಿದ ಸ್ಲೇಟ್ ಅಥವಾ ಸೀಡರ್ ಟೈಲ್ಸ್ ನಲ್ಲಿ ಅವುಗಳನ್ನು ಹೊಂದಿಸಲು ಕಷ್ಟವಾಗಬಹುದು. ಸೌರ ವಿದ್ಯುತ್‌ ದೊಡ್ಡ ಹಣಕಾಸಿನ ಹೂಡಿಕೆಯಾಗಿರುವುದರಿಂದ, ಮುಂಬರುವ ವರ್ಷಗಳಲ್ಲಿ ಆಗ್ಗಾಗ್ಗೆ ಮನೆ ಬದಲಾಯಿಸುವ ಯುವ ಮನೆಮಾಲೀಕರಿಗೆ ಇದು ಸೂಕ್ತ ಆಯ್ಕೆಯಾಗಿರುವುದಿಲ್ಲ.

ಇದರ ಬೆಲೆಯೆಷ್ಟು?

ಮೇಲ್ಛಾವಣಿಯ ಸೌರ ವ್ಯವಸ್ಥೆಯನ್ನು ಸ್ಥಾಪಿಸುವ ವೆಚ್ಚವು ಬಳಸಲಾಗುವ ಮಾಡ್ಯೂಲ್‌ಗಳು ಮತ್ತು ಇನ್ವರ್ಟರ್‌ಗಳ ಗುಣಮಟ್ಟ ಮತ್ತು ಬೆಲೆಯೊಂದಿಗೆ ಬದಲಾಗುತ್ತದೆ. ಸರಾಸರಿಯಾಗಿ, 1 kW ಮೇಲ್ಛಾವಣಿಯ ಸೌರ ವ್ಯವಸ್ಥೆಯನ್ನು ಅಳವಡಿಸಲು 45,000 ರೂಪಾಯಿಯಿಂದ ರ 85,000 ರೂಪಾಯಿವರೆಗೂ ವೆಚ್ಚವಾಗಬಹುದು. ವಿದ್ಯುತ್ ಸಂಗ್ರಹಿಸಬೇಕಾದರೆ ಬ್ಯಾಟರಿಗಳಿಗೆ ಹೆಚ್ಚುವರಿ ವೆಚ್ಚವಾಗುತ್ತದೆ.

  1. ಅದೇ ರೀತಿ, 5 kW ಸೋಲಾರ್ ರೂಫ್ ಟಾಪ್‌ಗೆ 2,25,000 ರೂಪಾಯಿಯಿಂದ 3,25,000 ರೂವರೆಗೂ ವೆಚ್ಚವಾಗುತ್ತದೆ. ಮೇಲ್ಛಾವಣಿಯ ಸೌರ ವ್ಯವಸ್ಥೆಗಳನ್ನು ಪಾಕೆಟ್‌ನಲ್ಲಿ ಹಗುರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳ ವೆಚ್ಚವನ್ನು ಸಾಮಾನ್ಯವಾಗಿ 5-6 ವರ್ಷಗಳಲ್ಲಿ ಮರುಪಡೆಯಬಹುದು.
  2. ಯಾವುದೆಲ್ಲಾ ಸಬ್ಸಿಡಿಗಳಿವೆಯೇ? ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಗ್ರಾಹಕರಿಗೆ ಹಣಕಾಸಿನ ನೆರವು ನೀಡುತ್ತದೆ. ಆದಾಗ್ಯೂ, ಸಬ್ಸಿಡಿಯು ವಸತಿ ಆಸ್ತಿಗಳಿಗೆ ಮಾತ್ರ ಲಭ್ಯವಿದೆ ಮತ್ತು ವಾಣಿಜ್ಯ/ಕೈಗಾರಿಕಾ ಸಂಸ್ಥೆಗಳಿಗೆ ಅಲ್ಲ.
  3. ಸಬ್ಸಿಡಿಗಳ ವರ್ಗೀಕರಣ: 3 kW ಸಾಮರ್ಥ್ಯದವರೆಗೆ – 40%,  4-10 kW ಸಾಮರ್ಥ್ಯ – 20%, 10 kW ಮೇಲೆ – ಸಬ್ಸಿಡಿ ಇಲ್ಲ, GHS/RWA ಗ್ರಾಹಕರ ಸಂದರ್ಭದಲ್ಲಿ, 500 kWp ವರೆಗಿನ ಒಟ್ಟು ಸಾಮರ್ಥ್ಯಕ್ಕೆ 20% ಸಬ್ಸಿಡಿ ನಿಬಂಧನೆ ಇದೆ. ಪ್ರತಿ ಮನೆಗೆ 10 kWp ಗೆ ಸೀಮಿತವಾಗಿದೆ.

ಸೌರ ಮೇಲ್ಛಾವಣಿ ವ್ಯವಸ್ಥೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಗ್ರಾಹಕರು ತಮ್ಮ ವಿದ್ಯುತ್ ಸರಬರಾಜು ಕಂಪನಿಗಳ ಆನ್‌ಲೈನ್ ಪೋರ್ಟಲ್ ಮೂಲಕ ಮೇಲ್ಛಾವಣಿ ಸೌರ ವ್ಯವಸ್ಥೆಗಾಗಿ ಅರ್ಜಿ ಸಲ್ಲಿಸಬಹುದು: https://solarrooftop.gov.in/grid_others/discomPortalLink.

ಯೋಜನೆಯ ಬಗ್ಗೆ ಮಾಹಿತಿ ನೀಡಲು ಸರ್ಕಾರವು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ: 1800-180-3333

ಮೇಲ್ಛಾವಣಿಯ ಸೌರ ತಂತ್ರಜ್ಞಾನದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಭಾರತ ವಿಫಲವಾಗಿದೆ. 2022 ರ ವೇಳೆಗೆ 40GW ಮೇಲ್ಛಾವಣಿಯ ಸೌರ ಶಕ್ತಿ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ಸರ್ಕಾರವು ಹೊಂದಿತ್ತು, ಆದರೆ ಈ ಗುರಿ ತಲುಪಲು 25 GW ಕೊರತೆ ಇದೆ ಎಂದು ವರದಿಯೊಂದು ತಿಳಿಸಿದೆ. ಡಿಸೆಂಬರ್ 2020 ರ ಹೊತ್ತಿಗೆ, ಛಾವಣಿಯ ಸೌರವು ದೇಶದ ಸಂಪೂರ್ಣ ಸೌರ ಶಕ್ತಿ ಸಾಮರ್ಥ್ಯದ ಸುಮಾರು 20% ರಷ್ಟಿದೆ.

ಇಡೀ ದೇಶದಲ್ಲಿ ಸೋಲಾರ್ ರೂಫ್ ಟಾಪ್ ಅಥವಾ ಸೌರ ವಿದ್ಯುತ್ ನಿಂದ 6,792 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತಿದೆ. ಸೋಲಾರ್ ರೂಫ್ ಟಾಪ್‌ ಅನ್ನು ಹೆಚ್ಚಿನ ಜನರು ಆಳವಡಿಸಿಕೊಳ್ಳದೇ ಇರಲು ಕ್ಲಿಷ್ಟ ಪ್ರಕ್ರಿಯೆ, ಸಬ್ಸಿಡಿ ಪಾವತಿಯ ವಿಳಂಬ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಕಾರಣವಾಗಿವೆ.