ಟಾರ್ಕ್ ಮೋಟರ್ಸ್ ಕಂಪೆನಿಯ ಕ್ರಾಟೋಸ್ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಭಾರತದಲ್ಲಿ ಬಿಡುಗಡೆಯಾಗಿದೆ. ಸ್ಪೋರ್ಟ್ಸ್ ಲುಕ್ನೊಂದಿಗೆ ಬಿಡುಗಡೆಯಾಗಿರುವ ಈ ಮೋಟಾರ್ ಎರಡು ಮಾಡೆಲ್ಗಳಲ್ಲಿ ಬಿಡುಗಡೆಯಾಗಿದ್ದು, ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಂಬ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈಗಾಗಲೇ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬುಕ್ಕಿಂಗ್ ಕೂಡ ಆರಂಭವಾಗಿದ್ದು, ಕೇವಲ 999 ರೂಪಾಯಿ ಪಾವತಿಸಿ ಬುಕ್ ಮಾಡಿಕೊಳ್ಳಬಹುದು ಎಂದು ಟಾರ್ಕ್ ಕಂಪೆನಿ ತಿಳಿಸಿದೆ. ಆರಂಭಿಕ ಹಂತದಲ್ಲಿ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಪುಣೆಯಂತಹ ದೊಡ್ಡ ನಗರಗಳಲ್ಲಿ ವಿಸ್ತರಿಸಲಾಗುತ್ತಿದ್ದು, ಇದರ ಬಳಿಕ ಇತರೆ ನಗರಗಳ ಗ್ರಾಹಕರಿಗೆ ಈ ಬೈಕ್ ಸಿಗಲಿದೆ.
ಹೊಸ ಎಲೆಕ್ಟ್ರಿಕ್ ಬೈಕ್ನ ವಿಶೇಷತೆಗಳೇನು? ಈ ಮೋಟಾರ್ ಸೈಕಲ್ ಐಪಿ67 ರೇಟಿಂಗ್ ಪಡೆದುಕೊಂಡಿದೆ. ಅಲ್ಲದೆ, ಇದು 4 Kwh ಲಿಥಿಯಂ ಐಯಾನ್ ಬ್ಯಾಟರಿ ಇದರಲ್ಲಿದ್ದು, ಇದರಿಂದ 48V ವೋಲ್ಟೇಜ್ ಲಭ್ಯವಿರಲಿದೆ. ಆಕ್ಸಿಯಲ್ ಫ್ಲಕ್ಸ್ ಮಾದರಿಯ ಎಲೆಕ್ಟ್ರಿಕ್ ಮೋಟರ್ ಅನ್ನು ಈ ಮೋಟಾರ್ಸೈಕಲ್ನಲ್ಲಿ ನೀಡಲಾಗಿದ್ದು, ಇದು ಗರಿಷ್ಠ 7.5 Kw ಶಕ್ತಿಯನ್ನು ಮತ್ತು 28 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಕೇವಲ 4 ಸೆಕೆಂಡುಗಳಲ್ಲಿ ಗಂಟೆಗೆ 0-40 ಕಿಮೀ ವೇಗವನ್ನು ಮುಟ್ಟುತ್ತದೆ. ಈ ಎಲೆಕ್ಟ್ರಿಕ್ ಬೈಕಿನ ಗರಿಷ್ಠ ವೇಗ ಗಂಟೆಗೆ 105 ಕಿಲೋಮೀಟರ್ ತಲುಪಬಹುದು.
ಇತರೆ ವೈಶಿಷ್ಟ್ಯಗಳು: ವೇಗದ ಚಾರ್ಜಿಂಗ್ ಆಯ್ಕೆಯು Kratos R ಮೋಟಾರ್ಸೈಕಲ್ನಲ್ಲಿ ಮಾತ್ರ ಲಭ್ಯವಿರುತ್ತದೆ. ಇದು ಜಿಯೋ ಫೆನ್ಸಿಂಗ್ ಮತ್ತು ಫೈಂಡ್ ಮೈ ವೆಹಿಕಲ್ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಮೋಟರ್ವಾಕ್ ಅಸಿಸ್ಟೆಂಟ್ ವೈಶಿಷ್ಟ್ಯಗಳು, ಕ್ರ್ಯಾಶ್ ಅಲರ್ಟ್, ವೆಕೇಶನ್ ಮೋಡ್ ಮತ್ತು ಟ್ರ್ಯಾಕ್ ಮೋಡ್ ಅನಾಲೈಸ್ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿದೆ.
ಇನ್ನು ಈ ಬೈಕ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 180 ಕಿ.ಮೀ ವರೆಗೆ ಚಲಿಸಬಹುದು. ಕ್ರಾಟ್ರೋಸ್ ಸ್ಟ್ಯಾಂಡರ್ಡ್ ಮಾಡೆಲ್ ಬಿಳಿ ಬಣ್ಣದ ಆಯ್ಕೆಯಲ್ಲಿ ಲಭ್ಯವಿದ್ದು, ಉನ್ನತ ಮಾಡೆಲ್ ಬಿಳಿ, ನೀಲಿ, ಕೆಂಪು ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಅಂದಹಾಗೆ ದೆಹಲಿಯಲ್ಲಿ ಸ್ಟ್ಯಾಂಡರ್ಡ್ ವೇರಿಯಂಟ್ Kratos ಬೆಲೆ 1,02499 ರೂ. ಮತ್ತು Kratos R ಬೆಲೆ 1,17499 ರೂ.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(Tork Kratos New electric bike launched in India at Rs 1.02 lakh)