ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನ ಹಿಂಭಾಗದ ಆಸನಗಳ ಸೀಟ್-ಬೆಲ್ಟ್ ಅಲಾರಂ ಅನ್ನು ಕಡ್ಡಾಯಗೊಳಿಸುವ ನಿಯಮಗಳ ಕರಡನ್ನು ಜಾರಿಮಾಡಿದೆ
ಡ್ರೈವರ್, ಮುಂದಿನ ಮತ್ತು ಹಿಂದಿನ ಆಸನದಲ್ಲಿ ಕುಳಿತಿರುವ ಪ್ರಯಾಣಿಕರಲ್ಲಿ ಯಾರಾದರೂ ಸುರಕ್ಷಾ ಸೀಟ್-ಬೆಲ್ಟ್ ಧರಿಸಿರದಿದ್ದರೆ ಅದರ ಬಗ್ಗೆ ಚಾಲಕನ ಗಮನಕ್ಕೆ ತರುವುದನ್ನೇ ಸೀಟ್-ಬೆಲ್ಟ್ ರಿಮೈಂಡರ್ ಅಂತ ಅರ್ಥೈಸಬಹುದು.
ಟಾಟಾ ಸನ್ಸ್ ಸಂಸ್ಥೆಯ ಮಾಜಿ ಮುಖ್ಯಸ್ಥರಾಗಿದ್ದ ಸೈರಸ್ ಮಿಸ್ತ್ರಿ (Cyrus Mistry) ಅವರು ಕಾರು ಅಪಘಾತವೊಂದರಲ್ಲಿ ಸತ್ತ ಬಳಿಕ ರಸ್ತೆ ಮತ್ತು ವಾಹನಗಳಲ್ಲಿನ ಸುರಕ್ಷತೆಡೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಹೆಚ್ಚಿನ ಗಮನ ಹರಿಸುತ್ತಿವೆ. ಈ ಹಿನ್ನೆಲೆಯಲ್ಲೇ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (ministry) ಸೀಟು ಬೆಲ್ಟ್ ಗಳನ್ನು (seat-belt) ಧರಿಸುವುದಕ್ಕೆ ಸಂಬಂಧಿಸಿದಂತೆ ಕಾರುಗಳ ಎಲ್ಲಾ ಆಸನಗಳಲ್ಲಿ ಎಚ್ಚರಿಕೆಯ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸುವ ಕರಡು ನಿಯಮಗಳನ್ನು ಹೊರಡಿಸಿದೆ.
ಸದರಿ ಪ್ರಸ್ತಾವನೆಯ ಪ್ರಕಾರ, ಎಮ್ ಮತ್ತು ಎನ್ ವರ್ಗದ ವಾಹನಗಳಲ್ಲಿ ಸೀಟ್ ಬೆಲ್ಟ್ ರಿಮೈಂಡರ್‌ಗಳು ಅಥವಾ ಎಚ್ಚರಿಕೆಗಳು ಕಡ್ಡಾಯವಾಗಿರುತ್ತವೆ, ಹಿಂಭಾಗದ ಆಸನಗಳೂ ಸೇರಿದಂತೆ ಸೀಟ್ ಬೆಲ್ಟ್‌ಗಳನ್ನು ಬಿಗಿದುಕೊಂಡಿರದಿದ್ದರೆ ಆಡಿಯೋ-ವಿಡಿಯೋ ಎಚ್ಚರಿಕೆ ಕಾರಿನಲ್ಲಿರುವವರನ್ನು ಜಾಗೃತಗೊಳಿಸುತ್ತದೆ.
ಅಷ್ಟು ಮಾತ್ರವಲ್ಲದೆ ವಾಹನವು ಮಿತಿಮೀರಿದ ವೇಗದಲ್ಲಿ ಓಡುತ್ತಿದ್ದರೆ ಎಚ್ಚರಿಕೆ ಗಂಟೆ ಮೊಳಗುತ್ತದೆ ಮತ್ತು ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಅನ್ನು ಕಡೆಗಣಿಸಿದ ಹಾಗೆ ಕೈಪಿಡಿ ಲಭ್ಯವಿರುತ್ತದೆ.
ಡ್ರೈವರ್, ಮುಂದಿನ ಮತ್ತು ಹಿಂದಿನ ಆಸನದಲ್ಲಿ ಕುಳಿತಿರುವ ಪ್ರಯಾಣಿಕರಲ್ಲಿ ಯಾರಾದರೂ ಸುರಕ್ಷಾ ಸೀಟ್-ಬೆಲ್ಟ್ ಧರಿಸಿರದಿದ್ದರೆ ಅದರ ಬಗ್ಗೆ ಚಾಲಕನ ಗಮನಕ್ಕೆ ತರುವುದನ್ನೇ ಸೀಟ್-ಬೆಲ್ಟ್ ರಿಮೈಂಡರ್ ಅಂತ ಅರ್ಥೈಸಬಹುದು.
ಬಿಗಿಗೊಳಿಸದ ಸುರಕ್ಷತಾ ಬೆಲ್ಟ್ ಅನ್ನು ಪತ್ತೆಹಚ್ಚುವ ಡಿವೈಸೊಂದರ ಮೂಲಕ ಮೊದಲ ಮತ್ತು ಎರಡನೇ ಹಂತದ ಎಚ್ಚರಿಕೆಯನ್ನು ಚಾಲಕನಿಗೆ ನೀಡುವ ಹಾಗೆ ಸದರಿ ಸಿಸ್ಟಮ್ ಅನ್ನು ರಚಿಸಲಾಗಿದೆ.
‘ಮೊದಲ ಹಂತದ ಎಚ್ಚರಿಕೆ’ ಎಂದರೆ ಇಗ್ನಿಷನ್ ಸ್ವಿಚ್ ಕಾರ್ಯರೂಪಗೊಂಡಾಗ (ಎಂಜಿನ್ ಚಾಲನೆಯಲ್ಲಿರಲಿ ಅಥವಾ ಇಲ್ಲದಿರಲಿ) ಮತ್ತು ಚಾಲಕ ಮತ್ತು ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರು ಸುರಕ್ಷತಾ ಬೆಲ್ಟ್ ಅನ್ನು ಬಿಗಿದುಕೊಂಡಿರದ ಪಕ್ಷದಲ್ಲಿ ವಿಡಿಯೋ ಎಚ್ಚರಿಕೆ ಸಕ್ರಿಯಗೊಳ್ಳುತ್ತದೆ ಅಂತ ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಆಡಿಯೋ ಎಚ್ಚರಿಕೆಯನ್ನು ಆಯ್ಕೆಯ ಸ್ವರೂಪದಲ್ಲಿ ಅಳವಡಿಸಿಕೊಳ್ಳಬಹುದು. ‘ಎರಡನೇ ಹಂತದ ಎಚ್ಚರಿಕೆ’ ಎಂದರೆ ಚಾಲಕ ಮತ್ತು ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರು ಸುರಕ್ಷತಾ ಸೀಟು ಬೆಲ್ಟ್ ಬಿಗಿದುಕೊಂಡಿರದೇ ಚಾಲಕ ವಾಹನವನ್ನು ಚಲಾಯಿಸಿದರೆ ಸಕ್ರಿಯಗೊಳ್ಳುವ ಆಡಿಯೋ ಮತ್ತು ವಿಡಿಯೋ ಎಚ್ಚರಿಕೆ ಎಂದರ್ಥ.
ಎಂ ಮತ್ತು ಎನ್ ಶ್ರೇಣಿಯ ವಾಹನಗಳಿಗೆ ರಿವರ್ಸ್ ಪಾರ್ಕಿಂಗ್ ಅಲರ್ಟ್ ವ್ಯವಸ್ಥೆ ಅನ್ವಯವಾಗಲಿದೆ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ. ಎಮ್ ವರ್ಗದ ವಾಹನಗಳು ಎಂದರೆ ಪ್ರಯಾಣಿಕರನ್ನು ಸಾಗಿಸಲು ಕನಿಷ್ಠ ನಾಲ್ಕು ಚಕ್ರಗಳನ್ನು ಹೊಂದಿರುವ ವಾಹನಗಳು. ‘ಎನ್’ ವರ್ಗದ ವಾಹನಗಳು ಸಹ ನಾಲ್ಕು ಚಕ್ರಗಳನ್ನು ಹೊಂದಿರುತ್ತವಾದರೂ ಅವುಗಳನ್ನು ಪ್ರಮುಖವಾಗಿ ಸರಕು (ಗೂಡ್ಸ್) ಸಾಗಿಸಲು ಬಳಸಲಾಗುತ್ತದೆ ಮತ್ತು ಪ್ರಯಾಣಿಕರನ್ನು ಸಾಗಿಸಲು ಸಹ ಅಡ್ಡಿಯಿಲ್ಲ.
ಅಧಿಸೂಚನೆಯ ಪ್ರಕಾರ, ಮೂರು ಕಾರು ತಯಾರಕರ ಕಂಪನಿಗಳು ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು (ಫೀಡ್ ಬ್ಯಾಕ್) ಸಾರ್ವಜನಿಕಗೊಳಿಸಲು ಅಕ್ಟೋಬರ್ 5 ಕೊನೆಯ ದಿನಾಂಕವಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಾರಿನಲ್ಲಿ ಪ್ರಯಾಣಿಸುವವರೆಲ್ಲ ಸೀಟ್ ಬೆಲ್ಟ್‌ಗಳ ಧರಿಸಲೇಬೇಕಾದ ಅಗತ್ಯವನ್ನು ಪದೇ ಪದೇ ಹೇಳಿದ್ದಾರೆ.