World Consumer Day: ವಿಶ್ವ ಗ್ರಾಹಕ ದಿನ; ಗ್ರಾಹಕರೇ ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ಅರಿವಿದೆಯೇ?
ಗ್ರಾಹಕ ಹಕ್ಕುಗಳನ್ನು ಕಾಪಾಡಲು ನ್ಯಾಯಾಲಯಗಳೂ ಇರುತ್ತವೆ. ಹಾಗಾದರೆ ಗ್ರಾಹಕನ ಹಕ್ಕುಗಳು ಯಾವುವು? ಇಲ್ಲಿವೆ ವಿವರ.
ಇಂದು ವಿಶ್ವ ಗ್ರಾಹಕ ದಿನ. ಜಾಗತಿಕವಾಗಿ ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಸಂಘಟನೆಗಳು ಗ್ರಾಹಕ ದಿನವನ್ನು ಆಚರಿಸುತ್ತಿವೆ. ಪ್ರತಿಯೊಬ್ಬ ಗ್ರಾಹಕರಿಗೂ ಅವರದೇ ಆದ ಮೂಲಭೂತ ಹಕ್ಕುಗಳಿರುತ್ತವೆ. ಅವುಗಳನ್ನು ಪಡೆಯುವುದರಿಂದ ಯಾವುದೇ ಗ್ರಾಹಕನೂ ವಂಚಿತನಾಗಬಾರದು ಎಂಬುದೇ ವಿಶ್ವ ಗ್ರಾಹಕ ದಿನ ಆಚರಣೆಯ ಉದ್ದೇಶ. ಅಂದಹಾಗೆ ಭಾರತದಲ್ಲಿ ಮಾತ್ರ ಮಾರ್ಚ್ 24ರಂದು ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ.
ಬೆಂಗಳೂರು, ಮೈಸೂರು ಸೇರಿದಂತೆ ಬೃಹತ್ ನಗರಗಳಲ್ಲಿ ಗ್ರಾಹಕ ರಕ್ಷಣಾ ಒಕ್ಕೂಟಗಳು ಸಕ್ರಿಯವಾಗಿರುತ್ತವೆ. ಗ್ರಾಹಕ ಹಕ್ಕುಗಳಲ್ಲಿ ಯಾವುದೇ ಕುಂದುಕೊರತೆ ಬಂದಲ್ಲಿ ಜಿಲ್ಲಾ ವ್ಯಾಪ್ತಿಗಳಲ್ಲೂ ಗ್ರಾಹಕರ ಹಿತ ರಕ್ಷಣಾ ವೇದಿಕೆಗಳಿರುತ್ತವೆ. ಇವು ಗ್ರಾಹಕ ರಕ್ಷಣಾ ಒಕ್ಕೂಟಗಳು ಗ್ರಾಹಕರ ಹಿತ ರಕ್ಷಣೆ ಕಾಪಾಡುವ ಹೊಣೆ ಹೊತ್ತಿರುತ್ತವೆ. ಯಾವುದೇ ಒಬ್ಬ ಗ್ರಾಹಕ ಮೋಸ ಹೋಗದಂತೆ ತಡೆಯಲು, ಆತ ಕೊಂಡುಕೊಳ್ಳುವ ವಸ್ತುಗಳ ಬೆಲೆಗೆ ತಕ್ಕನಾಗಿರುವಂತೆ ವಸ್ತು ಅಥವಾ ಸೇವೆಗಳು ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಗ್ರಾಹಕ ಹಕ್ಕುಗಳ ಹಿತ ರಕ್ಷಣಾ ವೇದಿಕೆ ಹೊಂದಿರುತ್ತದೆ. ಯಾವುದೇ ಗ್ರಾಹಕ ತಾನು ಕೊಂಡ ವಸ್ತುವಿನಲ್ಲಿ ದೋಷ ಕಂಡುಬಂದಲ್ಲಿ ಗ್ರಾಹಕ ರಕ್ಷಣಾ ಸಮಿತಿಯ ಮೊರೆ ಹೋಗಬಹುದು.
ಹಾಗಾದರೆ ಗ್ರಾಹಕನ ಹಕ್ಕುಗಳು ಯಾವುವು? ಇಲ್ಲಿವೆ ವಿವರ.
1). ಸುರಕ್ಷತೆಯ ಹಕ್ಕು 2). ಮಾಹಿತಿ ಪಡೆಯುವ ಹಕ್ಕು 3). ಆಯ್ಕೆಯ ಹಕ್ಕು ಮತ್ತು ಆಲಿಸುವ ಹಕ್ಕು 4). ಕುಂದುಕೊರತೆಗಳನ್ನು ಪರಿಹರಿಸುವ ಹಕ್ಕು 5). ಗ್ರಾಹಕರ ಶಿಕ್ಷಣದ ಹಕ್ಕು
On World #ConsumerRights Day, let’s restate pledge to make consumers aware of their rights and responsibilities because a smart consumer helps reduce unfair trade practices & enhances market competitiveness. pic.twitter.com/Rtsrqt7GU0
— Achyuta Samanta (@achyuta_samanta) March 15, 2021
The World Consumer Rights Day raises global awareness about consumer needs and rights. It is important for us to restore this balance in the marketplace to promote consumer’s interest and prevent consumer exploitation. pic.twitter.com/nb0JJfsSOM
— Dr. Pramod Sawant (@DrPramodPSawant) March 15, 2021
ಗ್ರಾಹಕ ಹಕ್ಕುಗಳಲ್ಲಿ ಯಾವುದೇ ಕುಂದುಕೊರತೆ ಬಂದಲ್ಲಿ ಜಿಲ್ಲಾ ವ್ಯಾಪ್ತಿಗಳಲ್ಲೂ ಗ್ರಾಹಕರ ಹಿತ ರಕ್ಷಣಾ ವೇದಿಕೆಗಳಿರುತ್ತವೆ. ಅವುಗಳ ಮೂಲಕವು ಗ್ರಾಹಕರು ತಾವು ಕೊಂಡ ವಸ್ತು ಅಥವಾ ಪಡೆದ ಸೌಲಭ್ಯಗಳಲ್ಲಿ ಲೋಪದೋಷ ಕಂಡುಬಂದಲ್ಲಿ ಪರಿಹರಿಸಿಕೊಳ್ಳಬಹುದು. ಜಿಲ್ಲಾ ವೇದಿಕೆಯನ್ನು ಜಿಲ್ಲೆಯಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ 1989 ರ ಅನ್ವಯ ಸ್ಥಾಪಿಸಲಾಗಿದೆ. ಮತ್ತು ರಾಜ್ಯ ಸರ್ಕಾರ ಇಚ್ಚಿಸಿದಲ್ಲಿ ಹೆಚ್ಚುವರಿ ಜಿಲ್ಲಾ ವೇದಿಕೆಗಳನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬಹುದಾಗಿದೆ.
ಗ್ರಾಹಕ ಸೇವೆಗಳನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ನೀಡಬೇಕು ಎಂಬ ಕೂಗು ಇತ್ತೀಚಿಗೆ ಪ್ರಬಲವಾಗುತ್ತದೆ. ಗ್ರಾಹಕರು ತಮ್ಮ ಮಾತೃಭಾಷೆಗಳಲ್ಲಿ ಗ್ರಾಹಕ ಸೇವೆ ಪಡೆಯಬೇಕು. ಯಾವುದೇ ಗ್ರಾಹಕರೂ ಈ ಸೇವೆಗಳಿಂದ ವಂಚಿತನಾಗಬಾರದು ಎಂಬುದೇ ಈ ಬೇಡಿಕೆಯ ಉದ್ದೇಶವಾಗಿದೆ.
ರಾಜಕೀಯ,ಸಿನಿಮಾ,ಕ್ರಿಕೆಟ್ ,ಊಹಾ ಪೋಹಗಳಿಗೆ ಕೊಡುವಷ್ಟು ಹೊತ್ತು ,ನಮ್ಮ #ಕನ್ನಡದಲ್ಲಿ_ಗ್ರಾಹಕಸೇವೆ ಗೆ ಯಾರು ಕೊಡುವುದಿಲ್ಲ. ಇದರ ಅರಿವು ಮೂಡಿಸಿ , ನಮ್ಮ ಹಕ್ಕುಗಳನ್ನ ನಾವೇ ಕೇಳಿ ಪಡೆಯಬೇಕು.#ServeInMyLanguage #WorldConsumerRightsDay
— ರವಿ.ಏನ್/Ravi.N (@Ravi_Kaiwara) March 15, 2021
ಇದನ್ನೂ ಓದಿ: Gold Price | ಚಿನ್ನದ ದರ ಸತತ ಇಳಿಕೆ; ಖರೀದಿಗೆ ಮುಂದಾದ ಗ್ರಾಹಕರು