ಚಿನ್ನಾ.. ಸದ್ಯ ಬೇಡ ಚಿನ್ನ! ವಿಡಿಯೋ ಇದೆ

ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವ ಜೊತೆಗೆ ಕೊರೊನಾ ಮಾರಿಯ ಆರ್ಭಟ ಸಹ ಜೋರಾಗಿದೆ. ಇದರ ಜೊತೆ ಅಮೆರಿಕಾ ಚೀನಾ ನಡುವಿನ ವಾಣಿಜ್ಯ ಸಮರವು ಕೂಡ ಜಾಗಿತಕ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ.

ಹೀಗಾಗಿ, ಹೂಡಿಕೆದಾರರು ಸದಾಕಾಲಕ್ಕೆ ಸೇಫ್​ ಇನ್​ವೆಸ್ಟ್​ಮೆಂಟ್​ ಆಗಿರೋ ಬಂಗಾರದ ಕಡೆ ಒಲವು ತೋರುತ್ತಿದ್ದಾರೆ. ಪಾಶ್ಚಿಮಾತ್ಯ ಹೂಡಿಕೆದಾರರು ಇದೀಗ ಚಿನ್ನದ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ, ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು ಅದರ ದರ ಸಹ ಏರುತ್ತಿದೆ.

ಈ ನಡುವೆ ದೇಶದಲ್ಲಿ ಶ್ರಾವಣ ಮಾಸ ಕಾಲಿಟ್ಟಿದೆ.. ಮದುವೆ ಸೀಸನ್​ ಶುರುವಾಗಿದೆ. ಆದರೆ, ಗಗನಕ್ಕೇರುತ್ತಿರುವ ಚಿನ್ನದ ದರದಿಂದ ಹಲವಾರು ಕುಟುಂಬಗಳು ಮದುವೆ ದಿನಾಂಕ ನಿಗದಿ ಮಾಡಲು ಯೋಚನೆ ಮಾಡುವಂಥ ಪರಿಸ್ಥಿತಿ ಎದುರಾಗಿದೆ.

Related Tags:

Related Posts :

Category:

error: Content is protected !!