International Yoga Day 2022: ಯೋಗವನ್ನು ಯುವಕರು ಯಾಕೆ ಮಾಡಬೇಕು? ಯೋಗ ಥೆರಪಿಸ್ಟ್ ಹೇಳಿದ್ದೇನು ಗೊತ್ತಾ?

ಯೋಗ ಆರೋಗ್ಯಕರ ಜೀವನದ ಅಡಿಪಾಯ. ಕೆಲವರು ಯೋಗದ ಬಗ್ಗೆ ತಪ್ಪು ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ. ಅಂದರೆ ನಮ್ಮ ಜನಾಂಗದವರು ಯೋಗವನ್ನು ಮಾಡಬಾರದು, ಅದು ನಮ್ಮ ಆಚರಣೆ ಅಲ್ಲಾ ಅಂತ. ಆದರೆ ಅದೆಲ್ಲಾ ತಪ್ಪು ಕಲ್ಪನೆ ಯೋಗಾಸನವನ್ನು ಯಾರು ಬೇಕಾದರೂ ಮಾಡಬಹುದು.

International Yoga Day 2022: ಯೋಗವನ್ನು ಯುವಕರು ಯಾಕೆ ಮಾಡಬೇಕು? ಯೋಗ ಥೆರಪಿಸ್ಟ್ ಹೇಳಿದ್ದೇನು ಗೊತ್ತಾ?
ಯೋಗ ಥೆರಪಿಸ್ಟ್
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 21, 2022 | 10:09 AM

ಇಂದು ವಿಶ್ವ ಯೋಗ ದಿನ. ಯೋಗವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಕೀರ್ತಿ ನಮ್ಮ ಭಾರತಕ್ಕೆ ಸಲ್ಲುತ್ತದೆ. ಇಂದಿನ ಈ ದಿನ ಯೋಗದ ಅಗಾಧ ಒಲವನ್ನು ಹೊಂದಿರುವ ವ್ಯಕ್ತಿಯ ಬಗ್ಗೆ ಪರಿಚಯಿಸುತ್ತೇವೆ. ಅವರೇ ಉದಯ್ ಕುಮಾರ್. ಯೋಗಾಸನ ನಮ್ಮ ಮನಸಿನ ಚಿತ್ತ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳಲು ತುಂಬಾ ಸಹಕಾರಿ. ಅದಲ್ಲದೇ ಆರೋಗ್ಯಕ್ಕೂ ಯೋಗ ಒಳ್ಳೆಯದು. ಜಿಮ್ ವರ್ಕ್ವಟ್ ಅಂತೆಲ್ಲಾ ಹೋಗ್ತಾರೆ. ಇವ್ರ ಮಧ್ಯದಲ್ಲಿ ಇಲ್ಲೊಬ್ರು ಜಿಮ್‌ಗೆ ಹೋಗಿ ವರ್ಕ್ವಟ್ ಮಾಡೊದಕ್ಕಿಂತ ಯೋಗಾಸನವೇ ದೇಹಾರೋಗ್ಯಕ್ಕೂ ಮನಸ್ಸಿನ ಆರೋಗ್ಯಕ್ಕೂ ದೇಹಕ್ಕೂ ತುಂಬಾನೇ ಒಳ್ಳೆಯದು ಅಂತಾ ಹೇಳ್ತಾರೆ. ಅವರೇ, ಕರ್ನಾಟಕದ ಗಡಿ ಭಾಗದಲ್ಲಿರುವ ಬಾಯಾರ್‌ನ ಬೆರಿ ಪದವಿನ ಉದಯ್ ಕುಮಾರ್. ಫ್ರೌಡಶಾಲಾ ಶಿಕ್ಷಣವನ್ನು ಮಾಡುತ್ತಿದ್ದಾಗ ಯೋಗಾಸನ ಕಲಿಕೆಯನ್ನು ಪ್ರಾರಂಭಿಸಿದ ಇವರಿಗೆ ತನ್ನ ಪದವಿ ಶಿಕ್ಷಣದ ಸಮಯದಲ್ಲಿ ಹೆಚ್ಚಿನ ಆಸಕ್ತಿ  ಬೆಳೆಯಿತು. ನಂತರ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಯೋಗಿಕ್ ಸೈನ್ಸ್ ವಿಷಯದಲ್ಲಿ ಪೂರ್ಣಗೊಳಿಸುತ್ತಾರೆ. ಇದಾದ ಬಳಿಕ ಯೋಗ ಥೆರಪಿಸ್ಟ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ತಮ್ಮಲ್ಲಿಗೆ ಬರುವ ಅನೇಕ ರೋಗಿಗಳಿಗೆ ಯೋಗಾಭ್ಯಸವನ್ನು ಕಲಿಸಿಕೊಡುತ್ತಿದ್ದಾರೆ.

ಯೋಗದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿರುವ ಇವರು , ಯೋಗ ಬರಿ ಆಸನವಲ್ಲ ಅದು ನಮ್ಮ ಜೀವನ ಶೈಲಿ. ಇಂದಿನ ದಿನಗಳಲ್ಲಿ ಯುವಜನತೆ ಹೆಚ್ಚಾಗಿ ಜಿಮ್ ಕಡೆ ವಾಲುತ್ತಿದ್ದಾರೆ. ಸಿಕ್ಸ್ಪ್ಯಾಕ್, ವರ್ಕ್ವಟ್ ಅಂತಾ ದೇಹ ಸೌಂದರ್ಯನಾ ಹೆಚ್ಚಿಸಿಕೊಳ್ಳುವ ಸಲುವಾಗಿ ಆರೋಗ್ಯದ ಕಡೆಗಣನೆ ಮಾಡುತ್ತಿದ್ದಾರೆ. ಹೆಚ್ಚಿನ ಜಿಮ್ ವರ್ಕ್ವಟ್ ಹೃದಯದ ಆರೋಗ್ಯಕ್ಕೂ ಪೆಟ್ಟು. ಅದಲ್ಲದೆ ಇಂದಿನ ಹೆಚ್ಚಿನ ಜನರಿಗೆ ಯೋಗದ ಬಗ್ಗೆ ಗೊತ್ತಿಲ್ಲ, ಗೊತ್ತಿದ್ರೂ ಕೂಡಾ ಕಡೆಗಣನೆ ಮಾಡುತ್ತಾರೆ. ಏಕೆಂದರೆ ಕೆಲವರ ಪ್ರಕಾರ ಯೋಗವು ತುಂಬಾ ಕಷ್ಟಕರವಾದ್ದು, ಆದರೆ ಅದೆಲ್ಲಾ ತಪ್ಪು ಕಲ್ಪನೆ.

ಯೋಗ ಆರೋಗ್ಯಕರ ಜೀವನದ ಅಡಿಪಾಯ. ಕೆಲವರು ಯೋಗದ ಬಗ್ಗೆ ತಪ್ಪು ಅಭಿಪ್ರಾಯವನ್ನು ಇಟ್ಟುಕೊಂಡಿದ್ದಾರೆ. ಅಂದರೆ ನಮ್ಮ ಜನಾಂಗದವರು ಯೋಗವನ್ನು ಮಾಡಬಾರದು, ಅದು ನಮ್ಮ ಆಚರಣೆ ಅಲ್ಲಾ ಅಂತ. ಆದರೆ ಅದೆಲ್ಲಾ ತಪ್ಪು ಕಲ್ಪನೆ ಯೋಗಾಸನವನ್ನು ಯಾರು ಬೇಕಾದರೂ ಮಾಡಬಹುದು. ಉದಯ್ ಕುಮಾರ್ ಹೇಳುವಂತೆ ಯೋಗ ಚಿತ್ತ, ಅದು ಆಸನ ಮಾತ್ರವಲ್ಲ ಜೀವನ ಶೈಲಿಯಾಗಿದೆ. ಯೋಗದಲ್ಲಿ ಎಂಟು ಇನ್ಸ್ ಗಳು – ಮಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ದಾರಣ, ಧ್ಯಾನ, ಸಮಾದಿ. ಇವು ಯೋಗದ ಎಂಟು ಬಗೆಗಳು.

ಇದನ್ನೂ ಓದಿ
Image
International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
Image
International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
Image
Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
Image
International Yoga Day 2022: ಯಾವ ರಾಶಿಯವರು ಯಾವ ಯೋಗಾಸನಗಳನ್ನು ಮಾಡಬೇಕು? ಇಲ್ಲಿದೆ ಮಾಹಿತಿ

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ರಾಧಿಕಾ ನಾರಾಯಣ್​ ಫಿಟ್ನೆಸ್​ ರಹಸ್ಯವೇ ಯೋಗಾಸನ; ಇಲ್ಲಿವೆ ಫೋಟೋಗಳು

ಎಲ್ಲರಿಗೂ ಈ ವಿದ್ಯೆ ಒಲಿಯುವುದಿಲ್ಲ. ಸಿದ್ಧಿ ಪುರುಷ ಯೋಗಿಗಳಿಗೆ ಈ ಕಲೆ ಒಲಿಯುತ್ತದೆ. ನಾವು ಆಸನ, ಪ್ರಾಣಾಯಾಮ ಇವೆಲ್ಲವನ್ನು ಮಾಡಬಹುದು. ಇದು ಮಾತ್ರವಲ್ಲದೆ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಏಕಾಗ್ರತಾ ಚಿತ್ತದಿಂದ ಇರುವುದು ಯೋಗದ ಭಾಗವಾಗಿದೆ. ಇದೇ ಕಾರಣದಿಂದ ಅವರು ಹೇಳ್ತಾರೆ ಯೋಗ ಆಸನ ಮಾತ್ರವಲ್ಲದೆ ಜೀವನ ಶೈಲಿ. ಡಯಾಬಿಟಿಸ್, ಬಿ.ಪಿ, ಹೃದಯ ಸಂಬಂಧಿ ಕಾಯಿಲೆ, ತಲೆನೋವು(ಮೈಗ್ರೆನ್), ಖಿನ್ನತೆ ಹಾಗೂ ಇನ್ನಿತರ ದೇಹ ಸಂಬಂಧಿ ಕಾಯಿಲೆಗಳಿಗೆ ಯೋಗ ರಾಮಬಾಣವಾಗಿದೆ.

ಈ ಯೋಗಾಸನವನ್ನು ಆರು ವರ್ಷ ಪ್ರಾಯಾ ನಂತರ ಶುರು ಮಾಡಬಹುದು. ಮಹಿಳೆಯರು ಮುಟ್ಟಿನ ಸಮಯದಲ್ಲಿ ಯೋಗವನ್ನು ಮಾಡಬಾರದು. ಮತ್ತು ಗರ್ಭಿಣಿ ಮಹಿಳೆಯರು ಸೂಕ್ತ ಯೋಗ ತರಬೇತುದಾರರ ಸಲಹೆಯಂತೆ ಯೋಗ ಮಾಡಬಹುದು. ಯೋಗ, ಪ್ರಾಣಾಯಾಮವನ್ನು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಮಾಡಿದರೆ ಉತ್ತಮವಾಗಿರುತ್ತದೆ ಅಂತ ಯೋಗ ಥೆರಪಿಸ್ಟ್ ಉದಯ್ ಕುಮಾರ್ ಹೇಳುತ್ತಾರೆ. ನನ್ನ ಬಳಿ ೪೦ ವರ್ಷ ದಾಟಿದ ರೋಗಿಗಳು ಯೋಗ ತರಬೇತಿಗಾಗಿ ಬರುತ್ತಾರೆ. ಸೊಂಟ ನೋವು, ಬೆನ್ನು ನೋವು, ಇನ್ನಿತರ ಸಮಸ್ಯೆಗೆ ಯೋಗದ ಪರಿಹಾರವನ್ನು ಹರಸುತ್ತಾ ನನ್ನ ಬಳಿ ಬರುತ್ತಾರೆ. ಆದರೆ ಯುವಜನತೆ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿಲ್ಲ. ಅವರು ಜಿಮ್ ಅಂತಾನೆ ಹೋಗುತ್ತಾರೆ. ಅದು ಆರೋಗ್ಯಕ್ಕೆ ತೀರಾ ಒಳ್ಳೆಯದಲ್ಲ. ಯೋಗದಿಂದ ಸಿಕ್ಸ್ ಪ್ಯಾಕ್ ಬರದೇ ಇರಬಹುದು ಆದರೆ ಉತ್ತಮ ಆರೋಗ್ಯದ ಜೊತೆಗೆ ಮನಸ್ಸಿಗೆ ಏಕಾಗ್ರತೆಯನ್ನು ತಂದುಕೊಡುತ್ತದೆ. ನಾಲ್ಕೈದು ವರ್ಷಗಳಿಂದ ನಾನು ಪ್ರತಿನಿತ್ಯ ಯೋಗ ಮಾಡುತ್ತಿದ್ದೇನೆ. ಅಂದಿನಿಂದ ಇಲ್ಲಿಯವರೆಗೆ ತಲೆನೋವು, ಇನ್ನಿತರ ಆರೋಗ್ಯದ ಸಮಸ್ಯೆ ಕಾಡಿಲ್ಲ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಯೋಗದ ಕಡೆಗೆ ತಮ್ಮ ಒಲವನ್ನು ತೋರಿಸಬೇಕು ಅಂತ ಉದಯ ಕುಮಾರ್ ಹೇಳುತ್ತಾರೆ.

ಮಧುಶ್ರೀ ಅಂಚನ್ 

ಯೋಗದ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:07 am, Tue, 21 June 22