Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ

| Updated By: ಸಾಧು ಶ್ರೀನಾಥ್​

Updated on: Jun 21, 2022 | 6:06 AM

Thyroid and yoga: ಕೆಳಗೆ ಮುಖ್ಯವಾದ 5 ಯೋಗಾಸನಗಳನ್ನು ತಿಳಿಸಲಾಗಿದೆ. ಗಮನಿಸಿ, ಯೋಗಾಸನ ನಿಮ್ಮ ಥೈರಾಯ್ಡ್ ಅನ್ನು ಪೂರ್ತಿಯಾಗಿ ವಾಸಿ ಮಾಡುವುದಿಲ್ಲ. ಯೋಗಾಭ್ಯಾಸ ನಿಮ್ಮ ಥೈರಾಯ್ಡ್ ಸಮಸ್ಯೆಗೆ ಈಗಾಗಲೇ ನೀವು ತೆಗೆದುಕೊಳ್ಳುತ್ತಿರಬಹುದಾದ ಚಿಕಿತ್ಸೆಗೆ ಪೂರಕ.

Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
Follow us on

ನಾವೆಲ್ಲ ಚಿಕ್ಕವರಿದ್ದಾಗ ಬಹಳ ಅಪರೂಪಕ್ಕೆ ಥೈರಾಯ್ಡ್ ಸಮಸ್ಯೆ ಇರುವವರನ್ನು ನೋಡುತ್ತಿದ್ದೆವು. ಆದರೆ ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ರಾಸಾಯನಿಕ ಬಿಳಿ ಪುಡಿ ಉಪ್ಪಿನ ಉಪಯೋಗ ಜಾಸ್ತಿಯಾದಂತೆ ಥೈರಾಯ್ಡ್ ಸಮಸ್ಯೆ (Thyroid Disease) ತುಂಬಾ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ಗಂಟಲಿನ ಕೆಳಬಾಗದಲ್ಲಿ ಸ್ವಲ್ಪ ಹೊರಗೆ ಒಂದು ಚಿಟ್ಟೆ ಆಕಾರದಲ್ಲಿ ಈ ಥೈರಾಯ್ಡ್ ಗ್ರಂಥಿ ಇದೆ. ಇದರಿಂದ Triiodothyronine (T-3) ಮತ್ತು Thyroxine (T-4) ಎಂಬ ಹಾರ್ಮೋನ್ ಗಳು ಸ್ರವಿಸಲ್ಪಡುತ್ತವೆ. ಈ T-3 ಮತ್ತು T-4 ನಮ್ಮ ದೇಹದ ಬಹುತೇಕ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವ ಅಂಗಾಂಗಗಳನ್ನು ನಿಯತ್ರಿಸುತ್ತಿರುತ್ತದೆ.

ಅಂದರೆ ನಮ್ಮ ದೇಹ ಪರಿಪೂರ್ಣವಾಗಿ ಯಾವ ತೊಂದರೆಯೂ ಇಲ್ಲದೇ ಕಾರ್ಯನಿರ್ವಹಿಸಲು ಈ T-3 ಮತ್ತು T-4, ಅವರವರ ದೇಹಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಸ್ರವಿಸುತ್ತಿರಬೇಕು. ದೇಹದ ಅವಶ್ಯಕತೆಗಿಂತ ಕಮ್ಮಿಯಾದರೆ ಅದೇ Hypothyroidism ಹಾಗೂ ಜಾಸ್ತಿಯಾದರೆ Hyperthyroidism. ಹೆಚ್ಚಾದರೂ ಕಷ್ಟ, ಕಮ್ಮಿಯಾದರೂ ಕಷ್ಟ. ಹೆಚ್ಚಾಗಿ ಹೆಂಗಸರನ್ನೇ, ಅದರಲ್ಲೂ ಅಧಿಕ ತೂಕವುಳ್ಳವರನ್ನೇ (Obese) ಬಾಧಿಸುವ ಈ ತೊಂದರೆಗೆ ನಿರಂತರ ಯೋಗಾಭ್ಯಾಸ, ಯೋಗಾಸನ, ಪ್ರಾಣಾಯಾಮ ಮಾಡಿದ್ದಲ್ಲಿ ಸಾಕಷ್ಟು ಪರಿಹಾರ ಸಿಗುತ್ತೆ.

ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ

ಕೆಳಗೆ ಮುಖ್ಯವಾದ 5 ಯೋಗಾಸನಗಳನ್ನು ತಿಳಿಸಲಾಗಿದೆ. ಪ್ರತಿಯೊಂದು ಆಸನದಲ್ಲಿಯೂ ಮೊದಲು 30 ಸೆಕೆಂಡ್ ವರೆಗೆ ಇರಲು ಆರಂಭಿಸಿ ನಂತರ 2 ನಿಮಿಷಗಳ ವರೆಗೆ ಇರಲು ಅಭ್ಯಾಸ ಮಾಡಬೇಕು. ಕೊನೆಯ ಶವಾಸನದಲ್ಲಿ ಇಡೀ ನಿಮ್ಮ ದೇಹವನ್ನು ಸಡಿಲಗೊಳಿಸಿ, ಸಾಮಾನ್ಯ ಉಸಿರಾಟ ಮಾಡುತ್ತಾ ಕಣ್ಣು ಮುಚ್ಚಿ 5 ನಿಮಿಷ ನಿಮ್ಮ ಗಂಟಲಿನ ಭಾಗದಲ್ಲಾಗುವ ಬದಲಾವಣೆಯನ್ನು ಗಮನಿಸುತ್ತಾ ಮಲಗಿಬಿಡಿ. ನಂತರ ನಿಮ್ಮ ಬಲಗಡೆಯಿಂದ ನಿಧಾನವಾಗಿ ಏಳಿ.

ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ

  1. * ಪ್ರತಿಯೊಂದು ಆಸನವನ್ನು ಸರಿಯಾದ ರೀತಿಯಲ್ಲಿಯೇ ಮಾಡಬೇಕು. ಹಾಗಾಗಿ ಕೊಟ್ಟಿರುವ ಚಿತ್ರಗಳನ್ನು ಸರಿಯಾಗಿ ಗಮನಿಸಿ ಮತ್ತು ಸಾಧ್ಯವಾದಷ್ಟೂ ಯೋಗ ಗುರುಗಳ ಮೂಲಕವೆ ಕಲಿತುಕೊಳ್ಳಿ.
  2. *ಯೋಗಾಸನ ನಿಮ್ಮ ಥೈರಾಯ್ಡ್ ಅನ್ನು ಪೂರ್ತಿಯಾಗಿ ವಾಸಿ ಮಾಡುವುದಿಲ್ಲ. ಯೋಗಾಭ್ಯಾಸ ನಿಮ್ಮ ಥೈರಾಯ್ಡ್ ಸಮಸ್ಯೆಗೆ ಈಗಾಗಲೇ ನೀವು ತೆಗೆದುಕೊಳ್ಳುತ್ತಿರಬಹುದಾದ ಚಿಕಿತ್ಸೆಗೆ ಪೂರಕ.
  3. *ಈಗಾಗಲೇ ನೀವು ಥೈರಾಯ್ಡ್ ತೊಂದರೆಗೆ ಒಳಗಾಗಿದ್ದು ನಿಮ್ಮ ವೈದ್ಯರ ಸಲಹೆಯಂತೆ ಔಷಧ ಸೇವನೆ ಮಾಡುತ್ತಿದ್ದಲ್ಲಿ ಅದನ್ನು ನಿಲ್ಲಿಸಬೇಡಿ. ನೀವು ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದ ನಂತರ, ನಿಮ್ಮ Thyroid profile test report ನೋಡಿಕೊಂಡು ಅವರು ಔಷಧಿಯ ಪ್ರಮಾಣ ಕಡಿಮೆ ಮಾಡುತ್ತಾರೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಅವರ ದೇಹದ ಪರಿಸ್ಥಿತಿಗೆ ಅನುಗುಣವಾಗಿ ಬೇಗ ಅಥವಾ ನಿಧಾನವಾಗಿ ಆಗಬಹುದು.
  4. *ಸದ್ಯ ಥೈರಾಯ್ಡ್ ಸಮಸ್ಯೆ ಇಲ್ಲದವರು, ಮುಂದೆ ವಂಶ ಪಾರಂಪರ್ಯವಾಗಿ ಥೈರಾಯ್ಡ್ ಬರುವ ಸಾಧ್ಯತೆ ಇರುವವರು, ತುಂಬಾ ದಪ್ಪ ಇರುವವರು ಹಾಗೂ ಥೈರಾಯ್ಡ್ ಸಮಸ್ಯೆ ಪ್ರಾರಂಭಿಕ ಹಂತದಲ್ಲಿದ್ದು ಯಾವ ಔಷಧವನ್ನೂ ಇನ್ನೂ ಸೇವನೆ ಶುರು ಮಾಡದಿರುವವರು, ಈಗಲೇ ಯೋಗಾಭ್ಯಾಸ ಪ್ರಾರಂಭಿಸುವುದು ಒಳ್ಳೆಯದು. ಅದರಿಂದ ಮುಂದೆ ಥೈರಾಯ್ಡ್ ಬಾರದಂತೆ ಮತ್ತು ಜೀವನ ಪೂರ್ತಿ ಮಾತ್ರೆಗಳ ಸೇವನೆ ಮಾಡಬೇಕಾದ ಅನಿವಾರ್ಯತೆ ಮತ್ತು ಇತರ ಅನಾರೋಗ್ಯ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.
  5. *ನಿಮ್ಮ ಸಮಸ್ಯೆಯ ಶೀಘ್ರ ಪರಿಹಾರಕ್ಕಾಗಿ ಯೋಗಾಭ್ಯಾಸವನ್ನು ನಿತ್ಯ ಬೆಳಗ್ಗೆ ಅಥವಾ ಸಂಜೆ. ಸಾಧ್ಯವಾದರೆ ಎರಡೂ ಹೊತ್ತು ಮಾಡಲೇಬೇಕು.
  6. *ಎಲ್ಲದರ ಜೊತೆಗೆ ನೀವು ಸೇವಿಸುವ ಆಹಾರದ ಬಗ್ಗೆಯೂ ಗಮನವಿರಲಿ. ಬಾಳೆಹಣ್ಣು, ಎಲೆಕೋಸು, ಹೂಕೋಸು, ಕಡಲೆಕಾಯಿ ಬೀಜ, ಕಾಫಿ, ಟೀ ಸೇವನೆ ಬಿಡಿ ಅಥವಾ ಕಮ್ಮಿ ಮಾಡಿ. ದಿನಕ್ಕೆ 500 mg ಅಷ್ಟು ಅಶ್ವಗಂಧ ಸೇವನೆ ತುಂಬಾ ಒಳ್ಳೆಯದು. (ಚಿತ್ರ ಬರಹ: ಮಂಜುನಾಥ್ ಪ್ರಸಾದ್)