ಸಾವರಿನ್ ಗೋಲ್ಡ್​ಬಾಂಡ್​ ನೋಂದಣಿಗೆ ಜ.15 ಕೊನೆಯದಿನ; ಪ್ರತಿ ಗ್ರಾಂಗೆ ₹ 5104 ನಿಗದಿ

ಈ ಸರಣಿಯಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ ₹ 5154 ರೂ.ನಿಗದಿಪಡಿಸಲಾಗಿದೆ. ಆನ್​ಲೈನ್ ಖರೀದಿಗೆ ₹ 50 ರಿಯಾಯ್ತಿ ಘೋಷಿಸಲಾಗಿದೆ.

  • TV9 Web Team
  • Published On - 18:21 PM, 13 Jan 2021
ಪ್ರಾತಿನಿಧಿಕ ಚಿತ್ರ

ಸಾವರಿನ್ ಗೋಲ್ಡ್​ಬಾಂಡ್​ನ 10ನೇ ಸರಣಿ ಜನವರಿ 11ರಿಂದ ಪ್ರಾರಂಭವಾಗಿದ್ದು, ನೋಂದಣಿಗೆ ಇನ್ನೆರಡು ದಿನ ಅಂದರೆ ಜನವರಿ 15ರವರೆಗೆ ಅವಕಾಶ ಇದೆ. ಜನವರಿ 19ರಂದು ಬಾಂಡ್​ಗಳನ್ನು ವಿತರಿಸಲಾಗುತ್ತದೆ.

ಈ ಸರಣಿಯಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ ₹ 5104 ನಿಗದಿಪಡಿಸಲಾಗಿದೆ. ಆನ್​ಲೈನ್ ಖರೀದಿಗೆ ಪ್ರತಿ ಗ್ರಾಂ ಮೇಲೆ ₹ 50ರಷ್ಟು ರಿಯಾಯಿತಿ ನೀಡಲಾಗುವುದು. ಅಂದರೆ ಒಂದು ಗ್ರಾಂ ಗೋಲ್ಡ್ ಬಾಂಡ್​ ಅನ್ನು ₹ 5054ಕ್ಕೆ ಒಂದು ಖರೀದಿಸಲು ಅವಕಾಶವಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಈ ಬಗ್ಗೆ ಜನವರಿ 8ರಂದು ಆರ್​ಬಿಐ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ನೀವು ಕನಿಷ್ಠ 1 ಗ್ರಾಂ, ಗರಿಷ್ಠ 4 ಕೆಜಿಯವರೆಗಿನ ಗೋಲ್ಡ್ ಬಾಂಡ್​ ಪಡೆಯಬಹುದಾಗಿದೆ.

ಕಳೆದ ಆರು ತಿಂಗಳುಗಳಿಂದಲೂ 10 ಗ್ರಾಂ ಚಿನ್ನದ ಬೆಲೆ ₹ 50 ಸಾವಿರಕ್ಕಿಂತ ಕಡಿಮೆಯಾಗಿಲ್ಲ. ಡಿಸೆಂಬರ್ 28ರಿಂದ ಜನವರಿ 1ರವರೆಗೆ ಸಾವರಿನ್​ ಗೋಲ್ಡ್ ಬಾಂಡ್​ನ (SGB) 9ನೇ ಸರಣಿ ಆರಂಭವಾಗಿತ್ತು. ಆ ಆವೃತ್ತಿಯಲ್ಲಿ ಪ್ರತಿ ಗ್ರಾಂ ₹ 5000 ನಿಗದಿಪಡಿಸಲಾಗಿತ್ತು.

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?