ಮರಳುಗಾಡಲ್ಲಿ IPL ಗದ್ದುಗೆ ಏರುತ್ತಾರಾ ಡೆಲ್ಲಿ ರಾಜರು? ಸಮರಾಭ್ಯಾಸ ಹೀಗಿದೆ ನೋಡಿ

ಕೊರೊನಾ ಸಂಕಷ್ಟದ ನಡುವೆ ಯುಎಇಯಲ್ಲಿ ಐಪಿಎಲ್ 2020 ಆರಂಭವಾಗುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇ ತಲುಪಿದ್ದು ಸಿದ್ಧತೆಗಳನ್ನು ಪ್ರಾರಂಭಿಸಿವೆ. ದೆಹಲಿ ಕ್ಯಾಪಿಟಲ್ಸ್ ಈ ಆವೃತ್ತಿಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪ್ರಾರಂಭಿಸಲಿದೆ. ಸೆಪ್ಟೆಂಬರ್ 20 ರಂದು ಈ ಪಂದ್ಯ ದುಬೈನಲ್ಲಿ ನಡೆಯಲಿದೆ.


ಮರಳುಗಾಡಿನಲ್ಲಿ ಸಮರಾಭ್ಯಾಸ ಪ್ರಾರಂಭಿಸಿರುವ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಹೆಚ್ಚಾಗಿ ಯುವ ಆಟಗಾರರೇ ತಂಡದ ಆಧಾರ ಸ್ತಂಭವಾಗಲ್ಲಿದ್ದಾರೆ.


ಈ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆಸಿದೆ.


ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಇನ್ನೂ ಸಹ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಂಡದ ಕಣ್ಣುಗಳು ಪ್ರಶಸ್ತಿಯ ಮೇಲಿದೆ. ದೆಹಲಿ ಕ್ಯಾಪಿಟಲ್ಸ್ ತಂಡವು ರಬಾಡಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದೆ.


ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ದೆಹಲಿ ಕ್ಯಾಪಿಟಲ್ಸ್ ತಂಡದ ಯುವ ನಾಯಕ ಶ್ರೇಯಸ್ ಅಯ್ಯರ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಐಪಿಎಲ್ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ತಂಡವನ್ನು ಉತ್ತಮವಾಗಿ ಮುನ್ನಡೆಸಲಿದ್ದಾರೆ ಎಂದು ಶಿಖರ್ ಧವನ್ ಹೇಳಿದ್ದಾರೆ.


ತಂಡದ ಬಲ ಹೆಚ್ಚಿಸಲು ದೆಹಲಿಯಲ್ಲಿ ಆರ್ ಅಶ್ವಿನ್, ಅಜಿಂಕ್ಯ ರಹಾನೆ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರಂತಹ ಆಟಗಾರರು ಸೇರಿದ್ದಾರೆ. ಅಭ್ಯಾಸದ ಸಮಯದಲ್ಲಿ ಇಶಾಂತ್ ಶರ್ಮಾ ಬೌಲಿಂಗ್ ಅಭ್ಯಾಸ ಮಾಡಿದ್ದು ಹೀಗೆ.


ದೆಹಲಿ ಕ್ಯಾಪಿಟಲ್ಸ್ ತಂಡ ಹೀಗಿದೆ- ಶ್ರೇಯಾಸ್ ಅಯ್ಯರ್ (ಕ್ಯಾಪ್ಟನ್), ಕಗಿಸೊ ರಬಾಡಾ, ಮಾರ್ಕಸ್ ಸ್ಟೊಯಿನಿಸ್, ಸಂದೀಪ್ ಲಮಿಚಾನೆ, ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಶಿಮ್ರಾನ್ ಹೆಟ್ಮಿಯರ್, ಡೇನಿಯಲ್ ಸ್ಯಾಮ್ಸ್, ಅಲೆಕ್ಸ್ ಕ್ಯಾರಿ, ಮೋಹಿತ್ ಶರ್ಮಾ, ಪೃಥ್ವಿ ಶಾ, ಖಾನ್, ಅಕ್ಷರ್ ಪಟೇಲ್, ತುಷಾರ್ ದೇಶಪಾಂಡೆ, ಎನ್ರಿಚ್ ನಾರ್ಟ್ಜೆ, ರಿಷಭ್ ಪಂತ್, ಹರ್ಷಲ್ ಪಟೇಲ್, ಕೀಮೋ ಪಾಲ್, ಅಮಿತ್ ಮಿಶ್ರಾ ಶಾಮ್.

(Photo courtesy: Delhi Capitals Twitter)

Related Tags:

Related Posts :

Category:

error: Content is protected !!