IPL 2020: ಕಪ್​ ಗೆಲ್ತಾರಾ ಕೊಲ್ಕತ್ತಾ ಹುಡುಗರು, ಹೇಗಿದೆ ಶಾರುಖ್ ತಂಡದ ಸಮರಾಭ್ಯಾಸ?

ಕೆರಿಬಿಯನ್​ ಲೀಗ್​ನಲ್ಲಿ ಶಾರುಖ್ ಖಾನ್ ಒಡೆತನದ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಹೀಗಾಗಿ ಶಾರುಖ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಆವೃತ್ತಿಯ ಮೊದಲ ಪಂದ್ಯವನ್ನು ಇಂದು ಆಡುತ್ತಿದೆ. ತಂಡವು ಗೆಲುವಿನೊಂದಿಗೆ ತಮ್ಮ ಖಾತೆ ತೆರೆಯಲು ಪಣ ತೊಟ್ಟಿದ್ದು, ಗೆಲುವನ್ನು ತಮ್ಮದಾಗಿಸಿಕೊಳ್ಳಲು ಭಾರಿ ಸಮರಾಭ್ಯಾಸ ಮಾಡುತ್ತಿದೆ.

ಅಕ್ಟೋಬರ್ 15ಕ್ಕೆ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಬೇಕಾ..? ಬೇಡ್ವಾ..?


ಮೊದಲ ಬಾರಿಗೆ ಐಪಿಎಲ್‌ ರಣಾಂಗಣಕ್ಕೆ ಕಾಲಿಡುತ್ತಿರುವ ಅಮೆರಿಕದ ಮೊದಲ ಕ್ರಿಕೆಟ್​ ಆಟಗಾರ ಆಲಿ ಖಾನ್​ ಅವರ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಹೀಗಾಗಿ ಆಲಿ ಖಾನ್ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ.


ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದಲ್ಲಿ ವಿಕೆಟ್‌ ಕೀಪಿಂಗ್​ ವಿಭಾಗದಲ್ಲಿ ಮಿಂಚುತ್ತಿರುವ ದಿನೇಶ್​ ಕಾರ್ತಿಕ್ ಅತ್ಯುತ್ತಮ ದಾಂಡಿಗನೂ ಕೂಡ. ಹೀಗಾಗಿ ಡೆತ್​ ಓವರ್​ಗಳಲ್ಲಿ ದಿನೇಶ್​ ಕಾರ್ತಿಕ್ ತಂಡಕ್ಕೆ ಆಸರೆಯಾಗಬಲ್ಲರು.


ಮರಳುಗಾಡಿನ ಐಪಿಎಲ್​ಗೆ ರೆಡಿಯಾಗಿರುವ ಕೊಲ್ಕತ್ತಾ ಹುಡುಗರು ಅಭ್ಯಾಸದೊಂದಿಗೆ ಮೋಜುಮಸ್ತಿಯಲ್ಲೂ ಬಿಂದಾಸ್​ ಆಗಿ ಕಾಲ ಕಳೆಯುತ್ತಿದ್ದಾರೆ. ಅಭ್ಯಾಸದ ನಂತರ ಬಿಸಿಲ ಬೇಗೆಯಿಂದ ಬಸವಳಿದ ಕೊಲ್ಕತ್ತಾ ಹುಡುಗರು ಶರ್ಟ್​ ಕಳಚಿ ಪೋಸು ಕೊಟ್ಟಿದ್ದು ಹೀಗೆ.


ಚೈನಾ ಮ್ಯಾನ್​ ಖ್ಯಾತಿಯ ಕುಲ್​ದೀಪ್​ ಯಾದವ್​ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅಭ್ಯಾಸದ ಸಮಯದಲ್ಲಿ ಕ್ಯಾಮೆರಾ ಕಣ್ಣಿಗೆ ಯಾದವ್​ ಸಿಕ್ಕಿ ಬಿದಿದ್ದು ಹೀಗೆ.


ಕೆರಿಬಿಯನ್ ದೈತ್ಯ ಆಂಡ್ರೆ ರಸೆಲ್​ ಮೇಲೆ ಈ ಆವೃತ್ತಿಯಲ್ಲಿ ಭಾರಿ ನಿರೀಕ್ಷೆಗಳಿವೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸುವ ಸಾಮರ್ಥ್ಯ ಹೊಂದಿರುವ ರಸೆಲ್​ ಯಾವುದೇ ಸಂದರ್ಭದಲ್ಲೂ ಪಂದ್ಯದ ದಿಕ್ಕನೇ ಬದಲಿಸಬಲ್ಲರು.


ತಂಡದಲ್ಲಿ ಯಾವ ಕ್ರಮಾಂಕದಲ್ಲೂ ಬ್ಯಾಟಿಂಗ್​ ಇಳಿದು ಘರ್ಜಿಸುವ ಸಾಮರ್ಥ್ಯ ಹೊಂದಿರುವ ನಿತಿಶ್ ರಾಣಾ ಅಭ್ಯಾಸದ ಸಮಯದಲ್ಲಿ ಕಾಣಿಸಿಕೊಂಡಿದ್ದು ಹೀಗೆ.


ಕೆಕೆಆರ್​ ಆರಂಭಿಕ ಆಟಗಾರ ಶುಬ್ಮಾನ್ ಗಿಲ್​ಗೆ ಅಭ್ಯಾದ ಸಮಯದಲ್ಲಿ ತಂಡದ ಕೋಚ್​ ಮೇಕಲಂ ತಮ್ಮ ಅನುಭವವನ್ನು ಧಾರೆ ಎರೆದಿದ್ದು ಹೀಗೆ.

(Photo courtesy: KolkataKnightRiders Twitter)

Related Tags:

Related Posts :

Category:

error: Content is protected !!