ಎಬಿ ಡಿವಿಲಿಯರ್ಸ್​ಗೆ ಚಹಲ್​ ಮೇಕಪ್​, ಎಬಿ ಡಿ ಬೇಸರಗೊಂಡಿದ್ಯಾಕೆ?

ಅಭಿಮಾನಿಗಳಿಲ್ಲದೇ ಬೇಸರ
ದೊಡ್ಡ ಪ್ರಮಾಣದ ಅಭಿಮಾನಿಗಳ ಎದುರು ಆಡುತ್ತಿದ್ದಾಗ, ಆಟಗಾರರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತಿತ್ತು. ಆದ್ರೆ ಈ ಬಾರಿಯ ಟೂರ್ನಿಯಲ್ಲಿ ಅಭಿಮಾನಿಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಎಬಿಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಬಿಡಿಗೆ ಚಹಲ್ ಮೇಕಪ್
ಆರ್​ಸಿಬಿ ತಂಡದ ಸ್ಪಿನ್ನರ್ ಯಜ್ವಿಂದರ್ ಚಹಲ್, ಎಬಿ ಡಿವಿಲಿಯರ್ಸ್​​ಗೆ ಮೇಕ್​ಅಪ್ ಮಾಡುತ್ತಿರೋ ವಿಡಿಯೊವೊಂದನ್ನ ಪೋಸ್ಟ್ ಮಾಡಿದ್ದಾರೆ. ನಾನು ಎಬಿಡಿಗೆ ತಮಾಷೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನೀರಿನಲ್ಲಿ ಮಿಂದೆದ್ದ ಆಟಗಾರರ
ದುಬೈ ಬಿಸಿಲಿಗೆ ಬಸವಳಿದಿರೋ ಆರ್​ಸಿಬಿ ಆಟಗಾರರು, ಅಭ್ಯಾಸದ ನಂತ್ರ ಸ್ವಿಮ್ಮಿಂಗ್​ಫುಲ್​ನಲ್ಲಿ ಮಿಂದೆದ್ದಿದ್ದಾರೆ. ವಿರಾಟ್ ಕೊಹ್ಲಿ, ಉಮೇಶ್ ಯಾದವ್ ಸೇರಿದಂತೆ ಆರ್​ಸಿಬಿ ಆಟಗಾರು ನೀರಿನಲ್ಲೇ ವಾಲಿಬಾಲ್ ಆಡಿದ್ದಾರೆ.

ಪವನ್​ ಬರ್ತ್​ಡೇ ಸಂಭ್ರಮ
ಆರ್​ಸಿಬಿ ತಂಡದಲ್ಲಿರೋ ಕನ್ನಡಿಗ ಪವನ್ ದೇಶಪಾಂಡೆ ಬುಧವಾರ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು. ಆರ್​ಸಿಬಿ ತಂಡ ಪವನ್​ಗೆ ಕನ್ನಡದಲ್ಲಿ ಟ್ವೀಟ್ ಮಾಡಿದ್ದು, ನಗು ನಗುತಾ ಬಾಳು ನೀನು ನೂರು ವರುಷ ಅಂತ ಅಭಿನಂದಿಸಿದೆ.

ಸಿಎಸ್​ಕೆ ಕ್ಯಾಂಪ್​ನಲ್ಲಿ ಭಯ
ಋತುರಾಜ್ ಗಾಯಕ್ವಾಡ್​ಗೆ ಮತ್ತೆ ಕೊರೊನಾ ಪಾಸಿಟಿವ್ ಆಗಿರೋದ್ರಿಂದ, ಚೆನ್ನೈ ತಂಡದಲ್ಲಿ ಆತಂಕ ಶುರುವಾಗಿದೆ. ಋತುರಾಜ್ ಮತ್ತಷ್ಟು ದಿನ ಕ್ವಾರಂಟೈನ್ ಆಗಲಿದ್ದು, ಎರಡ್ಮೂರು ಪಂದ್ಯ ಮಿಸ್ ಮಾಡಿಕೊಳ್ಳಲಿದ್ದಾರೆ.

ಚೆನ್ನೈ ಭರ್ಜರಿ ತಯಾರಿ
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡ, ಮುಂಬೈ ಇಂಡಿಯನ್ಸ್ ತಂಡವನ್ನ ಎದುರಿಸಲಿದ್ದು, ಭರ್ಜರಿ ತಯಾರಿಯನ್ನ ನಡೆಸ್ತಿದೆ. ತಂಡದಲ್ಲಿ ಕೊರೊನಾ ಆತಂಕವನ್ನುಂಟು ಮಾಡಿದ್ರೆ, ಚೆನ್ನೈ ಭರ್ಜರಿ ತಾಲೀಮು ನಡೆಸ್ತಿದೆ.

ರೈನಾ ಅಲಭ್ಯತೆ ಹಿನ್ನಡೆಯಾಗಲಿದೆ
ಸುರೇಶ್ ರೈನಾ ಅಲಭ್ಯತೆಯಿಂದಾಗಿ ಚೆನ್ನೈ ತಂಡಕ್ಕೆ ಹಿನ್ನೆಯಾಡಗಲಿದೆ ಎಂದು, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಧೋನಿ ಬಂದಿದ್ದು ವಿಶೇಷ
14 ತಿಂಗಳ ವಿರಾಮದ ಬಳಿಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿರೋದು ವಿಶೇಷವಾಗಿದೆ ಎಂದು, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ…

ಚೆನ್ನೈಗೆ ವಿಸಿಲ್ ಪೋಡು
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಹಾಗೂ ಶೇನ್ ವಾಟ್ಸನ್ ನೆಟ್ಸ್​ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಈ ವಿಡಿಯೋವನ್ನು ವಾಟ್ಸನ್ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಸಿಎಸ್​ಕೆ ಅಭಿಮಾನಿಗಳು ವಿಸಿಲ್ ಪೋಡು ಎನ್ನುತ್ತಿದ್ದಾರೆ…

ಬೂಮ್ರಾ ಅತ್ಯುತ್ತಮ ಬೌಲರ್
ಮುಂಬೈ ಇಂಡಿಯನ್ಸ್​ನ ವೇಗಿ ಜಸ್ಪ್ರೀತ್ ಬೂಮ್ರಾ ವಿಶ್ವದ ಅತ್ಯುತ್ತಮ ಬೌಲರ್ ಎಂದು ಜೇಮ್ಸ್ ಪ್ಯಾಟೀನ್​ಸನ್ ಹೇಳಿದ್ದಾರೆ. ಬೂಮ್ರಾ ಜೊತೆಗೆ ಒಂದೇ ತಂಡದಲ್ಲಿ ಆಡ್ತಿರೋದು ಉತ್ತಮ ಅನುಭವವಾಗಿದೆ ಅಂತ ಪ್ಯಾಟೀನ್​ನಸ್ ಹೇಳಿದ್ದಾರೆ.

Related Tags:

Related Posts :

Category: