IPL 2020: ದುಬೈನಲ್ಲಿ ನಡೆಯಲಿದೆ ಡೆಲ್ಲಿ, ಪಂಜಾಬ್ ಫೈಟ್..

IPL 2020: ದುಬೈನಲ್ಲಿ ನಡೆಯಲಿದೆ ಡೆಲ್ಲಿ, ಪಂಜಾಬ್ ಫೈಟ್..

ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿಯಾಗ್ತಿವೆ. ಎರಡು ತಂಡಗಳಲ್ಲಿ ಯಂಗ್​ಸ್ಟರ್​ಗಳೆ ತುಂಬಿದ್ದು ಪಂದ್ಯ ರೋಚಕತೆಯಿಂದ ಕೂಡಿರಲಿದೆ. ನಾಯಕನಾಗಿ ಕನ್ನಡಿಗ ರಾಹುಲ್ ಕನ್ನಡಿಗ ಕೆ.ಎಲ್.ರಾಹುಲ್ ಐಪಿಎಲ್​ನಲ್ಲಿ ಇದೆ ಮೊದಲ ಬಾರಿಗೆ ನಾಯಕತ್ವ ನಿಭಾಯಿಸುತ್ತಿದ್ದಾರೆ. ರಾಹುಲ್ ಜತೆ ಪಂಜಾಬ್ ತಂಡದಲ್ಲಿ ಐವರು ಕನ್ನಡಿಗರಿದ್ದಾರೆ. ಇನ್ನು ತಂಡಕ್ಕೆ ಅನಿಲ್ ಕುಂಬ್ಳೆ ಕೋಚ್ ಆಗಿರೋದು ಮತ್ತೊಂದು ವಿಶೇಷ. ಮಿಶ್ರಾ ಮೇಲೆ ಭಾರಿ ನಿರೀಕ್ಷೆ ಡೆಲ್ಲಿ ತಂಡ, ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ […]

Ayesha Banu

|

Sep 20, 2020 | 8:52 AM

ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿಯಾಗ್ತಿವೆ. ಎರಡು ತಂಡಗಳಲ್ಲಿ ಯಂಗ್​ಸ್ಟರ್​ಗಳೆ ತುಂಬಿದ್ದು ಪಂದ್ಯ ರೋಚಕತೆಯಿಂದ ಕೂಡಿರಲಿದೆ.

ನಾಯಕನಾಗಿ ಕನ್ನಡಿಗ ರಾಹುಲ್ ಕನ್ನಡಿಗ ಕೆ.ಎಲ್.ರಾಹುಲ್ ಐಪಿಎಲ್​ನಲ್ಲಿ ಇದೆ ಮೊದಲ ಬಾರಿಗೆ ನಾಯಕತ್ವ ನಿಭಾಯಿಸುತ್ತಿದ್ದಾರೆ. ರಾಹುಲ್ ಜತೆ ಪಂಜಾಬ್ ತಂಡದಲ್ಲಿ ಐವರು ಕನ್ನಡಿಗರಿದ್ದಾರೆ. ಇನ್ನು ತಂಡಕ್ಕೆ ಅನಿಲ್ ಕುಂಬ್ಳೆ ಕೋಚ್ ಆಗಿರೋದು ಮತ್ತೊಂದು ವಿಶೇಷ.

ಮಿಶ್ರಾ ಮೇಲೆ ಭಾರಿ ನಿರೀಕ್ಷೆ ಡೆಲ್ಲಿ ತಂಡ, ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮೊದಲ ಪಂದ್ಯವಾಡಲಿದ್ದು, ಅಮಿತ್ ಮಿಶ್ರಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ದುಬೈನಲ್ಲಿ ಸ್ಪಿನ್ನರ್​ಗಳ ಕೈಚಳ ನಡೆಯಲಿದ್ದು, ಮಿಶ್ರಾ ಡೆಲ್ಲಿ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ.

ಡೆಲ್ಲಿ ತಂಡದ ಹಾಡು ಬಿಡುಗಡೆ ಶ್ರೇಯಸ್ ಐಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಌಂಥಮ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಈ ಸಾಂಗ್​ನಲ್ಲಿ ಆಟಗಾರರ ಅಭ್ಯಾಸ ಮಾಡೋದು, ಫೋಟೋ ಶೂಟ್​ನಲ್ಲಿ ಎಂಜಾಯ್ ಮಾಡಿರೋ ದೃಶ್ಯಗಳನ್ನ ಬಳಸಲಾಗಿದೆ.

ನಾವು ಇಲ್ಲೇ ಇದ್ದೇವೆ! ರಾಜಸ್ಥಾನ ತಂಡದ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್, ದುಬೈಗೆ ಬಂದಿದ್ದಾರೆ. ಹೋಟೆಲ್ ಕ್ವಾರಂಟೈನ್​ನಲ್ಲಿರೋ ಆಟಗಾರರು, ಡೋಂಟ್ ವರಿ ನಾವು ಇಲ್ಲೇ ಇದ್ದೀವಿ ಅಂತ ಫೋಟೋ ಶೇರ್ ಮಾಡಿದ್ದಾರೆ.

ನಿಮಗಿದು ಗೊತ್ತಾ? ಐಪಿಎಲ್​ನಲ್ಲಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಹರ್ಭಜನ್ ಸಿಂಗ್-1,249 ಬಾಲ್ ಐಪಿಎಲ್​ನಲ್ಲಿ ಹೆಚ್ಚು ಮೇಡಿನ್ ಓವರ್ ಮಾಡಿದ ಬೌಲರ್ ಪ್ರವೀಣ್ ಕುಮಾರ್-14 ಓವರ್ ಐಪಿಎಲ್​ನಲ್ಲಿ ಹೆಚ್ಚು ಸ್ಟಂಪಿಂಗ್ ಮಾಡಿದ ವಿಕೆಟ್ ಕೀಪರ್ ಧೋನಿ-38 ಐಪಿಎಲ್​ನಲ್ಲಿ ಹೆಚ್ಚು ಕ್ಯಾಚ್ ಹಿಡಿದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್-101 ಐಪಿಎಲ್​ನಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಸುರೇಶ್ ರೈನಾ-102

Follow us on

Related Stories

Most Read Stories

Click on your DTH Provider to Add TV9 Kannada