ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ಸಿನಿಮಾಗಳ ಸುನಾಮಿ ಶುರುವಾಗಿದೆ. ಲಾಕ್ ಡೌನ್ ನಂತರ ಒಬ್ಬೊಬ್ಬರೇ ಸ್ಟಾರ್ ಗಳು ಮೈಕೊಡವಿ ಎದ್ದು ನಿಂತು ತಮ್ಮ ಸಿನಿಮಾದ ಸೀಕ್ರೇಟ್ ಗಳನ್ನ ರಿವೀಲ್ ಮಾಡ್ತಿದ್ದಾರೆ. ಅಂ ದಹಾಗೆ ಒಂದು ಕಡೆ ರಾಕಿ ಭಾಯ್ ಅಭಿನಯದ ಕೆಜಿಎಫ್ ಟೀಸರ್ ನಾಗಾಲೋಟ ಮುಂದುವರೆಸಿದ್ರೆ ಇನ್ನೊಂದು ಕಡೆ ರಾಬರ್ಟ್ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇವತ್ತು ದಚ್ಚು ಫೇಸ್ ಬುಕ್ ಲೈವ್ ಬಂದು KGF ಗೆ ಬಾ ಬಾ ನಾ ರೆಡಿ ಅಂತ ಸುಂಟರಗಾಳಿಯಂತೆ ಸುಳಿವು ಕೊಟ್ಟಿದ್ದಾರೆ.