ಉಗ್ರರನ್ನ ಗಡಿ ದಾಟಿಸಲು ಲಕ್ಷ ಲಕ್ಷ ಹಣ ಪಡೆದಿದ್ದ ಡಿಎಸ್​ಪಿ ಸಸ್ಪೆಂಡ್​

, ಉಗ್ರರನ್ನ ಗಡಿ ದಾಟಿಸಲು ಲಕ್ಷ ಲಕ್ಷ ಹಣ ಪಡೆದಿದ್ದ ಡಿಎಸ್​ಪಿ ಸಸ್ಪೆಂಡ್​

ಉಗ್ರರ ಜೊತೆ ಸಿಕ್ಕಿಬಿದ್ದಿರುವ ಜಮ್ಮು-ಕಾಶ್ಮೀರ ಡಿಎಸ್​ಪಿ ದೇವಿಂದರ್ ಸಿಂಗ್ ವಿಚಾರಣೆ ಸಂದರ್ಭದಲ್ಲಿ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ಉಗ್ರರನ್ನ ಸುರಕ್ಷಿತವಾಗಿ ಗಡಿ ದಾಟಿಸಲು ದೇವಿಂದರ್ ಸಿಂಗ್ 12 ಲಕ್ಷ ಪಡೆದಿದ್ದ ವಿಚಾರ ರಿವೀಲ್ ಆಗಿದೆ. ಹೀಗಾಗಿ ದೇವಿಂದರ್ ಸಿಂಗ್​ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಚುನಾವಣೆ ಹೊಸ್ತಿಲಲ್ಲಿ ‘ಕೈ’ಗೆ ಆಘಾತ:
ದೆಹಲಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ಗೆ ಭಾರಿ ಹೊಡೆತ ಬಿದ್ದಿದೆ. ನಿನ್ನೆ ಕಾಂಗ್ರೆಸ್​ನ ಇಬ್ಬರು ನಾಯಕರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​ನ ಮಾಜಿ ಶಾಸಕರಾದ ಶೋಯೆಬ್ ಇಕ್ಬಾಲ್ ಹಾಗೂ ರಾಮ್ ಸಿಂಗ್ ನೇತಾಜಿ ಪಕ್ಷ ತೊರೆದಿದ್ದಾರೆ. ಮೊನ್ನೆ ಜಗದೀಶ್ ಯಾದವ್ ಆಪ್​ಗೆ ಜಂಪ್ ಆಗಿದ್ರು.

‘ಸಿಎಎ’ ಅಡಿ ವಲಸಿಗರಿಗೆ ಪೌರತ್ವ:
ಭಾರಿ ವಿರೋಧಗಳ ಮಧ್ಯೆಯೂ ಸಿಎಎ ಜಾರಿ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. 35 ರಿಂದ 40 ಸಾವಿರ ವಲಸಿಗರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅಡಿ ಪೌರತ್ವ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ವಲಸಿಗರ ಪಟ್ಟಿಯನ್ನ ಉತ್ತರ ಪ್ರದೇಶ ಸರ್ಕಾರ ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡಿದೆ.

ಸಿಎಎ, ಎನ್​ಆರ್​ಸಿಗೆ ನಿತೀಶ್ ವಿರೋಧ:
ಉತ್ತರ ಪ್ರದೇಶದಲ್ಲಿ ಸಿಎಎ ಜಾರಿಗೆ ಸಿದ್ಧತೆ ನಡೆದಿದ್ದರೆ, ಇತ್ತ ಎನ್​ಡಿಎ ಮೈತ್ರಿಕೂಟದಲ್ಲಿ ಗುರಿತಿಸಿಕೊಂಡಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸಿಎಎ ಹಾಗೂ ಎನ್​ಆರ್​ಸಿಗೆ ತನ್ನ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಸಿಎಎ ಹಾಗೂ ಎನ್​ಆರ್​ಸಿ ಜಾರಿಯಾಗಲ್ಲ ಎಂದಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!