ಜಯನಗರಕ್ಕೂ ಬಂತು ಕೊಕೇನ್, ನೈಜೀರಿಯಾ ಪ್ರಜೆ ಬಂಧನ

ಬೆಂಗಳೂರು: ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಒಬೆರಾಯ್ ವಿಕ್ಟರ್ ಬಂಧಿತ ಆರೋಪಿ. ಈತ ವಾಟ್ಸಪ್ ಮೂಲಕ ಜನರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಅವರಿಗೆ ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಜಯನಗರ ಪೊಲೀಸರು ಆರೋಪಿ ಮೊಬೈಲ್ ಗೆ ಕೊಕೇನ್ ಬೇಕೆಂದು ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶ ನೋಡಿದ ಆರೋಪಿ ಲೋಕೆಶನ್ ಕಳುಹಿಸಲು ಹೇಳಿದ್ದಾನೆ. ಹೀಗೆ ಆರೋಪಿಯನ್ನು ಬೆನ್ನು ಹತ್ತಿದ ಜಯನಗರ ಪೊಲೀಸರು ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಒಂದು ಲಕ್ಷ ಮೌಲ್ಯದ 14 ಗ್ರಾಂ ಕೊಕೇನ್, ಮೂರು ಸಾವಿರ ಹಣ ಹಾಗೂ ಒಂದು ಮೊಬೈಲ್, ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.

Related Posts :

ತಾಜಾ ಸುದ್ದಿ

error: Content is protected !!