HDCC ಬ್ಯಾಂಕ್​ ಚುನಾವಣೆ: ಮತ್ತೆ ಪ್ರಾಬಲ್ಯ ಮೆರೆದ JDS

ಹಾಸನ: ಜಿಲ್ಲೆಯ ಪ್ರತಿಷ್ಠಿತ HDCC ಬ್ಯಾಂಕ್​ನ ನಿರ್ದೇಶಕರ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ JDS ಮತ್ತೆ ಪ್ರಾಬಲ್ಯ ಸಾಧಿಸಿದೆ. ಬ್ಯಾಂಕ್​ನ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ JDS ಜಯಭೇರಿ ಬಾರಿಸಿದೆ.
ಹಾಸನ DCC ಬ್ಯಾಂಕ್​ನ 13 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಇಂದು ನಡೆದ ಉಳಿದ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ನಾಲ್ಕೂ ಸ್ಥಾನಗಳನ್ನೂ JDS ಬೆಂಬಲಿಗರು ಗೆದ್ದಿದ್ದಾರೆ.

ಈ ಸಲ ನಡೆದ ಚುನಾವಣೆಯಲ್ಲಿ ಮೊದಲಬಾರಿಗೆ BJP ಬೆಂಬಲಿಗರು ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ಎಲ್ಲರಲ್ಲೂ ತೀವ್ರ ಕುತೂಹಲ ಕೆರಳಿಸಿತ್ತು.

Related Tags:

Related Posts :

Category:

error: Content is protected !!