ಅಧಿಕಾರ ಕಳೆದುಕೊಂಡ ದೇವೇಂದ್ರ: JDS ಶಾಸಕ ಶಿವಲಿಂಗೇಗೌಡ ಏನಂದ್ರು!?

ಮೈಸೂರು: ಮಹಾರಾಷ್ಟ್ರದಲ್ಲಿ ಅಜಿತ್​ ಪವಾರ್​ ಅವರ ಜೊತೆ ಕೈಜೋಡಿಸಿ ದಿಢೀರನೆ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವೀಸ್ ಅಷ್ಟೇ ಕ್ಷಿಪ್ರವಾಗಿ ಅಧಿಕಾರದ ಗದ್ದುಗೆಯಿಂದ ಇಳಿದುಬಿಟ್ಟರು. ಈ ಬಗ್ಗೆ JDS ಶಾಸಕ ಶಿವಲಿಂಗೇಗೌಡ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಾವು ನಮ್ಮವರನ್ನು ಮುಂಬೈನಿಂದ ಕರೆದುಕೊಂಡು ಬರಲು ಹೋಗಿದ್ದೆವು. ಆಗ ಪೊಲೀಸ್ ವಾಹನದಲ್ಲಿ ನಮ್ಮನ್ನು ಮುಂಬೈ ಸುತ್ತಿಸಿದ್ದರು. ಅವತ್ತು ನಮಗೆ ಅನ್ಯಾಯ ಮಾಡಿದ್ದರು. ನಮ್ಮ ಶಾಪದಿಂದಲೇ ಅವರ ಅಧಿಕಾರ ಹೋಯ್ತು!ನಮಗೆ ಅನ್ಯಾಯದಿಂದ ನಡೆಸಿಕೊಂಡರು. ಅದಕ್ಕೆ ಅವರ ಅಧಿಕಾರ ಹೋಗಿದೆ ಎಂದು ಹುಣಸೂರು ಸಮಾವೇಶದಲ್ಲಿ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

Related Posts :

Category:

error: Content is protected !!