‘ಈ ಪರೀಕ್ಷೆಗಾಗಿ ಇದ್ದ ನೌಕರಿಗೂ ರಾಜೀನಾಮೆ ಕೊಟ್ವಿ.. ಈಗ ಎಕ್ಸಾಂ ಕ್ಯಾನ್ಸಲ್ ಮಾಡಿಬಿಟ್ರೇ ನಮ್​ ಕಥೆ..’

  • TV9 Web Team
  • Published On - 18:46 PM, 23 Nov 2020

ಬೆಂಗಳೂರು: KPTCL ಹಾಗೂ ರಾಜ್ಯದ 6 ವಿದ್ಯುತ್ ವಿತರಣಾ ನಿಗಮಗಳಲ್ಲಿ ಬಾಕಿಯಿರುವ 3,646 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಏಕಾಏಕಿ ರದ್ದುಪಡಿಸಿರುವನ್ನು ವಿರೋಧಿಸಿ ಉದ್ಯೋಗಾಕಾಂಕ್ಷಿಗಳು KPTCL​ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ನೇಮಕಾತಿ ಕುರಿತು 2019ರ ಏಪ್ರಿಲ್​ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆ ಹೊರಬಿದ್ದು ಒಂದು ವರ್ಷ ಕಳೆದರೂ ಪರೀಕ್ಷೆ ನಡೆಸಲಿಲ್ಲ ಎಂದು ಪ್ರತಿಭಟನಾನಿರತ ಆಕಾಂಕ್ಷಿಗಳು ದೂರಿದರು.

ಇದ್ದ ಕೆಲಸ ಬಿಟ್ಟು ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಂಡಿದ್ದೆವು. ಸಾವಿರಾರು ರೂಪಾಯಿ ಕೊಟ್ಟು ಕೋಚಿಂಗ್​ಗೆ ಹೋಗಿದ್ದೆವು. ನೇಮಕಾತಿ ರದ್ದು ಮಾಡುವ ಮೂಲಕ KPTCL ನಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೇಮಕಾತಿ ರದ್ದು ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಶೀಘ್ರ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.