ಅಮಿತಾಭ್ ನನ್ನ ಆತ್ಮೀಯ, ಆತನನ್ನು Sir ಜೀ ಎಂದು ಹೇಗೆ ಕರೆಯಲಿ? ಅಷ್ಟಕ್ಕೇ..

ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಹಠಾತ್ ಅಗಲಿಕೆಯ ಬಳಿಕ ಬಾಲಿವುಡ್​ ಚಿತ್ರರಂಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಮಧ್ಯೆ ಒಂದು ಹಳೇ ಪ್ರಸಂಗ ಇದೀಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಅದು ಯಾವುದೆಂದರೆ ಬಾಲಿವುಡ್​ ದಂತಕಥೆ ಬಿಗ್​ ಬಿ ಅಮಿತಾಭ್​ ಬಚ್ಚನ್​ ಹಾಗೂ ಖ್ಯಾತ ಹಾಸ್ಯ ನಟ-ಸಂಭಾಷಣೆಕಾರ ಖಾದರ್​ ಖಾನ್​ರ ಸ್ನೇಹ ಮತ್ತು ವಿರಸ.

80ರ ದಶಕದಲ್ಲಿ ಸ್ಟಾರ್​ ಆಗಿ ಮಿಂಚುತ್ತಿದ್ದ ಅಮಿತಾಭ್​ ಮತ್ತು ತಮ್ಮ ಹರಿತವಾದ ಬರವಣಿಗೆಯಿಂದ ಫೇಮಸ್​ ಆಗಿದ್ದ ಸಂಭಾಷಣೆಕಾರ ಖಾದರ್​ ಖಾನ್ ನಡುವೆ ಅಗಾಧವಾದ ಸ್ನೇಹವಿತ್ತು. ಅದೆಷ್ಟೋ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ದೋಸ್ತಿಗಳು ಸಾಕಷ್ಟು ಯಶಸ್ಸನ್ನೂ ಕಂಡಿದ್ದರು.

ಈ ಮಧ್ಯೆ ಒಂದು ಸಣ್ಣ ಘಟನೆ, ಒಂದು ಸಣ್ಣ ಅಪಾರ್ಥ ದೋಸ್ತಿಗಳ ನಡುವೆ ವಿರಸ ತಂದುಬಿಟ್ಟಿತು. ಈ ಬಗ್ಗೆ ಖುದ್ದು ಖಾದರ್​ ಖಾನ್​ರವರೇ ಟಿ.ವಿ. ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು. ಆ ಸಂದರ್ಶನದ ತುಣುಕು ಇದೀಗ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

‘ಅಮಿತ್ ಯಾವಾಗಿನಿಂದ Sir ಜೀ ಆದ?’
ನಾನು ಅಮಿತಾಭ್​ರನ್ನ ಯಾವಾಗಲೂ ಅಮಿತ್​ ಎಂದು ಅಕ್ಕರೆಯಿಂದ ಕರೆಯುತ್ತಿದ್ದೆ. ಅದೊಂದು ದಿನ ಚಿತ್ರವೊಂದರ ಶೂಟಿಂಗ್​ ವೇಳೆ ಸಿನಿಮಾದ ನಿರ್ಮಾಪಕರೊಬ್ಬರು.. ನನಗೆ ನೀವು Sir ಜೀ ರನ್ನ ಭೇಟಿಯಾದ್ರಾ ಅಂತಾ ಕೇಳಿದ್ರು. ನಾನು ಯಾವ Sir ಜೀ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ನಿಮಗೆ Sir ಜೀ ಯಾರೆಂದು ಗೊತ್ತಿಲ್ಲವೇ? ಎಂದು ಹೇಳಿ ಅನತಿ ದೂರದಲ್ಲಿದ್ದ ಅಮಿತಾಭ್​ ಕಡೆ ಸನ್ನೆ ಮಾಡಿದ್ದರು. ಆಗ ನಾನು ಅದು ಅಮಿತ್​. ಆತ ಯಾವಾಗಿನಿಂದ Sir ಜೀ ಎಂದು ಕರೆಸಿಕೊಳ್ಳಲು ಶುರುಮಾಡಿದ ಎಂದು ಹೇಳಿಬಿಟ್ಟೆ. ಅಷ್ಟೇ..

ಅಮಿತಾಭ್ ನನ್ನ ಆತ್ಮೀಯ. ಹೀಗಾಗಿ, ನನ್ನ ಮನಸ್ಸು ಅವರನ್ನ Sir ಜೀ ಎಂದು ಸಂಬೋಧಿಸಲು ಒಪ್ಪಲಿಲ್ಲ. ಆದರೆ, ಆ ಒಂದು ಮಾತೇ ನಮ್ಮಿಬ್ಬರ ಸ್ನೇಹ ಮುರಿಯಲು ಕಾರಣವಾಯ್ತು ಎಂದು ಖಾದರ್​ ಇದೀಗ ವಿಡಿಯೋದಲ್ಲಿ  ಹೇಳಿದ್ದಾರೆ.

ಇದೊಂದೇ ಮಾತಿಗೋ ಏನೋ ಗೊತ್ತಿಲ್ಲ.. ಚಿತ್ರರಂಗದಲ್ಲಿ ಖಾದರ್​ ಖಾನ್​ಗೆ ಇದ್ದ ಬಹುಬೇಡಿಕೆ ಕಾಲಕ್ರಮೇಣ ಕಡಿಮೆಯಾಗ್ತಾ ಹೋಯ್ತಂತೆ. ಸಾಕಷ್ಟು ಒಳ್ಳೇ ಅವಕಾಶಗಳನ್ನು ಸಹ ಕಳೆದುಕೊಂಡರಂತೆ. ಬಳಿಕ, ಇಬ್ಬರಿಗೂ ಮತ್ತೆ ಒಂದಾಗುವ ಸಂದರ್ಭವೇ ಒದಗಿಬರಲಿಲ್ಲವಂತೆ. ಒಟ್ನಲ್ಲಿ, ಒಂದು ಸಣ್ಣ ಅಪಾರ್ಥ ಅಥವಾ ಅಹಂ ಭಾವನೆಯಿಂದ ಬಾಲಿವುಡ್​ ಅತ್ಯುತ್ತಮ ಕೊಡುಗೆಯಿಂದ ವಂಚಿತವಾಗಿಬಿಡ್ತು.

ಖಾದರ್​ ಖಾನ್​ ಸಂದರ್ಶನದ ತುಣುಕು: https://www.facebook.com/watch/?v=2605881069652116

Related Tags:

Related Posts :

Category:

error: Content is protected !!