ಕಲಬುರಗಿ ರಾಮ ಭಕ್ತನಿಂದ ಅಯೋಧ್ಯೆ ಮಂದಿರಕ್ಕೆ 9 ಕೆಜಿ ಬೆಳ್ಳಿ ಇಟ್ಟಿಗೆ ರವಾನೆ

ಕಲಬುರಗಿ: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕಿಂದು ಶಿಲಾನ್ಯಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ರಾಮ ಮಂದಿರದಲ್ಲಿ 9 ಕೆಜಿ ಬೆಳ್ಳಿ ಇಟ್ಟಿಗೆ ಪೂಜೆ ಮಾಡಲಾಯಿತು.

ಶ್ರೀರಾಮನ ಪರಮಭಕ್ತ ರಾಜು ಭವಾನಿ ಎಂಬುವವರು ಈ ಬೆಳ್ಳಿ ಇಟ್ಟಿಗೆಯನ್ನು ಮಾಡಿಸಿದ್ದಾರೆ. ಇವರು ಕೋಲ್ಕತಾ ಮೂಲದ ಚಿನ್ನಾಭರಣ ವ್ಯಾಪಾರಿಯೋರ್ವರ ಬಳಿ 9 ಕೆಜಿ ಬೆಳ್ಳಿ ಇಟ್ಟಿಗೆ ಮಾಡಿಸಿ ಇದೇ ವಾರದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ರ ಮೂಲಕ ಅಯೋಧ್ಯೆಯ ಟ್ರಸ್ಟ್‌ಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮಸೇನೆ ದೇಗುಲ ನಿರ್ಮಾಣದಲ್ಲಿ ಬಳಕೆಗೆ ನೀಡಲಿರುವ ಬೆಳ್ಳಿ ಇಟ್ಟಿಗೆ ಪೂಜೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಭಾಗಿಯಾಗಲಿದ್ದಾರೆ.

Related Tags:

Related Posts :

Category: