‘ಸುಶಾಂತ್​ ಸಾವಿನ ವಿಚಾರದಲ್ಲಿ ನನ್ನ ಹೇಳಿಕೆಗಳು ಸುಳ್ಳಾದರೆ.. ಪದ್ಮಶ್ರೀ ಪ್ರಶಸ್ತಿ ವಾಪಸ್​ ಮಾಡುವೆ’

ಬಾಲಿವುಡ್​ನ ಉದಯೋನ್ಮುಖ ಪ್ರತಿಭೆ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಸುತ್ತ ಹಲವಾರು ಕಾರಣಗಳು ಮತ್ತು ವದಂತಿಗಳು ಹರಿದಾಡುತ್ತಿವೆ. ಈ ನಡುವೆ ಖ್ಯಾತ ನಟಿ ಕಂಗನಾ ರನೌತ್​ ಸುಶಾಂತ್​ ಸಾವಿಗೆ ಕೆಲವು ಕಾರಣಗಳನ್ನು ನೀಡಿದ್ದರು.

ಇದೀಗ ತಾವು ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲದಿದ್ದರೆ ಕೇಂದ್ರ ಸರ್ಕಾರ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನ ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈ ಪ್ರಕರಣಕ್ಕೆ ಕುರಿತು ಹಲವಾರು ವಿಡಿಯೋಗಳನ್ನ ಪೋಸ್ಟ್​ ಮಾಡಿರುವ ಕಂಗನಾ ಬಾಲಿವುಡ್​ ಬಹಳಷ್ಟು ಮಂದಿಯ ವಿರುದ್ಧ ಹರಿಹಾಯ್ದಿದ್ದರು. ಅಗಲಿದ ನಟನ ಮೇಲೆ ಬಾಲಿವುಡ್​ನ ಕೆಲ ಪ್ರಭಾವಿಗಳಿಂದ ಹೇರಲಾಗಿದ್ದ ಒತ್ತಡ ಹಾಗೂ ಅವಕಾಶಗಳಿಂದ ವಂಚಿತರಾಗಿದ್ದರ ಬಗ್ಗೆ ಕಂಗನಾ ಬೆಳಕು ಚೆಲ್ಲಿದ್ದರು.

ಜೊತೆಗೆ, ಮುಂಬೈ ಪೊಲೀಸರು ತನ್ನ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್​ ನೀಡಿದ್ದರು. ನಾನು ಮನಾಲಿಯಲ್ಲಿ ಇದ್ದ ಕಾರಣದಿಂದ ಅಲ್ಲಿ ಬರೋಕೆ ಸಾಧ್ಯವಾಗಿರಲಿಲ್ಲ. ಆದರೆ, ನಾನು ಹೇಳಿರುವ ಪ್ರತಿಯೊಂದು ಹೇಳಿಕೆಗೂ ಸಮಜಾಯಿಷಿ ನೀಡೋಕೆ ಅಥವಾ ಸಾಬೀತು ಪಡಿಸೋಕೆ ಆಗಿದಿದ್ದರೆ ನನ್ನ ಪದ್ಮಶ್ರೀ ಪುರಸ್ಕಾರವನ್ನ ವಾಪಸ್​ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!