ಕಪಿಲ್ ದೇವ್‌ಗೆ ಹೃದಯಾಘಾತ

  • Ayesha Banu
  • Published On - 14:28 PM, 23 Oct 2020

ದೆಹಲಿ:ಭಾರತ ಕ್ರಿಕೆಟ್​ ತಂಡ ಮಾಜಿ ನಾಯಕ, ಆಲ್​ರೌಂಡರ್ ಕಪಿಲ್ ದೇವ್ ಅವರಿ​ಗೆ ಹೃದಯಾಘಾತವಾಗಿದ್ದು, ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ, ಕಪಿಲ್ ದೇವ್​ಗೆ ಌಂಜಿಯೋ ಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತಿದೆ.

61 ವರ್ಷದ ಹರಿಯಾಣ ಹರಿಕೇನ್, ಪ್ಪಾಜಿ ಎಂದೇ ಖ್ಯಾತರಾದ ಕಪಿಲ್ ದೇವ್ ನಿಖಂಜ್ ಅವರು ಭಾರತಕ್ಕೆ ಮೊದಲ ಬಾರಿಗೆ ವಿಶ್ವ ಕಪ್ ತಂದು ಕೊಟ್ಟ ಕೀರ್ತಿಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ (434) ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.