ಮೈದುಂಬಿದ ಕಪಿಲೆ: ಮುಳುಗಿದ ನಂಜನಗೂಡಿನ ಸ್ನಾನಘಟ್ಟ, ಸ್ಥಳೀಯರಲ್ಲಿ ಆತಂಕ

ಮೈಸೂರು: ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಹೀಗಾಗಿ, ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ.

ಜಲಾಶಯದಿಂದ ನೀರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಪಿಲಾ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ, ನಂಜನಗೂಡಿನ ಸ್ನಾನಘಟ್ಟವೂ ಮುಳುಗಡೆಯಾಗಿದೆ.

ನಾಳೆ ಇನ್ನೂ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದ್ದು ಇದರಿಂದ ನಂಜನಗೂಡಿನ ವಿವಿಧ ಬಡಾವಣೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ. ಯಾಕಂದ್ರೆ, ಕಳೆದ ಬಾರಿ ಪ್ರವಾಹದಿಂದ ನೂರಾರು ಕುಟುಂಬಗಳಿಗೆ ಸಮಸ್ಯೆ ಎದುರಾಗಿತ್ತು.ಹಾಗಾಗಿ, ಕುಟುಂಬಗಳು ಇದೀಗ ಮತ್ತೇ ಆತಂಕದಲ್ಲಿದ್ದಾರೆ.

Related Tags:

Related Posts :

Category: