ಕೊರೊನಾ ಕಡಿವಾಣಕ್ಕೆ ಆರು ಅಸ್ತ್ರ ಬಿಡುಗಡೆ ಮಾಡಿದ ಐಟಿ ಬಿಟಿ ವಿಜ್ಞಾನಿಗಳು

ಬೆಂಗಳೂರು: ಕೊರೊನಾಗೆ ಕಡಿವಾಣ ಹಾಕಲು ಕರ್ನಾಟಕ ಸರಕಾರದ ಐಟಿ ಬಿಟಿ ಇಲಾಖೆಯ ವಿಜ್ಞಾನಿಗಳು ಒಂದಷ್ಟು ಆವಿಷ್ಕಾರ ಮಾಡಿದ್ದಾರೆ. ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಮೂಲಕ ಒಟ್ಟು ಆರು ಉತ್ಪನ್ನಗಳನ್ನು ಕರೋನಾ ನಿಯಂತ್ರಣಕ್ಕಾಗಿಯೇ ಅಭಿವೃದ್ಧಿ ಪಡಿಸಲಾಗಿದೆ. ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಇಂದು ಇವುಗಳನ್ನ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದಿಂದ ಬಿಡುಗಡೆಯಾದ ಈ ಉತ್ಪನ್ನಗಳನ್ನು ಸದ್ಯಕ್ಕೆ ಸರ್ಕಾರ ಬಳಕೆ ಮಾಡಿಕೊಳ್ಳಲಿದೆ.

ಇಂದು ಬಿಡುಗಡೆಗೊಂಡ ಆರು ಉಪಕರಣಗಳ ಪಟ್ಟಿ ಹೀಗಿದೆ..
1. UV-ROS ಬಯೋ ಫೈಟ್ ಮಷೀನ್ -ವೈರಸ್ ಫ್ರೀ ಮಷೀನ್(ಆಸ್ಪತ್ರೆಯಲ್ಲಿ ಬಳಸುವ ಪರಿಕರಗಳು ಶುದ್ಧವಾಗಿಡುವ ಮಷೀನ್)
2. Remote Foetal Monitoring device (ಗರ್ಭಿಣಿಯರು ಮತ್ತು ಶಿಶುವಿನ ಆರೋಗ್ಯ ತಪಾಸಣೆಗಾಗಿ ಈ ಉಪಕರಣ ಬಳಸಲಾಗುತ್ತದೆ)
3. De Con to VTM (ಸೋಂಕಿತರ ಕಫ ಪರೀಕ್ಷೆಗಾಗಿ ಈ ಉಪಕರಣ ಬಳಸಿಕೊಳ್ಳಲಾಗುತ್ತದೆ)
4. Artificial Intelligence Device (ಕೋವಿಡ್ ಪತ್ತೆಗಾಗಿ ಈ ಉಪಕರಣ ಬಳಕೆ ಮಾಡಿಕೊಳ್ಳಲಾಗುತ್ತದೆ)
5. Anti Microbial ಫೇಸ್ ವಾಷ್
6. Fluorescence probes (ರೋಗ ಪತ್ತೆಯನ್ನು ಶೀಘ್ರವಾಗಿ ತಿಳಿಸಲು ಅನುಕೂಲವಾಗುವಂತೆ ಅಭಿವೃದ್ದಿಗೊಳಿಸಲಾಗಿದೆ)

Related Tags:

Related Posts :

Category:

error: Content is protected !!