ಮೂರೇ ವಾರದಲ್ಲಿ ಮೂರ್ತಿ ಮರುನೇಮಕಾತಿ ಆಗಬೇಕು: ಹೈಕೋರ್ಟ್ ಆದೇಶ

ಬೆಂಗಳೂರು: ಅಮಾನತಾಗಿದ್ದ ವಿಧಾನಸಭೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿಗೆ ಹೈಕೋರ್ಟ್ ದೊಡ್ಡ ರಿಲೀಫ್​ ನೀಡಿದೆ. ಅವರ ಮರುನೇಮಕಾತಿಗೆ ಆದೇಶ ಹೊರಡಿಸಿದೆ.

3 ವಾರದಲ್ಲಿ ಮರುನೇಮಕಾತಿಗೆ ಹೈಕೋರ್ಟ್​ನಿಂದ ಆದೇಶ
ಇಲಾಖಾ ವಿಚಾರಣೆಗೆ ಒಳಪಟ್ಟು ಮರುನೇಮಕಾತಿಗೆ ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಆದರೆ, ಈವರೆಗೂ ಇಲಾಖಾ ವಿಚಾರಣೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ 3 ವಾರದಲ್ಲಿ ಮರುನೇಮಕಾತಿಗೆ ಹೈಕೋರ್ಟ್​ನಿಂದ ಆದೇಶ ಹೊರಬಿದ್ದಿದೆ.

ಬಾಕಿ ಭತ್ಯೆಯನ್ನೂ ಪಾವತಿಸಲು ಸೂಚನೆ
ನಿಯಮದಂತೆ ಅಮಾನತಾದ 6 ತಿಂಗಳ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಬೇಕಿತ್ತು. ಆದರೆ 18 ತಿಂಗಳು ಕಳೆದ್ರೂ ವಿಚಾರಣೆ ಪೂರ್ಣಗೊಂಡಿರಲಿಲ್ಲ. ಹಾಗಾಗಿ, ಇಲಾಖಾ ವಿಚಾರಣೆ ಫಲಿತಾಂಶ ಆಧರಿಸಿ ಎಸ್.ಮೂರ್ತಿ ಮರುನೇಮಕಕ್ಕೆ  ಉಚ್ಛ ನ್ಯಾಯಾಲಯ ಸೂಚನೆ ನೀಡಿದೆ. ಜೊತೆಗೆ ಬಾಕಿ ಉಳಿದಿರುವ ಅವರ ಜೀವನಾಧಾರದ ಭತ್ಯೆಯನ್ನು ಪಾವತಿಸಲು ಸೂಚಿಸಿದೆ.

Related Tags:

Related Posts :

Category:

error: Content is protected !!