ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್ ಆಗುತ್ತಾ ಕರ್ನಾಟಕ?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದೆ. ಕೊವಿಡ್ ಕಡಿಮೆ ಮಾಡಲು ಮಾಡಿದ್ದ ಲಾಕ್​ಡೌನ್ ಹಂತ ಹಂತವಾಗಿ ಅನ್​ಲಾಕ್ ಆಗಿದೆ. ಆದರೆ ಈಗ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಮತ್ತೆ ರಾಜ್ಯವನ್ನ ಲಾಕ್​ಡೌನ್ ಮಾಡ್ತಾರಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಲಾಕ್​ಡೌನ್ ಆದಾಗ ಜನರು ತುತ್ತು ಅನ್ನಕ್ಕೂ ಬರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲಸವಿಲ್ಲದೆ. ಎಲ್ಲಿಯೂ ಹೋಗಲಾಗದ ಪರಿಸ್ಥಿತಿಯಲ್ಲಿ ನರಕ ಅನುಭವಿಸಿದ್ದರು. ಸದ್ಯ ಈಗ ಕೊಂಚ ಮಟ್ಟಿಗೆ ಸಡಲಿಕೆ ನೀಡಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್ ಆಗುತ್ತಾ? ಇಲ್ವಾ? ಎಂಬ ಪ್ರಶ್ನೆ ಎದ್ದಿದೆ.

ಆದ್ರೆ ಇಲ್ಲಿ ಗಮನಿಸುವ ವಿಷಯ ಎಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ಲಾಕ್​ಡೌನ್ ಆಗಲ್ಲ ಅಂತಿದ್ದಾರೆ. ಆದ್ರೆ ಆರ್. ಅಶೋಕ್ ಜುಲೈ 7ರಿಂದ ಕಠಿಣ ರೂಲ್ಸ್ ಅಂತಾರೆ. ಎಸ್ಎಸ್ಎಲ್​ಸಿ ಎಕ್ಸಾಂ ಬಳಿಕ ಗಟ್ಟಿ ನಿರ್ಧಾರ ತೆಗೆದುಕೊಳ್ತೀವಿ ಎಂದು ಹೇಳುತ್ತಿದ್ದಾರೆ. ಇನ್ನು ಗೃಹ ಸಚಿವ ಬೊಮ್ಮಾಯಿ ಲಾಕ್​ಡೌನ್ ಪ್ರಶ್ನೆಯೇ ಇಲ್ಲ ಅಂತಾರೆ. ಲಾಕ್​ಡೌನ್ ಬಗ್ಗೆ ಪ್ರಮುಖ ಸಚಿವರಲ್ಲೇ ಗೊಂದಲ ಉಂಟಾಗಿದೆ.

ಲಾಕ್​ಡೌನ್ ಜಾರಿಗೆ ನಿರ್ಧರಿಸಿದ್ರೆ ಹೇಗಿರುತ್ತೆ ಹೊಸ ನಿಯಮ?
ರಾಜ್ಯದಲ್ಲಿ ಜಾರಿಯಾಗೋ ಲಾಕ್​ಡೌನ್ ಹೇಗಿರಬಹುದು? ಕರ್ನಾಟಕ ಕಂಪ್ಲೀಟ್ ಲಾಕ್​​ಡೌನ್ ಆಗುತ್ತಾ? ಜನದಟ್ಟಣೆ ಪ್ರದೇಶಗಳು ಮಾತ್ರ ಲಾಕ್​​ಡೌನ್ ಆಗುತ್ತಾ? ಜನ ಹೆಚ್ಚಿರುವ ಪಾರ್ಕ್, ಮಾರ್ಕೆಟ್ ಮತ್ತೆ ಬಂದ್ ಮಾಡ್ತಾರಾ?ಇಲ್ಲಾ ಷರತ್ತುಬದ್ಧ ಲಾಕ್​​ಡೌನ್ ಜಾರಿಗೊಳಿಸ್ತಾರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ತಲೆಯಲ್ಲಿ ಓಡಾಡುತ್ತಿವೆ. ಆದರೆ ರಾಜಕಾರಣಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಈಗ ಕೊರೊನಾ ಸಂಖ್ಯೆಗಳನ್ನು ನೋಡಿದ್ರೆ ಲಾಕ್​ಡೌನ್ ಅನಿವಾರ್ಯ ಇಲ್ಲದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುತ್ತೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಲಾಕ್​ಡೌನ್ ಆದ್ರೆ ಜನ ಸಂದಣಿ ಪ್ರದೇಶಗಳಲ್ಲಿನ ಮಾರ್ಕೆಟ್​ಗಳ ಸ್ಥಳಾಂತರಿಸುವ ಸಾಧ್ಯತೆ ಇದೆ. ಜನದಟ್ಟಣೆ ಕಡಿಮೆ ಮಾಡುವ ಯತ್ನ ನಡೆಯುತ್ತೆ. ಪಾರ್ಕ್​ ಬೆಂಚ್​ಗಳಲ್ಲಿ ಕುಳಿತು ಜನ ಕೊರೊನಾ ಅಂಟಿಸಿಕೊಳ್ತಿದ್ದಾರೆ. ಹೀಗಾಗಿ ಪಾರ್ಕ್​ಗಳನ್ನ ಮತ್ತೆ ಬಂದ್ ಮಾಡೋ ಸಾಧ್ಯತೆ ಇದೆ. ಅಥವಾ ಪಾರ್ಕ್​​​ಗಳ ಅವಧಿ ಕಡಿತಗೊಳಿಸೋ ಸಾಧ್ಯತೆ ಇದೆ.

ಮೊದಲ ಬಾರಿಗೆ ವಿಧಿಸಿದ್ದ ಲಾಕ್​ಡೌನ್ ಮಾದರಿಯಲ್ಲೇ ಈ ಲಾಕ್​ಡೌನ್ ಕೂಡ ಮುಂದುವರೆಯಬಹುದು. ಸದ್ಯ SSLC ಪರೀಕ್ಷೆಗಳು ನಡೆಯುತ್ತಿರುವುದರಿಂದ ಲಾಕ್​ಡೌನ್ ಕುರಿತು ಗೊಂದಲ ಉಂಟಾಗಿದೆ. ಆದ್ರೆ ಎಕ್ಸಾಂ ಬಳಿಕ ಈ ಬಗ್ಗೆ ನಿರ್ಧರಿಸಲಾಗುತ್ತೆ ಎಂದು ಸಿಎಂ ಬಿಎಸ್​ವೈ, ಆರ್. ಅಶೋಕ್ ಸುಳಿವು ಕೊಟ್ಟಿದ್ದಾರೆ. ಜುಲೈ 4ಕ್ಕೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಮುಗಿಯಲಿವೆ. ಜುಲೈ 5ರಂದು ಮೊದಲ ‘ಸಂಡೇ ಕರ್ಫ್ಯೂ’ ಜಾರಿಯಾಗಲಿದೆ. ಹೀಗಾಗಿ ಜುಲೈ 6ರಿಂದ 12 ದಿನಗಳ ಕಾಲ ಲಾಕ್​ಡೌನ್ ಮಾಡೋ ಸಾಧ್ಯತೆ ಇದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more