ಕರುನಾಡಿಗೆ ಅಪ್ಪಳಿಸಲಿದ್ಯಾ ಸೋಂಕಿನ ಸುನಾಮಿ, ಮಂಬೈನಿಂದ ಆಗಮಿಸುತ್ತಿದೆ ಕೊರೊನಾ ಎಕ್ಸ್​ಪ್ರೆಸ್!

ಬೆಂಗಳೂರು: ಲೆಕ್ಕವೇ ಇಲ್ಲ.. ಊಹೆಯೂ ಮಾಡಕಾಗ್ತಿಲ್ಲ.. ಅಕ್ಷರಶಃ ನರಕ ದರ್ಶನವಾಗ್ತಿದೆ. ಬೋಗಿ ಬೋಗಿಗಳಲ್ಲಿ ಸಾಗಿ ಬರ್ತಿರೋ ಸೋಂಕಿನ ಬಾಂಬ್ ಕರುನಾಡಲ್ಲಿ ಸ್ಫೋಟಗೊಳ್ತಿದೆ. ಮುಂಬೈ ಹೆಮ್ಮಾರಿ ಬಾರಿಸ್ತಿರೋ ಡಂಗೂರ ಗುಂಡಿಗೆಯನ್ನೇ ನಡುಗಿಸ್ತಿದೆ. ಮಹಾರಾಷ್ಟ್ರದಿಂದ ನುಗ್ಗಿ ಬರ್ತಿರೋ ಸೋಂಕಿನ ತೂಫಾನ್​​ ನೇರಾ ನೇರಾ ನುಗ್ತಿರೋ ಏಟಿಗೆ ಕರುನಾಡಿಗರು ಬೆವರಿ ಹೋಗಿದ್ದಾರೆ. ಇನ್ಮೇಲೆ ಐತೆ ಮಾರಿಹಬ್ಬ ಅನ್ನೋ ಡೆಡ್ಲಿ ವಾರ್ನಿಂಗ್ ಮಾಡಿದೆ.

ಮಂಬೈನಿಂದ ರಾಜ್ಯಕ್ಕೆ ಡೈಲಿ ಆಗಮಿಸ್ತಿವೆ ‘ಕೊರೊನಾ ಎಕ್ಸ್​ಪ್ರೆಸ್’!
ಯೆಸ್.. ಆ ಪ್ರಯಾಣ.. ಆ ಪ್ರಯಾಣವೇ ಕರುನಾಡಿಗೆ ಪ್ರಯಾಸ ತಂದೊಡ್ಡಿದೆ. ಮಹಾರಾಷ್ಟ್ರದಿಂದ ರೈಲುಗಳಲ್ಲಿ ದಂಡೆತ್ತಿ ಬರ್ತಿರೋ ವಲಸಿಗರು ವೈರಸ್ ಬಾಂಬ್​​​​ ಹೊತ್ತು ತರ್ತಿದ್ದಾರೆ. ಅದ್ರಲ್ಲೂ, ಇವತ್ತು ಕೂಡ ಮುಂಬೈನಿಂದ ಬರ್ತಿರೋ ಆ ರೈಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಗಿ ರಾಜ್ಯ ರಾಜಧಾನಿಗೂ ಎಂಟ್ರಿ ಕೊಡ್ತಿದೆ.
ಕಲಬುರಗಿ ಮಾರ್ಗವಾಗಿ ಯಾದಗಿರಿಯಲ್ಲಿ ಹೆಜ್ಜೆಯೂರಿ ರಾಯಚೂರು ಮೂಲಕ ಸಾಗಿ ಬರೋ ಉದ್ಯಾನ್ ಎಕ್ಸ್​ಪ್ರೆಸ್ ರೈಲು ಕರುನಾಡಿನ ಹೃದಯಭಾಗ ಬೆಂಗಳೂರನ್ನ ತಲುಪಲಿದೆ. ಈ ಒಂದು ಸುದ್ದಿ ಎಲ್ಲರ ಗುಂಡಿಗೆಯನ್ನೇ ನಡುಗಿಸಿದೆ.

ಮಹಾರಾಷ್ಟ್ರದಿಂದ ಕಲಬುರಗಿಗೆ ಡೈಲಿ ಬರ್ತಿದೆ ಮೂರು ಟ್ರೈನ್!
ಮುಂಬೈನ ನಂಜಿನ ಮಹಾಘಾತ ದಿನೇ ದಿನೇ ದಾಖಲೆಗಳನ್ನೆಲ್ಲಾ ಉಡೀಸ್ ಮಾಡ್ತಿದೆ. ಕಲಬುರಗಿ ಜಿಲ್ಲೆಗೆ ಮುಂಬೈನಿಂದ ಪ್ರತಿನಿತ್ಯ ಮೂರು ಟ್ರೈನ್​ಗಳು ಬಂದು ಹೋಗ್ತಿದ್ದು ನೂರಾರು ಜನ ಆಗಮಿಸ್ತಿದ್ದಾರೆ. ಇದ್ರಿಂದ ಬಿಸಿಲೂರಲ್ಲಿ ಕೊರೊನಾ ಬಾಂಬ್​ ಸ್ಫೋಟಗೊಳ್ಳೋ ಆತಂಕ ಹೆಚ್ಚಿಸಿದೆ. ಇನ್ನು, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್​ನಿಂದ ಹೊರಟಿರೋ ಉದ್ಯಾನ್ ಎಕ್ಸ್​​​ಪ್ರೆಸ್ ರೈಲು​ ಇಂದು ಬೆಳಗ್ಗೆ ರಾಜ್ಯಕ್ಕೆ ಆಗಮಿಸಲಿದೆ. ನೂರಾರು ಪ್ರಯಾಣಿಕರು ರೈಲಿನಲ್ಲಿ ಬರ್ತಿದ್ದು ಕಲಬುರಗಿ ಜಿಲ್ಲೆಗೆ ಬಂದಿಳಿಯಲಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಮಾಡೋಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮಹಾ ಆತಂಕವೇ ಆವರಿಸಿದೆ.

ಬಾಂಬೆಯಿಂದ ಯಾದಗಿರಿಗೂ ಎಂಟ್ರಿ ಕೊಡಲಿದೆ ಟ್ರೈನ್!
ಇನ್ನು ಜಿಲ್ಲೆಯಿಂದ ಜಿಲ್ಲೆಯ ಗಲ್ಲಿ ಗಲ್ಲಿ ಸಾಗಿ ಬರೋ ಉದ್ಯಾನ್ ಎಕ್ಸ್​ಪ್ರೆಸ್ ರೈಲು ಕಲಬುರಗಿಯಲ್ಲಿ ಪ್ರಯಾಣಿಕರನ್ನ ಇಳಿಸಿ ಯಾದಗಿರಿಗೆ ಎಂಟ್ರಿ ಕೊಡಲಿದೆ. ನಿನ್ನೆ ರಾತ್ರಿ ಮುಂಬೈನಿಂದ 96 ಕ್ಕೂ ಹೆಚ್ಚು ವಲಸಿಗರು ಪಾದ ಊರಿದ್ದು ದೊಡ್ಡ ಗಂಡಾಂತರವನ್ನೇ ಸೃಷ್ಟಿಸೋ ಆತಂಕ ಹೆಚ್ಚಾಗಿದೆ. ಮುಂಬೈ, ಪುಣೆಯಿಂದ ಆಗಮಿಸಿದ 96 ವಲಸೆ ಕಾರ್ಮಿಕರನ್ನು ಕ್ವಾರಂಟೈನ್​​ ಕೇಂದ್ರಕ್ಕೆ​ ಕರೆದೊಯ್ಯಲಾಗಿದೆ. ಪ್ರತಿನಿತ್ಯ ನೂರಾರು ಜನರು ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಡ್ತಿದ್ದು ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ.

ಮುಂಬೈನಿಂದ ರಾಯಚೂರಿಗೆ 50 ಮಂದಿ ವಲಸಿಗರು ಎಂಟ್ರಿ!
ಇನ್ನು, ಮುಂಬೈನಿಂದ ವಲಸೆ ಕಾರ್ಮಿಕರು ರಾಯಚೂರಿಗೆ ದೊಡ್ಡ ರಿಸ್ಕ್ ತರೋ ಟೆನ್ಷನ್ ಹೆಚ್ಚಾಗಿದೆ.
ಮುಂಬಯಿಂದ ಆಗಮಿದ ಉದ್ಯಾನ್ ಎಕ್ಸ್​ಪ್ರೆಸ್ ರೈಲಿನ ಮೂಲಕ ರಾಯಚೂರ ಜಿಲ್ಲೆಗೆ 50 ಜನ ವಲಸಿಗರು ಆಗಮಿಸಿದ್ದಾರೆ. ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಇಂದು ಕೂಡ ಮುಂಬೈನಿಂದ ಬರ್ತಿರೋ ಉದ್ಯಾನ್ ಎಕ್ಸ್​​ಪ್ರೆಸ್ ಟ್ರೈನ್ ಕಲಬುರಗಿ ಮಾರ್ಗವಾಗಿ ಯಾದಗಿರಿ ತಲುಪಿ ಬಳಿಕ ರಾಯಚೂರಿಗೆ ಆಗಮಿಸಲಿದೆ. ಇಲ್ಲೂ ಕೂಡ ಮಹಾರಾಷ್ಟ್ರದಿಮದ ಬಂದಿರೋ ನೂರಾರು ಪ್ರಯಾಣಿಕರು ದಾಂಗುಡಿ ಇಡಲಿದ್ದು ದಿಗಿಲು ಹುಟ್ಟಿಸಿದೆ.

ಮಹಾರಾಷ್ಟ್ರದಿಂದ 114 ಮಂದಿ ಗದಗ ಜಿಲ್ಲೆಗೆ ಆಗಮನ!
ಇನ್ನೊಂದೆಡೆ ರೈಲು ಸಂಚಾರ ಆರಂಭವಾಗಿರೋದ್ರಿಂದ ಮಹಾರಾಷ್ಟ್ರದಿಂದ ಗದಗ ಜಿಲ್ಲೆಗೆ ಪ್ರತಿನಿತ್ಯ ರೈಲು ಸಂಚಾರ ಮಾಡ್ತಿದೆ. ಈಗಾಗಲೇ 114 ಜನ ಪ್ರಯಾಣಿಕರು ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಉದ್ಯಾನ್ ಎಕ್ಸ್​ಪ್ರೆಸ್ ರೈಲಿನಲ್ಲಿ ಬಂದಿರೋ ಎಲ್ಲರನ್ನೂ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.. ಅಲ್ಲದೇ, ಇಂದು ಕೂಡ ಮುಂಬೈನಿಂದ ಗದಗಕ್ಕೆ ಮತ್ತೊಂದು ರೈಲು ಆಗಮಿಸಿಲಿದೆ. ಈ ಟ್ರೈನ್ ವಿಜಯಪುರ ಮಾರ್ಗದಲ್ಲಿ ಆಗಮಿಸಿದ ಬಾಗಲಕೋಟೆ ತಲುಪಿ ಬಳಿಕ ಗದಗಕ್ಕೆ ಎಂಟ್ರಿ ಕೊಡ್ತಿದೆ. ಇದ್ರಿಂದ ಈ 3 ಜಿಲ್ಲೆಗಳಲ್ಲಿ ಬಾಂಬೆ ಬಾಂಬ್​ ಬ್ಲಾಸ್ಟ್ ಆಗೋ ಭಯ ಆವರಿಸಿದೆ. ಕರುನಾಡಲ್ಲಿ ಕೊರೊನಾ ಕಾಡ್ಗಿಚ್ಚಿನಂತೆ ಹಬ್ಬೋ ಭಯ ಹೆಚ್ಚಾಗ್ತಿದೆ.

ಒಟ್ನಲ್ಲಿ ಕೊರೊನಾ ಹಾಟ್​​​ಸ್ಪಾಟ್ ಆಗಿರೋ ಮುಂಬೈನಿಂದ ಜನರು ಕರುನಾಡಿಗೆ ಹೆಜ್ಜೆ ಇಡ್ತಿರೋದು ದೊಡ್ಡ ಕಂಟಕವನ್ನೇ ತಂದೊಡ್ಡೋದು ಫಿಕ್ಸ್ ಆದಂತಿದೆ. ಟ್ರೈನ್​ಗಳಲ್ಲಿ ಹೊತ್ತು ತರ್ತಿರೋ ಬಾಂಬೆ ಸೋಂಕಿನ ಬಾಂಬ್ ಸಾವಿರ ಲೆಕ್ಕದಲ್ಲಿ ಸ್ಫೋಟಗೊಳ್ಳೋ ಕಾಲ ದೂರವಿಲ್ಲ ಅನ್ನಿಸ್ತಿದೆ. ಅದೇನೆ ಆಗ್ಲಿ ಮುಂಬೈಂದು ಬಂದು ಕರುನಾಡಲ್ಲಿ ಸ್ಫೋಟಗೊಳ್ತಿರೋ ಕೊರೊನಾ ಸೋಂಕಿನ ಸುನಾಮಿಯನ್ನ ಹೇಗೆ ತಡೀತಾರೆ ಅನ್ನೋದೆ ದೊಡ್ಡ ಯಕ್ಷಪ್ರಶ್ನೆಯಾಗಿದೆ. ರಾಜ್ಯದ ಜನ ಮುಂದೇನ್ ಕಥೆ ಅಂತ ದಿಕ್ಕೆಟ್ಟು ಕೂತಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more