Omicron: ರಾಜ್ಯದಲ್ಲಿ ಇಂದು ಒಂದೇ ದಿನ 23 ಮಂದಿಗೆ ಓಮಿಕ್ರಾನ್​​ ಸೋಂಕು

Omicron: ರಾಜ್ಯದಲ್ಲಿ ಇಂದು ಒಂದೇ ದಿನ 23 ಮಂದಿಗೆ ಓಮಿಕ್ರಾನ್​​ ಸೋಂಕು
ಸಾಂಕೇತಿಕ ಚಿತ್ರ

ಇಂದು ಒಂದೇ ದಿನ ರಾಜ್ಯದಲ್ಲಿ 23 ಮಂದಿಗೆ ಮಾರಕ ಓಮಿಕ್ರಾನ್​ ಸೋಂಕು ದೃಢಪಟ್ಟಿವೆ. ಈ ಕುರಿತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್​ ಮೂಲಕ ತಿಳಿಸಿದ್ದಾರೆ. 

TV9kannada Web Team

| Edited By: Pavitra Bhat Jigalemane

Dec 31, 2021 | 5:52 PM

ಹೊಸ ವರ್ಷದ ಆರಂಭದಲ್ಲೇ ರಾಜ್ಯದಲ್ಲಿ ಓಮಿಕ್ರಾನ್​ ಸ್ಫೋಟಗೊಂಡಿದೆ. ಈಗಾಗಲೇ ರಾಜ್ಯದಲ್ಲಿ ಹೊಸ ವರ್ಷದ ತಯಾರಿ ಆರಂಭವಾಗಿದೆ. ಸೋಂಕು ಹರಡದಂತೆ ತಡೆಯಲು ನಿಯಮಗಳನ್ನೂ ಮಾಡಲಾಗಿದೆ. ಆದರೆ ಇಂದು ಒಂದೇ ದಿನ ರಾಜ್ಯದಲ್ಲಿ 23 ಮಂದಿಗೆ ಮಾರಕ ಓಮಿಕ್ರಾನ್​ ಸೋಂಕು ದೃಢಪಟ್ಟಿವೆ. ಈ ಕುರಿತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್​ ಮೂಲಕ ತಿಳಿಸಿದ್ದಾರೆ.  ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ 50 ರ ಗಡಿ ದಾಟಿದೆ. ಅಮೆರಿಕ, ಯುರೋಪ್​​ನಿಂದ ಬಂದಿದ್ದ ಪ್ರಯಾಣಿಕರಿಗೆ ಓಮಿಕ್ರಾನ್​ ಸೋಂಕು ತಗುಲಿದೆ. ವಿದೇಶಗಳಿಂದ ಬಂದ 19 ಮಂದಿ ಪ್ರಯಾಣಿಕರಿಗೆ ಸೋಂಕು ತಗುಲಿದೆ ಎಂದು  ಟ್ವಿಟರ್​ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಎರಡು ವರ್ಷದ ಮಗು ಸೇರಿ 23 ಜನರಿಗೆ ಒಮಿಕ್ರಾನ್ ದೃಢಪಟ್ಟಿದೆ. ಡಿ.21ರಂದು ಕಾಂಗೋದಿಂದ ಬಂದಿದ್ದ 49 ವರ್ಷದ ವ್ಯಕ್ತಿ ಹಾಗೂ ಡಿ.22ರಂದು UAEನಿಂದ 42 ವರ್ಷದ ಮಹಿಳೆಗೆ ಸೋಂಕು ತಗುಲಿದೆ.  ಡಿ.23ರಂದು ತಾಂಜೇನಿಯಾದಿಂದ ಬಂದಿದ್ದ  2 ವರ್ಷದ ಮಗು ಹಾಗೂ 33 ವರ್ಷದ ಮಹಿಳೆಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಡಿ.24ರಂದು  ಅಮೆರಿಕದಿಂದ ಬಂದಿದ್ದ 15 ವರ್ಷದ ಬಾಲಕ, ನೈಜೀರಿಯಾದಿಂದ ಬಂದಿದ್ದ 47 ವರ್ಷದ ಪುರುಷ, ಡೆನ್ಮಾರ್ಕ್​​ನಿಂದ ಬಂದಿದ್ದ 33 ವರ್ಷದ ವ್ಯಕ್ತಿ ಸೋಂಕು ತಗುಲಿದೆ. ಇನ್ನು ಡಿ.25ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಮಹಿಳೆ,  ಅಮೆರಿಕದಿಂದ ಬಂದಿದ್ದ ಇಬ್ಬರು ಯುವತಿಗೆ ಸೇರಿ ದುಬೈನಿಂದ ಬಂದಿದ್ದ 19 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಇದರ ಜತೆಗೆ ಡಿ.26ರಂದು USನಿಂದ  ಬಂದ 12 ವರ್ಷದ ಬಾಲಕಿಗೆ ಹಾಗೂ USನಿಂದ ಬಂದ  45 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಇನ್ನು ರಾಜ್ಯದಲ್ಲಿ ಕೊರೋನಾ ಅಬ್ಬರ ಕೂಡ ಮುಂದುವರೆದಿದೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್​ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಕೊಡಗು ಜಿಲ್ಲೆಯ ಮಡಿಕೇರಿಯ ಸಂತ ಜೋಸೆಫ್ ಶಾಲೆಯಲ್ಲಿ ಕೊರೊನಾ ಸ್ಪೋಟಗೊಂಡಿದ್ದು, ಶಾಲೆಯ 10 ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿದೆ. 9 ನೇ ತರಗತಿಯ 58 ವಿದ್ಯಾರ್ಥಿಗಳಲ್ಲಿ ಹತ್ತು ಮಕ್ಕಳಿಗೆ ಪಾಸಿಟಿವ್ ಬಂದಿದ್ದು, ಉಳಿದ 600 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಕೈಗೊಳ್ಳಲಾಗಿದೆ. ಜತೆಗೆ ಶಾಲೆಯ 20 ಸಿಬ್ಬಂದಿಗಳಿಗೂ ಕೋವಿಡ್ ಟೆಸ್ಟ್ ಮಾಡಲಾಗಿದೆ. ಶಾಲೆಗೆ ಕೊಡಗು ಡಿಎಚ್ ಓ ಡಾ. ವೆಂಕಟೇಶ್ ಭೇಟಿ, ಮತ್ತಷ್ಟು ಪಾಸಿಟಿವ್ ಬಂದರೆ ಶಾಲೆ ಬಂದ್ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದಿದ್ದಾರೆ. ಈ ಕುರಿತು  ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada