AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ: ಕರ್ನಾಟಕದ ಐವರು ಸೇರಿ 6 ಜನ ಸಾವು

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಬದರಿನಾಥ ಧಾಮದಿಂದ ಹಿಂತಿರುಗುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದುರಂತದಲ್ಲಿ ಆರು ಜನರ ಪೈಕಿ ಐವರು ಸಾವನ್ನಪ್ಪಿದವರು ಕರ್ನಾಟಕದವರಾಗಿದ್ದು, ಒಬ್ಬರು ಸಿಸಿಬಿ ಇನ್ಸ್​ಪೆಕ್ಟರ್ ಹಾಗೂ ಇನ್ನುಳಿದ ನಾಲ್ವರು ವಕೀಲರು ತಿಳಿದುಬಂದಿದೆ.

ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ: ಕರ್ನಾಟಕದ ಐವರು ಸೇರಿ 6 ಜನ ಸಾವು
ಸಿಸಿಬಿ ಇನ್ಸ್​ಪೆಕ್ಟರ್​ ಅರುಣ್ ಸಾಲಂಕೆ
ರಮೇಶ್ ಬಿ. ಜವಳಗೇರಾ
|

Updated on:Oct 30, 2026 | 4:51 PM

Share

ಬೆಂಗಳೂರು, ಅಕ್ಟೋಬರ್ 30): ಉತ್ತರಾಖಂಡದ ಬದರಿನಾಥ ಧಾಮದಿಂದ ಹಿಂತಿರುಗುತ್ತಿದ್ದ ಹೆಲಿಕಾಪ್ಟರ್ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಟ್ರಾನ್ಸ್ ಭಾರತ್ ಕಂಪನಿ ಒಡೆತನದ VT-HCX ಸಂಖ್ಯೆಯ ಹೆಲಿಕಾಪ್ಟರ್​​, ಇಂದು (ಅಕ್ಟೋಬರ್ 30) ಮಧ್ಯಾಹ್ನ ಹವಾಮಾನ ವೈಪರೀತ್ಯದಿಂದ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ಪೈಲಟ್ ಹಿಮಾಂಶು ಹಾಗೂ ಬೆಂಗಳೂರು ಮೂಲದ ಐವರು ಸಾವನ್ನಪ್ಪಿದ್ದಾರೆ. ಬೆಂಗಳೂರು ಮೂಲದ ಪ್ರತಾಪ್​, ಅರುಣ್, ಶಂಕರ್ ಗೌಡ, ಕೆ.ಸುಧೀರ್, ಹೆಚ್​.ಎಸ್.ನಟರಾಜ್ ಮೃತ ದುರ್ದೈವಿಗಳು.

ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿಮ ಐವರು ಸಾವು

ಬೆಂಗಳೂರಿನ ಸಿಸಿಬಿ ಇನ್ಸ್​ಪೆಕ್ಟರ್ ಆಗಿರುವ​ ಅರುಣ್ ಸಾಲಂಕೆ ಹಾಗೂ ವಕೀಲರಾದ ಸುಧೀರ್, ಶಂಕರೇಗೌಡ ಹೆಚ್​.ಎಸ್​.ನಟರಾಜ್ ಹಾಗೂ ಪ್ರತಾಪ್ ಎನ್ನುವರು ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದರು. ಆದ್ರೆ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಬದರಿನಾಥ ಧಾಮದಿಂದ ಹಿಂತಿರುಗುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿದ್ದು, ಈ ದುರಂತದಲ್ಲಿ ಪೈಲಟ್ ಸೇರಿ ಈ ಐದು ಮಂದಿ ಸಹ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Joshimath Helicopter Crash: ಉತ್ತರಾಖಂಡದ ಜೋಶಿಮಠದ ಬಳಿ 6 ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ

ಯಾರು ಈ ಅರುಣ್ ಸಾಲುಂಕೆ?

2007ನೇ ಬ್ಯಾಚ್ ನ ಅಧಿಕಾರಿಯಾಗಿರುವ ಅರುಣ್ ಸಾಲುಂಕೆ, ಬೆಂಗಳೂರಿನ ಸಿಸಿಬಿ ಇನ್ಸ್​​ಪೆಕ್ಟರ್ ಆಗಿದ್ದು, ರಾಮಮೂರ್ತಿ ನಗರದಲ್ಲಿ ವಾಸಿಸುತ್ತಿದ್ದರು. ಇಂದಿರಾನಗರ, ಬಾಣಸವಾಡಿ, ಸಿಸಿಬಿ ಸೇರಿದಂತೆ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಸಿಸಿಬಿಯಲ್ಲಿ ಇನ್ಸ್ಪೆಕ್ಟರ್ ಆಗಿದ್ದರು. ಇನ್ನು ಮೃತ ಅರುಣ್ ಗೆ ಇಬ್ಬರು ಮಕ್ಕಳಿದ್ದಾರೆ.

ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಸಿಇಒ ಪ್ರತೀಕ್ ಜೈನ್ ಪ್ರತಿಕ್ರಿಯಿಸಿದ್ದು, “ಇಂದು ಮಧ್ಯಾಹ್ನ 1.14ಕ್ಕೆ ಬದರಿನಾಥದಿಂದ ಸಹಸ್ತ್ರಧಾರಾ ಹೆಲಿಪೋರ್ಟ್ ಗೆ ಹೆಲಿಕಾಪ್ಟರ್ ಹೊರಟಿದೆ. ಅದು ಜೋಶಿಮಠ ಕಣಿವೆಯನ್ನು ದಾಟುತ್ತಿದ್ದಾಗ, ಅದರ ಚಲನವಲನಗಳನ್ನು ಗಮನಿಸಲು ನಾವು ಬಳಸುವ ಟ್ರ್ಯಾಕಿಂಗ್ ಸಿಸ್ಟಮ್ ನಿಂದ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ನಮಗೆ ಕೆಲವು ಸ್ಥಳೀಯ ಮಾಹಿತಿಯೂ ಲಭ್ಯವಾಗಿದೆ.

ಹೆಲಿಕಾಪ್ಟರ್ ನಲ್ಲಿ ಪೈಲಟ್ ಮತ್ತು ಐವರು ಪ್ರಯಾಣಿಕರು ಸೇರಿದಂತೆ ಒಟ್ಟು ಆರು ಜನರಿದ್ದರು. ಈ ಐವರು ಪ್ರಯಾಣಿಕರು ಬೆಂಗಳೂರಿನವರು ಎಂದು ವರದಿಯಾಗಿದೆ. ನಾವು ಪ್ರಸ್ತುತ ಈ ವಿವರಗಳನ್ನು ಸಹ ಪರಿಶೀಲಿಸುತ್ತಿದ್ದೇವೆ. ಹೆಲಿಕಾಪ್ಟರ್ ಇರುವ ನಿಖರ ಸ್ಥಳವನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಆದಾಗ್ಯೂ ಚಮೋಲಿ ಜಿಲ್ಲಾಡಳಿತದ ಸಮನ್ವಯದೊಂದಿಗೆ ಶೋಧ ಮತ್ತು ರಕ್ಷಣಾ ತಂಡಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಸೇನಾ ತುಕಡಿಯ ಜೊತೆಗೆ ಎಸ್ ಡಿಆರ್ ಎಫ್ (SDRF) ಪಡೆಯನ್ನೂ ಸಹ ನಿಯೋಜಿಸಲಾಗಿದೆ. ಹವಾಮಾನ ತಿಳಿಯಾದ ತಕ್ಷಣ, ನಾಪತ್ತೆಯಾಗಿರುವ ಹೆಲಿಕಾಪ್ಟರ್ ಅನ್ನು ಪತ್ತೆಹಚ್ಚಲು ನಾವು ಇಲ್ಲಿಂದ ಮತ್ತೊಂದು ರಕ್ಷಣಾ ಹೆಲಿಕಾಪ್ಟರ್ ಅನ್ನು ಕಳುಹಿಸುತ್ತೇವೆ” ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Fri, 30 October 26

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More