ಬಾಗಲಕೋಟೆಯ ಭೂ ದಾಖಲೆ ಉಪ ನಿರ್ದೇಶಕನ ಮನೆ, ಕಚೇರಿ ಮೇಲೆ ಎಸಿಬಿ ಆಫೀಸರ್ಸ್ ರೇಡ್ ಮಾಡಿದ್ದಾರೆ. ಬಾಗಲಕೋಟೆಯಲ್ಲದೆ ವಿಜಯಪುರದಲ್ಲೂ ಇನ್ಚಾರ್ಜ್ ಆಗಿರೋ ಗೋಪಾಲ ಮಾಲಗತ್ತಿಯ ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಅಲ್ಲದೆ, ಕೊಪ್ಪಳದಲ್ಲೂ ರೆಕಾರ್ಡ್ಸ್ಗಳನ್ನ ಎಸಿಬಿ ತಂಡ ತಪಾಸಣೆಗೊಳಪಡಿಸಿದೆ.
ಕಾರು ಡಿಕ್ಕಿ, ಇಬ್ಬರು ಸವಾರರು ಬಲಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹೊನ್ನಳ್ಳಿ ಸಮೀಪ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ಖಾಶೀಮ್ ಗೌಳಿ, ಬಾಬು ಗೌಳಿ ಅನ್ನೋರು ಸ್ಥಳದಲ್ಲೇ ಅಸುನೀಗಿದ್ದು, ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಲಿಂಗಸಗೂರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಂಗಳಮುಖಿರ ಮೇಲೆ ಹಲ್ಲೆ ದಾವಣಗೆರೆಯಲ್ಲಿ ಮಂಗಳಮುಖಿಯರ ಮೇಲೆ ಮತ್ತೊಂದು ಮಂಗಳಮುಖಿಯರ ಗ್ಯಾಂಗ್ ಹಲ್ಲೆಗೈದಿದೆ. ಬೆಂಗಳೂರಿನ ಬನಶಂಕರಿಯ ಮಂಗಳಮುಖಿಯರು ‘ನಾವು ಹೇಳಿದಂತೆ ಕೇಳಬೇಕು’ ಅಂತಾ ಚೈತ್ರಾ, ವೀಣಾ ಅನ್ನೋರ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಜ್ಯೋತಿ ಗ್ಯಾಂಗ್ನಿಂದ ನಮ್ಮನ್ನ ರಕ್ಷಿಸಿ ಅಂತಾ ಎಸ್ಪಿ ಹಲ್ಲೆಗೊಳಗಾದವ್ರು ಮನವಿ ಮಾಡಿದ್ದಾರೆ.
ಚಿರತೆ ದಾಳಿಗೆ ಕರು ಬಲಿ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾವಿನಕೆರೆಯಲ್ಲಿ ಚಿರತೆ ದಾಳಿಗೆ ಎಮ್ಮೆ ಕರುವೊಂದು ಬಲಿಯಾಗಿದೆ. ರೈತ ಮಾಲಿಂಗಪ್ಪ ಅನ್ನೋರ ಎಮ್ಮೆ ಕರುವನ್ನ ಕೊಟ್ಟಿಗೆಯಲ್ಲಿ ಬಿಗಿದಿದ್ರು. ಈ ವೇಳೆ ಚಿರತೆ ದಾಳಿ ನಡೆಸಿ ಕರುವನ್ನ ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಚಿರತೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ವಯಂ ನಿರ್ಬಂಧ ಹಾವೇರಿ ತಾಲೂಕಿನ ಗುತ್ತಲದ ಬಳಿಯಿರೋ ಅಂಬೇಡ್ಕರ್ ನಗರವನ್ನ ಸ್ಥಳೀಯರೇ ಸೀಲ್ ಮಾಡಿದ್ದಾರೆ. ವ್ಯವಸ್ಥಿತವಾಗಿ ಸೀಲ್ಡೌನ್ ಮಾಡಿಲ್ಲ ಅಂತಾ ಆರೋಪಿಸಿ ರಸ್ತೆಗೆ ಮುಳ್ಳು ಹಾಕಿ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಆಫೀಸರ್ಸ್ ವಿರುದ್ಧ ಆಕ್ರೋಶ ಹೊರ ಹಾಕಿ ಕೊರೊನಾ ತಡೆಗೆ ಮುಂದಾಗಿದ್ದಾರೆ.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. 70 ವರ್ಷದ ಚಿಣ್ಣಪ್ಪ ಎಂಬಾತನನ್ನ ಕಾಡಾನೆ ತುಳಿದು ಸಾಯಿಸಿದ್ದು, ಮೃತನ ಮನೆ ಸಮೀಪವೇ ಮೃತದೇಹ ಪತ್ತೆಯಾಗಿದೆ.
ಥಳಿತದ ವಿಡಿಯೋ ವೈರಲ್ ಕಲಬುರಗಿ ನಗರದ ಪಾರ್ಕ್ವೊಂದ್ರಲ್ಲಿ ಪುಡಿರೌಡಿಗಳು ಯುವಕನೋರ್ವನಿಗೆ ಥಳಿಸಿದ್ದ ದೃಶ್ಯ ವೈರಲ್ ಆಗಿದೆ. ಓರ್ವ ಯುವತಿಯನ್ನ ಲವ್ ಮಾಡಿದ್ದಕ್ಕೆ ಕಳೆದ ಜನವರಿಯಲ್ಲಿ ಯಾದಗಿರಿ ಜಿಲ್ಲೆ ಸುರಪುರ ಮೂಲದ ಯುವಕನಿಗೆ ರೌಡಿಗಳು ಥಳಿಸಿದ್ರು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಥಳಿಸಿರೋ ವಿಡಿಯೋ ವೈರಲ್ ಆಗಿದೆ.
ಸಿಸಿಟಿವಿಯಲ್ಲಿ ಸರಗಳ್ಳರು ಬೆಂಗಳೂರು ಹೊರವಲಯಗಳಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಸೋಲದೇವನಹಳ್ಳಿ, ಮಾದನಾಯಕನಹಳ್ಳಿ, ಪೀಣ್ಯ, ಸೇರಿ ನೆಲಮಂಗಲ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಸರಗಳ್ಳತನ ಪ್ರಕರಣ ದಾಖಲಾಗಿದೆ. ಪಲ್ಸರ್ ಬೈಕ್ನಲ್ಲಿ ಬರೋ ಖದೀಮರು ಸರ ಎಗರಿಸುತ್ತಿದ್ದು, ಬೀಟ್ ಹೆಚ್ಚಿಸುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ.